ಜೀವನದಲ್ಲಿ ಪ್ರತಿಯೊಬ್ಬರು ಸುಖ-ಸಮೃದ್ಧಿಯನ್ನು ಬಯಸ್ತಾರೆ. ಆದ್ರೆ ಎಲ್ಲರಿಗೂ ಸುಖ, ಧನ ಪ್ರಾಪ್ತಿಯಾಗುವುದಿಲ್ಲ. ಕೆಲವೊಂದು ಸಂದರ್ಭದಲ್ಲಿ ಅದೃಷ್ಟ ಚೆನ್ನಾಗಿದ್ರೆ ಧನ ಪ್ರಾಪ್ತಿಯಾಗುತ್ತದೆ. ಅಕ್ಕಿ ನಮ್ಮ ಸುಖ, ಸಮೃದ್ಧಿ ಹೆಚ್ಚಿಸುವ ಕೆಲಸ ಮಾಡುತ್ತದೆ. ಅಕ್ಕಿಯ ಈ ಉಪಾಯಗಳನ್ನು ತಪ್ಪದೆ ಮಾಡಿ.
ಅಕ್ಕಿಯನ್ನು ಅಕ್ಷತೆ ಎಂದೂ ಕರೆಯುತ್ತಾರೆ. ಅಕ್ಷತೆ ಅಂದ್ರೆ ತುಂಡಾಗದ್ದು ಎಂಬ ಅರ್ಥವನ್ನು ನೀಡುತ್ತದೆ. ಅಕ್ಕಿಯನ್ನು ಪರಿಪೂರ್ಣತೆಯಂದು ಪರಿಗಣಿಸಲಾಗಿದೆ. ಇದೇ ಕಾರಣಕ್ಕೆ ಅಕ್ಕಿಯನ್ನು ದೇವರಿಗೆ ಹಾಕಲಾಗುತ್ತದೆ. ಕಿರಿಯರಿಗೆ ಆಶೀರ್ವಾದ ನೀಡುವ ಮೊದಲು ತಲೆಗೆ ಅಕ್ಷತೆ ಹಾಕಲಾಗುತ್ತದೆ. ದೇವರ ಪೂಜೆಗೆ ಅಕ್ಷತೆಯನ್ನು ಅವಶ್ಯಕವಾಗಿ ಬಳಸಿ. ಇದ್ರಿಂದ ಸುಖ, ಸಮೃದ್ಧಿ ಪ್ರಾಪ್ತಿಯಾಗುತ್ತದೆ.
ಶಿವಲಿಂಗಕ್ಕೆ ಸೋಮವಾರ ಅಕ್ಷತೆಯನ್ನು ಅರ್ಪಿಸಿ. ಭಗವಂತನಿಗೆ ಅರ್ಪಿಸುವ ಅಕ್ಕಿ ಮುರಿದಿರದಂತೆ ನೋಡಿಕೊಳ್ಳಿ. ಪೂರ್ಣವಾಗಿರುವ ಅಕ್ಕಿಯನ್ನು ಮಾತ್ರ ಶಿವನಿಗೆ ಅರ್ಪಿಸಿ. ಒಂದು ಕೆ.ಜಿ ಅಕ್ಕಿಯನ್ನು ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಿ. ಶಿವಲಿಂಗದ ಮುಂದೆ ಕುಳಿತು ಒಂದು ಮುಷ್ಠಿ ಅಕ್ಕಿಯನ್ನು ಶಿವಲಿಂಗಕ್ಕೆ ಹಾಕಿ. ಉಳಿದ ಅಕ್ಕಿಯನ್ನು ಬಡವರಿಗೆ ದಾನ ಮಾಡಿ. ಸತತ ಐದು ಸೋಮವಾರ ಇದನ್ನು ಮಾಡಬೇಕು.
ಕಚೇರಿ ಅಥವಾ ಕೆಲಸಕ್ಕೆ ಸಂಬಂಧಿಸಿದ ಸಮಸ್ಯೆಯಿದ್ರೆ ಅಕ್ಕಿಯಿಂದ ಸಿಹಿ ತಯಾರಿಸಿ ಕಾಗೆಗೆ ನೀಡಿ. ಅಕ್ಕಿ ಪಾಯಸ ಹಾಗೂ ರೊಟ್ಟಿಯನ್ನು ಕಾಗೆಗೆ ನೀಡುವುದ್ರಿಂದ ಪಿತೃದೋಷ ದೂರವಾಗುತ್ತದೆ.
ಅನ್ನವನ್ನು ಸರಿಯಾಗಿ ಊಟ ಮಾಡುವುದು ಇಲ್ಲಿ ಮಹತ್ವ ಪಡೆಯುತ್ತದೆ. ಪ್ರತಿ ದಿನ ಅನ್ನ ಊಟ ಮಾಡುವವರು ಸೂರ್ಯಾಸ್ತವಾದ್ಮೇಲೆ ಅನ್ನ ಹಾಗೂ ಮೊಸರನ್ನು ತಿನ್ನಬೇಡಿ. ಇದು ಲಕ್ಷ್ಮಿ ಕೋಪಕ್ಕೆ ಕಾರಣವಾಗುತ್ತದೆ. ಹಾಗೆ ಬಟ್ಟಲಿನ ಬಲ ಭಾಗದಲ್ಲಿ ಅನ್ನವನ್ನು ಹಾಕಿಕೊಳ್ಳಿ. ಅನ್ನವನ್ನು ಬಟ್ಟಲಿನಲ್ಲಿ ಬಿಡಿಬೇಡಿ.