ಅದೆಷ್ಟೇ ದೊಡ್ಡ ಹುದ್ದೆಯಲ್ಲಿರಲಿ, ಎಷ್ಟೇ ಹಣ ಗಳಿಸುತ್ತಿರಲಿ, ಪುರುಷರು ಪುರುಷರೇ. ಕೆಲವೊಂದು ಸ್ವಭಾವದಿಂದಾಗಿ ಅವರು ತಮ್ಮ ಹೆಸರನ್ನು ತಾವೇ ಕೆಡಿಸಿಕೊಳ್ತಾರೆ.
ಒಳ ಉಡುಪು ಪ್ರದರ್ಶನ : ಲೋ ವೆಸ್ಟ್ ಪ್ಯಾಂಟ್ ಧರಿಸಿ ಒಳ ಉಡುಪು ಪ್ರದರ್ಶನ ಮಾಡೋದು ಈಗ ಫ್ಯಾಷನ್ ನಿಜ. ಆದ್ರೆ ಕೆಲ ಪುರುಷರ ನಿರ್ಲಕ್ಷ್ಯದಿಂದಾಗಿ ಎಲ್ಲೆಂದರಲ್ಲಿ ಒಳ ಉಡುಪು ಪ್ರದರ್ಶನವಾಗಿಬಿಡುತ್ತದೆ.
ಸ್ವಚ್ಛತೆ ಬಗ್ಗೆ ಗಮನ ನೀಡದಿರುವುದು: ಕೆಲ ಪುರುಷರು ಸ್ವಚ್ಛತೆಗೆ ಗಮನ ನೀಡುವುದಿಲ್ಲ. ಎಂತ ಕೆಟ್ಟ ಸ್ಥಳದಲ್ಲಿಯಾದ್ರೂ ಆರಾಮಾಗಿ ಇದ್ದು ಬಿಡುತ್ತಾರೆ.
ಟಾಯ್ಲೆಟ್ ಸೀಟ್ ಕೊಳಕು ಮಾಡುವುದು: ಟಾಯ್ಲೆಟ್ ಗೆ ಹೋಗಿ ಸೀಟ್ ಕೊಳಕು ಮಾಡ್ದೆ ಬರುವ ಪುರುಷರು ಸಿಗೋದು ಅಪರೂಪ. ಯೂರಿನ್ ಪಾಸ್ ಮಾಡೋದಿರಲಿ ಇಲ್ಲ ಟಾಯ್ಲೆಟ್ ಗೆ ಹೋದ ಅನೇಕ ಪುರುಷರಿಗೆ ನೀರು ಹಾಕುವ ಅಭ್ಯಾಸವೇ ಇರೋದಿಲ್ಲ. ಇದು ಸಾರ್ವಜನಿಕ ಶೌಚಾಲಯದ ಸ್ವಚ್ಛತೆ ಕೆಡಲು ಮುಖ್ಯ ಕಾರಣ.
ಸಂಗಾತಿಗೆ ಸಮಯ ನೀಡದಿರುವುದು : ನೂರರಲ್ಲಿ 95 ಪುರುಷರು ಇದನ್ನೇ ಮಾಡ್ತಾರೆ. ಸಂಗಾತಿಗೆ ಹೆಚ್ಚು ಸಮಯ ನೀಡುವುದಿಲ್ಲ. ಮನೆಯಿಂದ ಹೊರಗೆ ಹೆಚ್ಚು ಕಾಲ ಕಳೆಯುತ್ತಾರೆ. ಸಂಗಾತಿ ಕೂಡ ಹಾಗೆ ಮಾಡಿದ್ರೆ ಆಕೆ ಜೊತೆ ಜಗಳಕ್ಕಿಳಿಯುತ್ತಾರೆ.
ಸಾಮಾಜಿಕ ಜಾಲತಾಣದಲ್ಲಿ ಯಡವಟ್ಟು: ಉಳಿದವರ ಗಮನವನ್ನು ತಮ್ಮತ್ತ ಸೆಳೆಯಲು ಕೆಲ ಪುರುಷರು ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಕಮೆಂಟ್ ಮಾಡ್ತಾರೆ. ಕೊನೆಗೆ ಅವರೇ ಮುಜುಗರಕ್ಕೊಳಗಾಗ್ತಾರೆ.
ಹೋಲಿಕೆ : ಅಕ್ಕ-ಪಕ್ಕದ ಇಲ್ಲವೆ ಮಾಜಿ ಪ್ರೇಯಸಿ ಜೊತೆಗೆ ಸಂಗಾತಿಯನ್ನು ತುಲನೆ ಮಾಡ್ತಾರೆ. ಅವರ ಸ್ವಭಾವ, ಕೆಲಸವನ್ನು ಸಂಗಾತಿ ಮುಂದೆ ಹೊಗಳ್ತಾರೆ.
ತಿಂಗಳ ಸಮಯದಲ್ಲಿ ಜಗಳ: ಸಂಗಾತಿಯ ಮುಟ್ಟಿನ ಸಮಯದಲ್ಲಿ ಆಕೆಯನ್ನು ಪ್ರೀತಿಯಿಂದ ನೋಡಿಕೊಳ್ಳುವ ಬದಲು ಜಗಳಕ್ಕಿಳಿಯುತ್ತಾರೆ ಪುರುಷರು. ಆ ಸಮಯದಲ್ಲಿ ಮಹಿಳೆ ಮನಸ್ಸು ಗೊಂದಲದಲ್ಲಿರುವುದರಿಂದ ಸಂಗಾತಿ ಅರ್ಥ ಮಾಡಿಕೊಳ್ಳಬೇಕಾಗುತ್ತದೆ.
ಕುಡಿದಾಗ ಗಲಾಟೆ: ಅನೇಕ ಪುರುಷರು ಕುಡಿದು ಗಲಾಟೆ ಮಾಡ್ತಾರೆ. ಸಾರ್ವಜನಿಕ ಪ್ರದೇಶವಿರಲಿ, ಮನೆಯಿರಲಿ. ಕುಡಿದಾಗ ಗಲಾಟೆ ಮಾಡಿ ತನ್ನ ಗೌರವವನ್ನು ತಾವೇ ಹಾಳು ಮಾಡಿಕೊಳ್ತಾರೆ.