ಮೊಸರು ದೇಹದ ಆರೋಗ್ಯಕ್ಕೆ ಎಷ್ಟು ಒಳ್ಳೆಯದೋ ನಮ್ಮ ತ್ವಚೆಯ ಆರೋಗ್ಯಕ್ಕೂ ಅಷ್ಟೇ ಒಳ್ಳೆಯದು. ಮೊಸರನ್ನು ನಮ್ಮ ಮುಖಕ್ಕೆ ಬಳಸುವುದರಿಂದ ಮುಖದ ಕಾಂತಿ ಹೆಚ್ಚಿಸಿಕೊಳ್ಳಬಹುದು. ತ್ವಚೆಯ ಟ್ಯಾನ್ ಅನ್ನು ನಿವಾರಿಸುವಲ್ಲಿ ಇದು ಸಹಾಯಕಾರಿ. ಸುಲಭವಾಗಿ ನಮ್ಮ ಅಡುಗೆ ಮನೆಯಲ್ಲಿಯೇ ಸಿಗುವ ಮೊಸರಿನಿಂದ ಹೇಗೆಲ್ಲಾ ತ್ವಚೆಯ ರಕ್ಷಣೆ ಮಾಡಿಕೊಳ್ಳಬಹುದು ಎಂಬುದಕ್ಕೆ ಇಲ್ಲಿದೆ ನೋಡಿ ಮಾಹಿತಿ.
ಮೊಸರಿನಲ್ಲಿ ಲ್ಯಾಕ್ಟಿಕ್ ಆ್ಯಸಿಡ್ ಅಂಶ ಹೆಚ್ಚಿದೆ. ಇದರಲ್ಲಿ ವಿಟಮಿನ್ಸ್ ಹಾಗೂ ಮಿನರಲ್ಸ್ ಹೇರಳವಾಗಿದೆ. ಮುಖದ ಅಂದಕ್ಕೆ ಇದು ಹೇಳಿ ಮಾಡಿಸಿದ ಒಂದು ಸೌಂದರ್ಯ ವರ್ಧಕ ಎನ್ನಬಹುದು. 1 ದೊಡ್ಡ ಚಮಚ ಮೊಸರು ತೆಗೆದುಕೊಂಡು ಹತ್ತು ನಿಮಿಷಗಳ ಕಾಲ ನಿಮ್ಮ ಮುಖಕ್ಕೆ ನಿಧಾನವಾಗಿ ಮಸಾಜ್ ಮಾಡಿ. 10 ನಿಮಿಷ ಹಾಗೇ ಬಿಟ್ಟು ನಂತರ ಮುಖ ತೊಳೆದುಕೊಳ್ಳಿರಿ. ಇದರಿಂದ ನಿಮ್ಮ ಮುಖದ ರಂಧ್ರಗಳು ಮುಚ್ಚುತ್ತವೆ.
ಅರ್ಧ ಕಪ್ ತುರಿದ ಸೌತೆಕಾಯಿಗೆ 2 ದೊಡ್ಡ ಚಮಚ ಮೊಸರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ಪ್ಯಾಕ್ ಅನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ. ನಂತರ 20 ನಿಮಿಷ ಬಿಟ್ಟು ಮುಖ ತೊಳೆಯಿರಿ. ಇದು ಕೂಡ ಮುಖವನ್ನು ಹೈಡ್ರೇಟ್ ಆಗಿ ಇಡುತ್ತದೆ.
2 ಚಮಚ ಓಟ್ಸ್ ಪುಡಿ, 2 ಚಮಚ ಜೇನುತುಪ್ಪ, 2 ಚಮಚ ಮೊಸರು ಇವಿಷ್ಟನ್ನು ಚೆನ್ನಾಗಿ ಮಿಶ್ರಣ ಮಾಡಿ. ಮುಖವನ್ನು ಮೊದಲಿಗೆ ಚೆನ್ನಾಗಿ ತೊಳೆದುಕೊಂಡು ಈ ಮಿಶ್ರಣವನ್ನು ಹಚ್ಚಿಕೊಳ್ಳಿ. 20 ನಿಮಿಷ ಬಿಟ್ಟು ಮುಖ ತೊಳೆಯಿರಿ. ಇದು ಎಲ್ಲಾ ವಿಧದ ಚರ್ಮದವರಿಗೂ ಹೇಳಿ ಮಾಡಿಸಿದ್ದು.