ದಿನಾ ಸಾಂಬಾರು, ಪಲ್ಯ ಮಾಡಿ ಬೇಜಾರು ಎನ್ನುವವರು ಒಮ್ಮೆ ಈ ರುಚಿಕರವಾದ ಮಸಾಲೆ ರೈಸ್ ಬಾತ್ ಅನ್ನು ಮಾಡಿ ಸವಿಯಿರಿ. ಒಂದಷ್ಟು ತರಕಾರಿಗಳು ಇದ್ದರೆ ಥಟ್ಟಂತ ಮಾಡಿಬಿಡಬಹುದು. ಮಾಡುವ ವಿಧಾನ ಇಲ್ಲಿದೆ ನೋಡಿ.
3 ಕಪ್ ಅನ್ನ, 2 ಟೇಬಲ್ ಸ್ಪೂನ್-ಬೆಳ್ಳುಳ್ಳಿ ಪೇಸ್ಟ್, 1 ಟೇಬಲ್ ಸ್ಪೂನ್-ಕೆಂಪುಮೆಣಸಿನ ಪೇಸ್ಟ್, ½ ಕಪ್-ತೆಂಗಿನಕಾಯಿ ಹಾಲು, ¼ ಕಪ್-ಚಿಕ್ಕದ್ದಾಗಿ ಕತ್ತರಿಸಿಕೊಂಡು ಬೇಯಿಸಿದ ಬೀನ್ಸ್, ¼ ಕಪ್ ಬೇಯಿಸಿದ ಬಟಾಣಿ, ¼ ಕಪ್-ಬೇಯಿಸಿದ ಕಾರ್ನ್, ಎಣ್ಣೆ-2 ಟೇಬಲ್ ಸ್ಪೂನ್, ಉಪ್ಪು-ರುಚಿಗೆ ತಕ್ಕಷ್ಟು.
ಮೊದಲಿಗೆ ಒಂದು ಪ್ಯಾನ್ ಗೆ ಎಣ್ಣೆ ಹಾಕಿ ಅದು ಬಿಸಿಯಾಗುತ್ತಲೆ ಬೆಳ್ಳುಳ್ಳಿ ಪೇಸ್ಟ್, ಕೆಂಪು ಮೆಣಸಿನ ಪೇಸ್ಟ್ ಹಾಕಿ 3 ನಿಮಿಷಗಳ ಕಾಲ ಕೈಯಾಡಿಸಿ. ನಂತರ ಇದಕ್ಕೆ ತೆಂಗಿನಕಾಯಿ ಹಾಲು ಬೇಯಿಸಿಟ್ಟುಕೊಂಡ ತರಕಾರಿ, ಕಾರ್ನ್, ಉಪ್ಪು ಹಾಕಿ. ತೆಂಗಿನಕಾಯಿ ಹಾಲು ಚೆನ್ನಾಗಿ ಕುದಿಯಲಿ ನಂತರ ಇದಕ್ಕೆ ಬೇಯಿಸಿಟ್ಟುಕೊಂಡ ಅನ್ನ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. 10 ನಿಮಿಷ ಚೆನ್ನಾಗಿ ಆವಿಯಲ್ಲಿ ಬೇಯಲು ಬಿಡಿ. ರುಚಿಕರವಾದ ಮಸಾಲೆ ರೈಸ್ ಸವಿಯಲು ಸಿದ್ಧ.