ಕೈ ಬೆರಳುಗಳು ಅಂದವಾಗಿ ಕಾಣಬೇಕೆಂಬುದು ಎಲ್ಲರ ಬಯಕೆಯೂ ಹೌದು. ನೀಳವಾಗಿ ಇಳಿಬಿಟ್ಟ ಉಗುರುಗಳು ಲಲನೆಯರ ಕೈಗೊಂದು ಬೇರೆಯೇ ಆದ ಸೌಂದರ್ಯವನ್ನು ನೀಡುತ್ತವೆ. ಹಾಗಾಗಿ ಅವುಗಳ ರಕ್ಷಣೆಯೂ ಅಷ್ಟೇ ಮುಖ್ಯ. ಯಾವ ಯಾವ ಸಂದರ್ಭಗಳಲ್ಲಿ ಎಂತಹ ನೈಲ್ ಪಾಲಿಶ್ ಹಾಕಬೇಕು ಎಂಬುದನ್ನು ತಿಳಿದುಕೊಂಡಿರುವುದು ಅಷ್ಟೇ ಮುಖ್ಯ.
ನೀವು ಅಚ್ಚ ಬಿಳುಪು ಬಣ್ಣದವರಾಗಿದ್ದರೆ ನಿಮಗೆ ಲೈಟ್ ಪಿಂಕ್ ಬಣ್ಣ ಹೆಚ್ಚಾಗಿ ಹೊಂದುತ್ತದೆ.
ನೀವು ಮಧ್ಯಮ ಬಣ್ಣ ಹೊಂದಿದ್ದರೆ ಲ್ಯಾವೆಂಡರ್, ಪೀಚ್, ಆರೇಂಜ್ ಬಣ್ಣ ನಿಮಗೆ ಸೂಕ್ತವಾಗಿ ಹೊಂದಿಕೊಳ್ಳುತ್ತದೆ.
ನಿಮ್ಮ ಬಣ್ಣ ಇನ್ನೂ ತುಸು ಡಾರ್ಕ್ ಇದ್ದರೆ ಮೆರೂನ್, ರೆಡ್, ಕಾಫಿ ಬಣ್ಣವನ್ನು ಆಯ್ದುಕೊಳ್ಳಿ. ಸಂಪೂರ್ಣ ಕಪ್ಪು ಬಣ್ಣದವರಿಗೆ ಮಿಂಟ್ ಬಣ್ಣ ಹೆಚ್ಚು ಹೊಂದುತ್ತದೆ.
ಶೇಡ್ಗಳನ್ನು ಬಳಸಿ ನೈಲ್ ಪಾಲಿಶ್ ಹಚ್ಚುವುದರಿಂದ ನಿಮ್ಮ ಕೈಯ ಸೌಂದರ್ಯ ಮತ್ತಷ್ಟು ಹೆಚ್ಚುತ್ತದೆ.
ಲೈಟ್ ನೀಲಿ ಬಣ್ಣವೂ ಬಹುತೇಕ ಎಲ್ಲಾ ವರ್ಗದವರಿಗೂ ಹೊಂದಿಕೆಯಾಗುವುದರಿಂದ ಅದನ್ನು ಪ್ರಯತ್ನಿಸಿ.
ಅಚ್ಚರಿಯೆಂದರೆ ಇತ್ತೀಚಿನ ದಿನಗಳಲ್ಲಿ ಧರಿಸಿದ ಉಡುಪಿನ ಬಣ್ಣದ ನೈಲ್ ಪಾಲಿಶ್ ಹಾಕುವ ಬದಲು ಅದರ ವಿರುದ್ಧ ಬಣ್ಣವನ್ನು ಆಯ್ದುಕೊಳ್ಳುವ ಟ್ರೆಂಡ್ ಹೆಚ್ಚಾಗಿದೆ.
ಹೀಗಾಗಿ ಅಯಾಕಾಲದ ಟ್ರೆಂಡ್ ನೊಂದಿಗೆ ಮುಂದುವರಿಯುವುದೇ ಜಾಣತನದ ಆಯ್ಕೆ.