ಪ್ರತಿನಿತ್ಯ ಮೂಸಂಬಿ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಸಾಕಷ್ಟು ಲಾಭವಿದೆ.
ಇದರಲ್ಲಿ ವಿಟಮಿನ್ ಸಿ ಇರುವುದರಿಂದ ತ್ವಚೆಯ ಕಾಂತಿ, ಕೂದಲಿನ ಬೆಳವಣಿಗೆಗೆ ಕೂಡ ತುಂಬಾ ಒಳ್ಳೆಯದು.
ಮಕ್ಕಳಿಗೆ ಇದನ್ನು ಮಾಡಿಕೊಡುವುದರಿಂದ ಅವರಲ್ಲಿನ ಆಯಾಸ, ಸುಸ್ತು ಕಡಿಮೆಯಾಗುತ್ತದೆ. ಮೂಸಂಬಿ ಜ್ಯೂಸ್ ಕುಡಿಯುವುದರಿಂದ ಆಗುವ ಲಾಭದ ಕುರಿತು ಇಲ್ಲಿದೆ ನೋಡಿ ಮಾಹಿತಿ.
ಮೂಸಂಬಿ ಜ್ಯೂಸ್ ನಲ್ಲಿ ವಿಟಮಿನ್ ಸಿ, ವಿಟಮಿನ್ ಎ, ಪೋಟ್ಯಾಷಿಯಂ. ಮೆಗ್ನಿಷಿಯಂ ಹೆಚ್ಚಿದೆ. ಜತೆಗೆ ಆ್ಯಂಟಿ ಆಕ್ಸಿಡೆಂಟ್ ಕೂಡ ಹೌದು. ಇದನ್ನು ಸೇವಿಸುವುದರಿಂದ ನಮ್ಮ ರೋಗನಿರೋಧಕ ಶಕ್ತಿ ಕೂಡ ಹೆಚ್ಚುತ್ತದೆ.
ತಾಜಾಹಣ್ಣಿನ ಜ್ಯೂಸ್ ಕುಡಿಯುವುದರಿಂದ ಜೀರ್ಣಕ್ರಿಯೆಗೆ ಕೂಡ ಸಹಾಯಕಾರಿಯಾಗಿದೆ. ಹಾಗೆಯೇ ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಈ ಜ್ಯೂಸ್ ಕುಡಿಯುವುದರಿಂದ ನಿವಾರಣೆಯಾಗಲಿದೆ.
ಇನ್ನು ಮೂಸಂಬಿ ಜ್ಯೂಸ್ ಅನ್ನು ಮಧುಮೇಹದವರು ಕೂಡ ಕುಡಿಯಬಹುದು. ಇದಕ್ಕೆ ನೆಲ್ಲಿಕಾಯಿ ಜ್ಯೂಸ್ ಮತ್ತು ಜೇನುತುಪ್ಪವನ್ನು ಸೇರಿಸಿ ಬೆಳಿಗ್ಗೆ ಕುಡಿಯುವುದರಿಂದ ಶುಗರ್ ಲೆವಲ್ ಕೂಡ ನಿಯಂತ್ರಣಕ್ಕೆ ಬರುತ್ತದೆ.
ಮಲಬದ್ಧತೆ ಸಮಸ್ಯೆ ಇರುವವರು ಮೂಸಂಬಿ ಜ್ಯೂಸ್ ಗೆ ಚಿಟಿಕೆ ಉಪ್ಪು ಸೇರಿಸಿ ಕುಡಿಯುವುದರಿಂದ ಈ ಸಮಸ್ಯೆ ನಿವಾರಣೆಯಾಗುತ್ತದೆ. ವಾಂತಿ ಕೂಡ ಇದರಿಂದ ನಿಯಂತ್ರಣವಾಗುತ್ತದೆ.
ದೇಹದ ತೂಕ ಕಡಿಮೆ ಮಾಡಿಕೊಳ್ಳುವವರಿಗೆ ಕೂಡ ಈ ಮೂಸಂಬಿ ಜ್ಯೂಸ್ ಸಹಾಯಕಾರಿ. ಇದರಲ್ಲಿ ಕ್ಯಾಲೋರಿ ಕಡಿಮೆ ಇರುತ್ತದೆ. ಮೂಸಂಬಿ ಜ್ಯೂಸ್ ಗೆ ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ಸಾಕಷ್ಟು ಲಾಭವಿದೆ.
ದೊಡ್ಡವರು ದಿನಕ್ಕೆ 1 ರಿಂದ 2 ಗ್ಲಾಸ್ ಜ್ಯೂಸ್ ಕುಡಿಯಬಹುದು. ಮಕ್ಕಳು ಅರ್ಧ ಗ್ಲಾಸ್ ಕುಡಿದರೆ ಸಾಕು. ಖಾಲಿ ಹೊಟ್ಟೆಯಲ್ಲಿ ಈ ಮೂಸಂಬಿ ಜ್ಯೂಸ್ ಅನ್ನು ಸೇವಿಸಬಾರದು.