ಹೋಟೆಲ್, ರೆಸ್ಟೋರೆಂಟ್ ಗಳಿಗೆ ಹೋದಾಗ ಬೇಬಿ ಕಾರ್ನ್ ಪಕೋಡವನ್ನು ಸವಿದಿರುತ್ತೇವೆ. ಮನೆಯಲ್ಲಿಯೇ ಇದನ್ನು ಮಾಡಿ ಮನೆಮಂದಿಯೆಲ್ಲಾ ತಿನ್ನಬೇಕು ಎಂದು ಬಯಸುವವರಿಗೆ ಇಲ್ಲಿದೆ ನೋಡಿ ಬೇಬಿ ಕಾರ್ನ್ ರೆಸಿಪಿ.
ಮನೆಯಲ್ಲಿಯೇ ನೀವು ಇದನ್ನು ಸುಲಭವಾಗಿ ಮಾಡಿಕೊಂಡು ತಿನ್ನಬಹುದು.
ಬೇಕಾಗುವ ಸಾಮಾಗ್ರಿ: 5 ಬೇಬಿ ಕಾರ್ನ್, ಕಡಲೇ ಹಿಟ್ಟು-2 ಟೇಬಲ್ ಸ್ಪೂನ್, ಅಕ್ಕಿಹಿಟ್ಟು-1 ಟೇಬಲ್ ಸ್ಪೂನ್, ಕೆಂಪು ಮೆಣಸು ಪುಡಿ-1/2 ಟೀ ಸ್ಪೂನ್, ಪುದೀನಾ ಸೊಪ್ಪು-ಸಣ್ಣಗೆ ಹೆಚ್ಚಿದ್ದು. ರುಚಿಗೆ ತಕ್ಕಷ್ಟು ಉಪ್ಪು, ಎಣ್ಣೆ-ಕರಿಯಲು.
ಮಾಡುವ ವಿಧಾನ:
ಮೊದಲು ಬೇಬಿ ಕಾರ್ನ್ ಅನ್ನು ಉದ್ದಕ್ಕೆ ನಾಲ್ಕು ಭಾಗವಾಗಿ ಸೀಳಿಕೊಳ್ಳಿ. ನಂತರ ಅದನ್ನು ಹದ ಗಾತ್ರದ ಚಿಕ್ಕ ತುಂಡುಗಳಾಗಿ ಕತ್ತರಿಸಿಕೊಳ್ಳಿ. ಒಂದು ಬೌಲ್ ಗೆ ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಸಣ್ಣಗೆ ಕತ್ತರಿಸಿದ ಪುದೀನಾ ಸೊಪ್ಪು, ಕೆಂಪು ಮೆಣಸಿನ ಪುಡಿ, ಉಪ್ಪು ಹಾಕಿ ನಂತರ ಅದಕ್ಕೆ ಬೇಬಿ ಕಾರ್ನ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ನಂತರ ಸ್ವಲ್ಪ ನೀರು ಚಿಮುಕಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದು ತುಂಬಾ ನೀರಾಗಬಾರದು. ನಂತರ ಕುದಿವ ಎಣ್ಣೆಗೆ ಇದನ್ನು ಹಾಕಿ ಡೀಪ್ ಫ್ರೈ ಮಾಡಿದರೆ ರುಚಿಕರವಾದ ಬೇಬಿ ಕಾರ್ನ್ ಪಕೋಡ ಸವಿಯಲು ಸಿದ್ಧ.