HomeLatest News'ಬೇಕಿಂಗ್ ಸೋಡಾ'ದಿಂದ ಇದೆ ಹತ್ತು ಹಲವು ಉಪಯೋಗ

‘ಬೇಕಿಂಗ್ ಸೋಡಾ’ದಿಂದ ಇದೆ ಹತ್ತು ಹಲವು ಉಪಯೋಗ

ಬೇಕಿಂಗ್ ಸೋಡಾವನ್ನು ಅಡುಗೆಗೆ ನಾವೆಲ್ಲಾ ಉಪಯೋಗಿಸುತ್ತ ಇರುತ್ತೇವೆ. ಕೇಕ್ ಮಾಡುವಾಗ, ಬಿಸ್ಕೇಟ್ ಮಾಡುವಾಗ ಕೆಲವೊಮ್ಮೆ ಅಡುಗೆ ಮನೆಯ ವಸ್ತುಗಳ ಕ್ಲಿನಿಂಗ್ ಗೆ ಕೂಡ ಈ ಬೇಕಿಂಗ್ ಸೋಡಾ ಸಹಾಯಕಾರಿಯಾಗಿದೆ.

ಈ ಬೇಕಿಂಗ್ ಸೋಡಾ ಉಪಯೋಗಿಸಿಕೊಂಡು ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು. ಹೇಗೆ ಎಂಬುದಕ್ಕೆ ಇಲ್ಲಿದೆ ನೋಡಿ ಒಂದಷ್ಟು ಟಿಪ್ಸ್.

ಆಫೀಸ್ ಕೆಲಸಕ್ಕೆ ಹೋಗುವವರು ಅಥವಾ ಬೆವರಿನ ದುರ್ಗಂಧವನ್ನು ನಿವಾರಿಸಿಕೊಳ್ಳಲು ಡಿಯೋಡರೆಂಟ್ ಅನ್ನು ಉಪಯೋಗಿಸುತ್ತಿರುತ್ತೇವೆ. ಇದರ ಅತೀಯಾದ ಬಳಕೆಯಿಂದ ಕಂಕುಳ ಬಳಿ ಕಪ್ಪಾಗುತ್ತದೆ. ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಲು 1 ಟೀ ಸ್ಪೂನ್ ಬೇಕಿಂಗ್ ಸೋಡಾಕ್ಕೆ 1 ಟೇಬಲ್ ಸ್ಪೂನ್ ನೀರು ಸೇರಿಸಿ ಮಿಶ್ರಣ ತಯಾರಿಸಿಕೊಳ್ಳಿ. ಇದರಿಂದ ನಿಮ್ಮ ಕಂಕುಳ ಬಳಿ ನಿಧಾನಕ್ಕೆ ಮಸಾಜ್ ಮಾಡಿಕೊಳ್ಳಿ. 5 ನಿಮಿಷ ಬಿಟ್ಟು ಚೆನ್ನಾಗಿ ತೊಳೆಯಿರಿ ಇದರಿಂದ ಕಪ್ಪು ಕಲೆ, ವಾಸನೆ ಹೋಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನು ಮೊಡವೆ ಸಮಸ್ಯೆ ಇರುವವರು ಬೇಕಿಂಗ್ ಸೋಡಾಕ್ಕೆ ಸ್ವಲ್ಪ ನೀರು ಸೇರಿಸಿ ಈ ಮಿಶ್ರಣವನ್ನು ಮೊಡವೆ ಇದ್ದ ಜಾಗಕ್ಕೆ ಹಚ್ಚಿಕೊಳ್ಳಿ. ಒಣಗಿದ ನಂತರ ನೀರಿನಿಂದ ಮುಖ ತೊಳೆಯಿರಿ.

ಬೇಕಿಂಗ್ ಸೋಡಾಕ್ಕೆ ಸ್ವಲ್ಪ ತೆಂಗಿನೆಣ್ಣೆ ಸೇರಿಸಿಕೊಂಡು ನಿಧಾನಕ್ಕೆ ನಿಮ್ಮ ಮುಖಕ್ಕೆ ಮಸಾಜ್ ಮಾಡಿದರೆ ಒಳ್ಳೆಯ ಫೇಸ್ ವಾಶ್ ರೀತಿ ಕೆಲಸ ಮಾಡುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular