ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವು ಕೆಲಸಗಳನ್ನು ಮಾಡಬಾರದೆಂದು ಹೇಳಲಾಗಿದೆ. ಸಂತೋಷವಾಗಿ ಮತ್ತು ಆರೋಗ್ಯವಾಗಿರಲು ಜನರು ಸದಾ ಬಯಸ್ತಾರೆ. ಆದ್ರೆ ಗೊತ್ತಿಲ್ಲದೆ ಮಾಡುವ ಕೆಲಸಗಳಿಂದ ಯಡವಟ್ಟಾಗುತ್ತದೆ. ಸದಾ ಸುಖ, ಸಂತೋಷ ಬಯಸುವವರು ಎಂದೂ ಈ ಕೆಲಸ ಮಾಡಬಾರದು.
ಸ್ಮಶಾನದಲ್ಲಿ ನಗಬಾರದು. ಬಡತನ ಮತ್ತು ಅಸಹಾಯಕತೆಯನ್ನು ಗೇಲಿ ಮಾಡಬಾರದು. ಅಪವಿತ್ರವಾಗಿ ಧರ್ಮಗ್ರಂಥ ಓದಬಾರದು. ಬಾಗಿಲಲ್ಲಿ ಕುಳಿತುಕೊಳ್ಳಬಾರದು. ಹಾಗೆ ಹೊಸ್ತಿಲ ಮೆಟ್ಟಿಲ ಮೇಲೆ ನಿಲ್ಲಬಾರದು. ಮಲವಿಸರ್ಜನೆ ಮಾಡುವಾಗ ಮಾತನಾಡಬಾರದು. ಬೆಳ್ಳುಳ್ಳಿ ಅಥವಾ ಈರುಳ್ಳಿಯ ಸಿಪ್ಪೆಯನ್ನು ಸುಡಬಾರದು.
ಕೈ ತೊಳೆಯದೆ ತಿನ್ನಬಾರದು. ಶೂಗಳು ಮತ್ತು ಚಪ್ಪಲಿಗಳನ್ನು ಅದಲು ಬದಲಾಗಿ ಹಾಕಬಾರದು. ನದಿ, ಕೊಳದ ದಡದಲ್ಲಿ ಮೂತ್ರ ವಿಸರ್ಜನೆ ಮಾಡಬಾರದು. ಹಸುವನ್ನು ಒದೆಯಬಾರದು. ಮಧ್ಯರಾತ್ರಿಯಲ್ಲಿ ತಿನ್ನಬಾರದು. ಕೊಳಕು ಹಾಸಿಗೆಯಲ್ಲಿ ಮಲಗಬಾರದು. ಧರ್ಮವನ್ನು ಅಪಹಾಸ್ಯ ಮಾಡುವುದು ಅಥವಾ ಅವಮಾನಿಸುವುದು ಮಾಡಬಾರದು. ಊಟ ಮಾಡಿದ ಪ್ಲೇಟ್ ನಲ್ಲಿ ಕೈ ತೊಳೆಯಬಾರದು. ಬೆಳಿಗ್ಗೆ ಬಾಯಿ ತೊಳೆಯದೆ ನೀರು ಅಥವಾ ಚಹಾ ಕುಡಿಯಬಾರದು.