ಮುಖದ ಕಾಂತಿ ಹೆಚ್ಚಿಸಲು ಹುಡುಗಿಯರು ಏನೆಲ್ಲಾ ಸರ್ಕಸ್ ಮಾಡುತ್ತಾರೆ. ಆದರೆ ನಮ್ಮ ತ್ವಚೆಗೆ ಯಾವುದು ಸರಿ ಹೊಂದುತ್ತದೆ ಎಂಬುದು ತಿಳಿಯದೇ ಯಾವುದ್ಯಾವುದೋ ಕ್ರೀಂ, ಪ್ಯಾಕ್ ಗಳನ್ನು ಹಚ್ಚಿಕೊಳ್ಳುವುದಕ್ಕಿಂತ ಮನೆಯಲ್ಲಿರುವ ಈ ವಸ್ತುವಿನಿಂದ ಮುಖದ ಅಂದವನ್ನು ಹೆಚ್ಚಿಸಿಕೊಳ್ಳಿ.
ಡ್ರೈ ಸ್ಕಿನ್: ಒಣ ತ್ವಚೆ ಇರುವವರು ಅರ್ಧ ಕ್ಯಾರೆಟ್ ಅನ್ನು ಚಿಕ್ಕದಾಗಿ ಕತ್ತರಿಸಿಕೊಂಡು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಅದಕ್ಕೆ ಒಂದು ಟೀ ಸ್ಪೂನ್ ನಷ್ಟು ಜೇನುತುಪ್ಪ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಂಡು 20 ನಿಮಿಷಗಳ ಕಾಲ ಬಿಟ್ಟು ಮುಖ ತೊಳೆಯಿರಿ.
ಕ್ಯಾರೆಟ್ ನಲ್ಲಿ ಪೊಟ್ಯಾಷಿಯಂ ಹೇರಳವಾಗಿರುತ್ತದೆ. ಈ ಪ್ಯಾಕ್ ಮುಖದಲ್ಲಿನ ಡ್ರೈ ನೆಸ್ ಕಡಿಮೆ ಮಾಡುವುದರ ಜತೆಗೆ ಕಾಂತಿಯನ್ನು ಹೆಚ್ಚಿಸುತ್ತದೆ.
ಎಣ್ಣೆ ಚರ್ಮ: ಎಣ್ಣೆ ಚರ್ಮ ಇರುವವರು ½ ಕಪ್ ಕ್ಯಾರೆಟ್ ಜ್ಯೂಸ್ ಗೆ 1 ಟೇಬಲ್ ಚಮಚ ಮೊಸರು, 1 ಚಮಚ ಕಡಲೇ ಹಿಟ್ಟು, ½ ಚಮಚ ನಿಂಬೆ ಹಣ್ಣಿನ ರಸ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಕೊಂಡು ಪ್ಯಾಕ್ ಹಚ್ಚಿಕೊಳ್ಳಿ. ಅರ್ಧ ಗಂಟೆ ಬಿಟ್ಟು ಉಗುರು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಿರಿ. ವಿಟಮಿನ್ ಎ ಕ್ಯಾರೆಟ್ ನಲ್ಲಿ ಇರುವುದರಿಂದ ಮುಖದಲ್ಲಿರುವ ಜಿಡ್ಡಿನಾಂಶವನ್ನು ತೆಗೆಯಲು ಸಹಕಾರಿಯಾಗಿದೆ.