ಈಗಿನ ನಮ್ಮ ಜೀವನ ಶೈಲಿಯೇ ಒತ್ತಡದಿಂದ ಕೂಡಿದ್ದು. ಹಾಗಾಗಿ ಸರಿಯಾದ ಊಟ, ತಿಂಡಿ, ನಿದ್ರೆ ಕೂಡ ಇಲ್ಲದೇ ದೇಹದ ಆರೋಗ್ಯ ಹದಗೆಡುತ್ತದೆ. ಅದು ಅಲ್ಲದೇ, ಅಡುಗೆ ಮಾಡುವುದಕ್ಕೆ ಕೂಡ ಸರಿಯಾದ ಸಮಯ ಸಿಗದೇ ಆನ್ ಲೈನ್ ಫುಡ್ ಗಳು, ಫಿಜ್ಜಾ, ಬರ್ಗರ್ ಗಳಂತವನ್ನೇ ತಿನ್ನುತ್ತೇವೆ.
ಇದರಿಂದ ಆರೋಗ್ಯ ಮತ್ತಷ್ಟು ಕೆಡುತ್ತದೆ. ಎಷ್ಟೇ ಕೆಲಸದ ಒತ್ತಡವಿರಲಿ ಮನೆಯಲ್ಲಿಯೇ ಇರುವ ಆಹಾರ ಪದಾರ್ಥಗಳನ್ನು ಸೇವಿಸುವುದಕ್ಕೆ ಪ್ರಯತ್ನಿಸಿ. ಜಂಕ್ ಫುಡ್ ಬದಲು ಯಾವುದನ್ನು ಸೇವಿಸಬಹುದು ಎಂಬುದಕ್ಕೆ ಇಲ್ಲಿದೆ ನೋಡಿ ಒಂದಷ್ಟು ಟಿಪ್ಸ್.
ಕೆಲವರಿಗೆ ಸಿಹಿ ಎಂದರೆ ಅತಿಯಾದ ಪ್ರೀತಿ ಇರುತ್ತದೆ. ಲಡ್ಡು, ಜಿಲೇಬಿ ಹೀಗೆ ಏನೇ ಸಿಕ್ಕಿದರೂ ಬಾಯಿಗೆ ತುರುಕಿಸಿಕೊಳ್ಳುತ್ತಾರೆ. ಅದರ ಬದಲು ಡಾರ್ಕ್ ಚಾಕೋಲೇಟ್ ಗಳನ್ನು ಸೇವಿಸಿ. ಇದರಲ್ಲಿ ಫೈಬರ್, ಐರನ್, ಕಾಪರ್, ಮೆಗ್ನೇಷಿಯಂ, ಫೋಟ್ಯಾಷಿಯಂ ಇರುತ್ತದೆ. ಅದು ಅಲ್ಲದೇ ಈ ಡಾರ್ಕ್ ಚಾಕೋಲೇಟ್ ಆಂಟಿ ಆಂಕ್ಸಿಡೆಂಟ್ ಕೂಡ ಹೌದು.
ಸುಲಭವಾಗಿ ಸಿಗುವ ಹಣ್ಣು ಎಂದರೆ ಬಾಳೇಹಣ್ಣು. ಬಾಳೆಹಣ್ಣಿನಲ್ಲಿ ವಿಟಮಿನ್ ಬಿ 6 ಇರುತ್ತದೆ. ಬಾಳೇಹಣ್ಣನ್ನು ಸೇವಿಸುವುದರಿಂದ ನಮ್ಮ ಮೆದುಳಿಗೆ ಬೀಳುವ ಒತ್ತಡ ಕಡಿಮೆಯಾಗುತ್ತದೆ. ಅದು ಅಲ್ಲದೇ ಬಾಳೆಹಣ್ಣು ಹೃದಯಾಘಾತ ಸಮಸ್ಯೆ, ಪಾರ್ಶ್ವವಾಯು ಬರದಂತೆ ಕೂಡ ಕಾಪಾಡುತ್ತದೆ.
ಐಸ್ ಕ್ರೀಂ ಎಂದರೆ ಯಾರಿಗೆ ಇಷ್ಟವಿಲ್ಲ. ಇದರಲ್ಲಿನ ಫ್ರೋಜನ್ ಫ್ಯಾಟ್ ಹಾಗೂ ಶುಗರ್ ನಮ್ಮ ದೇಹಕ್ಕೆ ಕೆಟ್ಟದ್ದು. ಹಾಗಾಗಿ ಐಸ್ ಕ್ರೀಂ ಬದಲು ಯೋಗಾರ್ಟ್ ಸೇವಿಸುವುದಕ್ಕೆ ಪ್ರಯತ್ನಿಸಿ. ಯೋಗಾರ್ಟ್ ಜೀರ್ಣಕ್ರೀಯೆಗೆ ಸಹಾಯ ಮಾಡುತ್ತದೆ. ತಾಜಾ ಹಣ್ಣುಗಳನ್ನು ಇದಕ್ಕೆ ಹಾಕಿಕೊಂಡು ತಿನ್ನುವುದರಿಂದ ಕೂಡ ನಿಮ್ಮ ಆರೋಗ್ಯ ಸುಸ್ಥಿತಿಯಲ್ಲಿರುತ್ತದೆ.