ಚಳಿಗಾಲದಲ್ಲಿ ಪರೋಟ ತಿನ್ನುವ ಮಜವೆ ಬೇರೆ. ಗೋಬಿ ಪರೋಟ, ಮೆಂತ್ಯೆ, ಎಲೆಕೋಸು ಹೀಗೆ ಬೇರೆ ಬೇರೆ ಪರೋಟ ಸವಿ ಸವಿದಿರಬಹುದು. ಆದ್ರೆ ಇಂದು ರವಾ ಪರೋಟ ವಿಧಾನವನ್ನು ನಾವು ಹೇಳ್ತೆವೆ.
ರವಾ ಪರೋಟ ಮಾಡಲು ಬೇಕಾಗುವ ಪದಾರ್ಥ :
ರವೆ – 1 ಕಪ್
ನೀರು – 2 ಕಪ್
ಎಣ್ಣೆ – 1 ಟೀಸ್ಪೂನ್
ಉಪ್ಪು – 1/4 ಟೀಸ್ಪೂನ್
ಗೋಧಿ ಹಿಟ್ಟು – 1/2 ಕಪ್
ಜೀರಿಗೆ ಪುಡಿ – 1/2 ಟೀಸ್ಪೂನ್
ಕೆಂಪು ಮೆಣಸಿನಕಾಯಿ – 1/4 ಟೀಸ್ಪೂನ್
ಓಂ ಕಾಳು – 1/4 ಟೀಸ್ಪೂನ್
ಹಸಿರು ಮೆಣಸಿನಕಾಯಿ – 1 ( ಸಣ್ಣಗೆ ಕತ್ತರಿಸಿದ್ದು)
ಕೊತ್ತಂಬರಿ – ಸ್ವಲ್ಪ (ಕತ್ತರಿಸಿದ್ದು)
ಉಪ್ಪು – 1/4 ಟೀಸ್ಪೂನ್
ಶುಂಠಿ ಪೇಸ್ಟ್ – 1/2 ಟೀಸ್ಪೂನ್
ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು
ರವಾ ಪರೋಟಾ ಮಾಡುವ ವಿಧಾನ :
ಒಂದು ಪಾತ್ರೆಗೆ ನೀರು ಹಾಕಿ ಅದನ್ನು ಬಿಸಿ ಮಾಡಿ. ಅದಕ್ಕೆ ಒಂದು ಚಮಚ ಎಣ್ಣೆ, ಉಪ್ಪನ್ನು ಹಾಕಿ ಕುದಿಸಿ. ನೀರು ಕುದಿಯಲು ಶುರುವಾದ್ಮೇಲೆ ರವೆಯನ್ನು ಹಾಕಿ. ರವೆ ಗಂಟಾಗದಂತೆ ಕೈ ಆಡಿಸಿ. ರವೆ ಬೆಂದು, ನೀರು ಆರಿದ ಮೇಲೆ ಗ್ಯಾಸ್ ಬಂದ್ ಮಾಡಿ.
ಇತ್ತ ಮತ್ತೊಂದು ಪಾತ್ರೆಗೆ ಗೋಧಿ ಹಿಟ್ಟು, ಕೆಂಪು ಮೆಣಸಿನ ಪುಡಿ, ಜೀರಿಗೆ ಪುಡಿ, ಓಂ ಕಾಳು, ಕತ್ತರಿಸಿದ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಉಪ್ಪು ಮತ್ತು ಶುಂಠಿ ಪೇಸ್ಟ್ ಸೇರಿಸಿ. ಈ ಪೇಸ್ಟ್ ಅನ್ನು ಕನಿಷ್ಠ 5 ರಿಂದ 7 ನಿಮಿಷಗಳ ಕಾಲ ಸರಿಯಾಗಿ ಮಿಕ್ಸ್ ಮಾಡಿ. ಬಾಣಲೆಯನ್ನು ಬಿಸಿ ಮಾಡಿ. ರವೆ ಉಂಡೆಯನ್ನು ಮಾಡಿ ಸ್ವಲ್ಪ ಲಟ್ಟಿಸಿಕೊಂಡು ಅದಕ್ಕೆ ಈ ಮಿಶ್ರಣವನ್ನು ಹಾಕಿ ಮತ್ತೆ ಉಂಡೆ ಮಾಡಿ ಲಟ್ಟಿಸಿ. ಎರಡೂ ಬದಿಗೆ ಎಣ್ಣೆ ಹಾಕಿ ಸರಿಯಾಗಿ ಬೇಯಿಸಿ. ರವೆಯನ್ನು ಬೇಯಿಸಿಕೊಳ್ಳದೆ ಎಲ್ಲ ಪದಾರ್ಥವನ್ನು ಒಟ್ಟಿಗೆ ಹಾಕಿ ಮಿಕ್ಸ್ ಮಾಡಿ ಉಂಡೆ ಮಾಡಿಕೊಂಡು ಪರೋಟಾ ಮಾಡಬಹುದು.