ಅಂದದ ಉಗುರಿಗೆ ಸುಲಭವಾಗಿ ಮಾಡಿ ಚೆಂದದ ಚಿತ್ತಾರ

ಉಗುರೆಂಬ ಕ್ಯಾನ್ವಾಸ್ ಮೇಲೆ ಬಣ್ಣ ಬಣ್ಣದ ಚಿತ್ತಾರಗಳನ್ನು ಬಿಡಿಸುವುದು ಟ್ರೆಂಡ್ ಆಗಿದೆ. ಚಿತ್ರ ಬಿಡಿಸಲು ಆಸಕ್ತಿ ಉಳ್ಳವರು ಇಲ್ಲವೇ ಉಗುರನ್ನು ವಿಪರೀತ ಇಷ್ಟಪಡುವವರು ಈ ಕಲೆಯಲ್ಲಿ ಆಸಕ್ತಿ ತೋರುತ್ತಾರೆ. ಇದನ್ನು ಕಲಿಯುವ ಸರಳ ಸುಲಭ ಉಪಾಯಗಳು ಇಲ್ಲಿವೆ.

ಉಗುರಿಗೆ ಮೊದಲು ಬಿಳಿ ಅಥವಾ ತಿಳಿ ಬಣ್ಣದ ನೇಲ್ ಪಾಲಿಶ್ ಹಚ್ಚಿ. ಅದರ ಮೇಲೆ ಸ್ಟಿಕರ್ ಅಥವಾ ಸ್ಟೆನ್ಸಿಲ್ ಇಟ್ಟು ಬಳಿಕ ಗಾಢಬಣ್ಣದ ನೇಲ್ ಪಾಲಿಶ್ ಹಚ್ಚಿ. ಒಣಗಿದ ಬಳಿಕ ಅಂಟಿಸಿದ ಸ್ಟಿಕರ್ ತೆಗೆದರೆ ಅಂದದ ಚಿತ್ತಾರ ನಿಮ್ಮ ಕೈಯಲ್ಲಿ ಮೂಡಿರುತ್ತದೆ.

ಉಗುರಿನ ಸುತ್ತ ಗಮ್ ಟೇಪ್ ಹಚ್ಚಿ. ಪಾತ್ರೆಯಲ್ಲಿ ನೀರು ತೆಗೆದುಕೊಂಡು ಅದಕ್ಕೆ ಬೇರೆ ಬೇರೆ ಬಣ್ಣದ ಎರಡು ಹನಿ ನೇಲ್ ಪಾಲಿಶ್ ಹಾಕಿ. ಕೈ ಬೆರಳುಗಳನ್ನು ಮುಳುಗಿಸಿ ತೆಗೆಯಿರಿ. ಗಮ್ ಟೇಪ್ ತೆಗೆದು ನೋಡಿದರೆ ಅಂದವಾದ ಚಿತ್ತಾರ ಮೂಡಿರುತ್ತದೆ. ಈ ಮೂಲಕ ಉಗುರಿನಲ್ಲಿ ಚಿತ್ತಾರ ಬಿಡಿಸುವ ಕಲೆಯನ್ನು ಕಲಿಯಬಹುದು.

ಎರಡು ಬಣ್ಣ ಹಚ್ಚುವ ಸಂದರ್ಭವಿದ್ದಾಗ ಒಂದು ಒಣಗಿದ ಬಳಿಕವೇ ಇನ್ನೊಂದು ಬಣ್ಣ ಹಚ್ಚಿ. ಜೊತೆಜೊತೆಗೇ ಹಚ್ಚಿದರೆ ಅಂದ ಹಾಳಾಗಿ ಹೋದೀತು. ಹಾಗಾದರೆ ತಡ ಏಕೆ ಇಂದೇ ಪ್ರಯತ್ನ ಆರಂಭಿಸಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read