ಸಪ್ಪೆ ಖೋವಾ – 1/2 ಕೆಜಿ
ಸಕ್ಕರೆ – 1 ಬಟ್ಟಲು
ರಾಸ್ಪ್ ಬೆರಿ ಕಲರ್ ಸ್ವಲ್ಪ
ಹಳದಿ ಬಣ್ಣ ಸ್ವಲ್ಪ
ಏಲಕ್ಕಿ ಪುಡಿ ಸ್ವಲ್ಪ
ಹೆಚ್ಚಿದ ಬಾದಾಮಿ ಚೂರು ಸ್ವಲ್ಪ
ತುಪ್ಪ – 2 ಸ್ಪೂನ್
ಮಾಡುವ ವಿಧಾನ
ದಪ್ಪ ತಳದ ಪಾತ್ರೆಗೆ ಸಕ್ಕರೆ ಮತ್ತು ಖೋವಾ ಹಾಕಿ ಸಣ್ಣ ಉರಿಯಲ್ಲಿ ಸ್ವಲ್ಪ ಗಟ್ಟಿಯಾಗುವವರೆಗೆ ಬೇಯಿಸಬೇಕು. ನಂತರ ಹಳದಿ ಬಣ್ಣ ಸೇರಿಸಿ ಹಲ್ವಾ ಹದಕ್ಕೆ ಬರುವವರೆಗೆ ಬೇಯಿಸಿಕೊಳ್ಳಬೇಕು. ಬಳಿಕ ಇದಕ್ಕೆ ಏಲಕ್ಕಿ ಪುಡಿ ಮತ್ತು ತುಪ್ಪ ಹಾಕಿ ಕೆಳಗಿಳಿಸಿ. ತಣ್ಣಗಾದ ನಂತರ ಹದವಾಗಿ ಕಲಸಿ ನಿಂಬೆಹಣ್ಣಿನ ಗಾತ್ರದ ಉಂಡೆ ಮಾಡಿ. ಅದರ ಮೇಲಿನ ಭಾಗಕ್ಕೆ ರಾಸ್ಪ್ ಬೆರಿ ಕಲರ್ ಹಚ್ಚಿ ಒಂದೊಂದು ಉಂಡೆಗಳ ಮೇಲೆ ಲವಂಗ ಚುಚ್ಚಿದರೆ ಆ್ಯಪಲ್ ಪೇಡ ಸ್ವೀಟ್ ತಿನ್ನಲು ರೆಡಿ.