20 ನೇ ವಯಸ್ಸಿನ ಹುಡುಗಿಯರಲ್ಲಿ ಕಾಣುವ ಅಂದ ಮತ್ತೆ ಬೇರೆ ಯಾವ ವಯಸ್ಸಿನಲ್ಲಿ ಕಾಣುವುದಿಲ್ಲ. ಆ ಅಂದ ಹಾಗೆ ಉಳಿದುಕೊಳ್ಳಬೇಕೆಂದರೆ ಮತ್ತು ಮುಂದೆ ಅನೇಕ ವ್ಯಾಧಿ, ಅನಾರೋಗ್ಯಗಳಿಂದ ದೂರ ಇರಬೇಕೆಂದರೆ ಕೆಲ ಪದಾರ್ಥಗಳನ್ನು ತಿನ್ನಲೇಬೇಕು. ಅದರಿಂದ ಸೌಂದರ್ಯ ವೃದ್ಧಿಸುವುದಲ್ಲದೆ ಅನೇಕ ಸಮಸ್ಯೆಗಳಿಂದಲೂ ದೂರವಿರಬಹುದು.
ಹಾಲು
ಕಡಿಮೆ ಕೊಬ್ಬಿನಂಶ ಇರುವಂತಹ ಹಾಲನ್ನು ಕುಡಿಯಬೇಕು. ಇದರಿಂದ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳು ದಕ್ಕುವುದಷ್ಟೇ ಅಲ್ಲ, ಆಸ್ಟಿಯೋಪೋರೋಸಿಸ್ ಎಂಬ ಮೂಳೆ ಸಂಬಂಧಿ ವ್ಯಾಧಿಗಳು ಬರದಂತೆ ತಡೆಗಟ್ಟುತ್ತದೆ.
ಬೀನ್ಸ್
ಪೊಟ್ಯಾಶಿಯಂ ಪುಷ್ಕಳವಾಗಿ ಲಭಿಸುವ ತರಕಾರಿ ಬೀನ್ಸ್. ಇದು ಅಧಿಕ ರಕ್ತದೊತ್ತಡವನ್ನು ತಗ್ಗಿಸುತ್ತದೆ. ಹೃದಯವನ್ನು ಸಂರಕ್ಷಿಸುತ್ತದೆ. ವಾರದಲ್ಲಿ ಎರಡು ಮೂರು ಬಾರಿಯಾದರೂ ಬೀನ್ಸ್ ಸೇವಿಸಿದರೆ ಉತ್ತಮ ಫಲಿತಾಂಶ ದೊರಕುತ್ತದೆ.
ಮೊಟ್ಟೆ
ದಿನಕ್ಕೊಂದು ಮೊಟ್ಟೆ ತಿನ್ನುತ್ತಿದ್ದರೆ ದೇಹಕ್ಕೆ ಒಳ್ಳೆಯ ಶಕ್ತಿ ಬರುತ್ತದೆ. ಮೇಲಾಗಿ ಮೊಟ್ಟೆಯಲ್ಲಿರುವ ಪೋಷಕಾಂಶಗಳು ರೋಗ ನಿರೋಧಕ ಶಕ್ತಿ ವೃದ್ಧಿಸಲು ನೆರವಾಗುತ್ತದೆ.
ಹುರುಳಿ ಕಾಳು
ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರೋಟಿನ್ ಇದೆ. ಇದರ ನಿತ್ಯ ಸೇವನೆಯು ದೇಹಕ್ಕೆ ಗಡಸುತನವನ್ನು ಹಾಗೂ ಚುರುಕು ಬುದ್ದಿಯನ್ನು ನೀಡುತ್ತದೆ.