30 ವರ್ಷ ವಯಸ್ಸಿನ ನಂತರ ಪುರುಷರು ತಮ್ಮ ಚರ್ಮದ ಕಾಂತಿ ಕಾಪಾಡಲು ನೀಡಬೇಕು ಗಮನ

ಮಹಿಳೆಯರಿಗೆ ಹೋಲಿಸಿದರೆ ಪುರುಷರು ಚರ್ಮದ ಆರೋಗ್ಯದ ಬಗ್ಗೆ ಗಮನ ಹರಿಸುವುದು ಕಡಿಮೆ. 30 ವರ್ಷದ ನಂತರ ಪುರುಷರ ಚರ್ಮದ ಕಾಂತಿ ಕಡಿಮೆಯಾಗುತ್ತದೆ.

ಹಾಗಾಗಿ ಪುರುಷರು ಸಹ ತಮ್ಮ ಚರ್ಮದ ಕಾಂತಿ ಕಾಪಾಡಲು ಗಮನ ನೀಡಬೇಕು.

ಹುಡುಗರ ಚರ್ಮವು ಹುಡುಗಿಯರಿಗಿಂತ ಹೆಚ್ಚು ಜಿಡ್ಡು ಮತ್ತು ಒರಟಾಗಿರುತ್ತದೆ. ಹೀಗಾಗಿ ಪುರುಷರ ಚರ್ಮವನ್ನು ಮೃದುಗೊಳಿಸಲು ಸ್ಕ್ರಬ್ಬಿಂಗ್ ಬಹಳ ಮುಖ್ಯ. ಸ್ಕ್ರಬ್ಬಿಂಗ್ ಒಣ  ಚರ್ಮ ತೆಗೆದು ಹಾಕುತ್ತದೆ. ವಾರಕ್ಕೆ ಎರಡು ಬಾರಿ ಸ್ಕ್ರಬ್ ಮಾಡಿದರೆ ಒಣ ಚರ್ಮ ಹೋಗಲಾಡಿಸಿ ಚರ್ಮ ಹೊಳೆಯುವಂತೆ ಮಾಡಬಹುದು.

ಮುಖದ ಕಲೆಗಳನ್ನು ಕಡಿಮೆ ಮಾಡಲು ಟೋನರ್ ಅನ್ನು ಹುಡುಗಿಯರು ಹೆಚ್ಚಾಗಿ ಬಳಸುತ್ತಾರೆ. ಪುರುಷರಿಗೂ ಸಹ  ಮುಖದ ಮೇಲೆ ಕಲೆಗಳು ಹೆಚ್ಚಿರುತ್ತವೆ. ನಿಮ್ಮ ಮುಖದ ಮೇಲೂ ಕಲೆಗಳು ಹೆಚ್ಚಿದ್ದರೆ ಮಲಗುವ ಮುನ್ನ ಟೋನರ್ ಅನ್ನು ಹಚ್ಚಿ ಐದರಿಂದ ಹತ್ತು ನಿಮಿಷದ ನಂತರ ತೊಳೆಯಿರಿ. ಸ್ಕಿನ್ ಟೋನರ್ ಬಳಸುವುದರಿಂದ 15 ದಿನಗಳಲ್ಲಿ ಮುಖದಲ್ಲಿನ  ಕಲೆಗಳು ಕಡಿಮೆಯಾಗುತ್ತವೆ.

ಕೆಲವು ಹುಡುಗರು ತಮ್ಮ ಮನೆಯಲ್ಲಿ ಹೆಣ್ಣುಮಕ್ಕಳು ಬಳಸುವ ಮೇಕಪ್ ಉತ್ಪನ್ನವನ್ನು ಬಳಸುತ್ತಾರೆ. ಹುಡುಗಿಯರ ಚರ್ಮವು ತುಂಬಾ ಮೃದುವಾಗಿರುತ್ತದೆ. ಹಾಗಾಗಿ ಹುಡುಗಿಯರ ಮೇಕಪ್ ಉತ್ಪನ್ನಗಳ ಬಳಕೆ ಹುಡುಗರ ಚರ್ಮದ ಮೇಲೆ ಹೆಚ್ಚಿನ ವ್ಯತ್ಯಾಸ ನೀಡುವುದಿಲ್ಲ. ಪುರುಷರು  ತಮ್ಮ ಚರ್ಮಕ್ಕೆ ಅನುಗುಣವಾಗಿ ಮೇಕಪ್ ಉತ್ಪನ್ನಗಳನ್ನು ಬಳಸುವುದು ಉತ್ತಮ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read