ಅತ್ಯಂತ ಪ್ರಸಿದ್ಧ ಮಾರುಕಟ್ಟೆಗಳಲ್ಲಿ ಒಂದಾದ ಕಮರ್ಷಿಯಲ್ ಸ್ಟ್ರೀಟ್ ಬೆಂಗಳೂರಿನಲ್ಲಿ ಬೀದಿ ಶಾಪಿಂಗ್ಗೆ ಸ್ವರ್ಗ. ಇದು ಉಡುಪುಗಳು, ಅನುಕರಣೆ ಆಭರಣಗಳು, ಕ್ರೀಡಾ ಸಾಮಾಗ್ರಿಗಳು ಮತ್ತು ಪಾದರಕ್ಷೆಗಳನ್ನು ಖರೀದಿಸಲು ಒಂದು ಉತ್ತಮ ತಾಣವಾಗಿದೆ.
ಜಯನಗರ 4th ಬ್ಲಾಕ್
ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಬೆಂಗಳೂರಿನ ಮುಖ್ಯ ಬಸ್ ನಿಲ್ದಾಣದ ಎದುರು ಇದೆ ಮತ್ತು ಇದು ವ್ಯಾಪಾರಿಗಳಿಗೆ ಸ್ವರ್ಗವಾಗಿದೆ. ಕಲಾಕೃತಿಗಳು, ಕುಂಬಾರಿಕೆ ಮತ್ತು ಶಿಲ್ಪಗಳು, ಆಟಿಕೆಗಳು, ಪಾದರಕ್ಷೆಗಳು ಮತ್ತು ಗೃಹೋಪಯೋಗಿ ವಸ್ತುಗಳನ್ನು ಕೈಗೆಟುಕುವ ದರದಲ್ಲಿ ಖರೀದಿಸಬಹುದು. ಶಾಪಿಂಗ್ ಮಾಡಿದ ನಂತರ ರಿಫ್ರೆಶ್ ಆಗಲು ಯೋಗ್ಯವಾದ ಸ್ಟ್ರೀಟ್ಫುಡ್ ಗಳು ಇವೆ.
ಚಿಕ್ಕಪೇಟೆ
ಚಿಕ್ಕಪೇಟೆ ಹೆಚ್ಚಿನ ಜನರು ಭೇಟಿ ನೀಡುವ ಮತ್ತು ಸಾಹಸಮಯ ಶಾಪಿಂಗ್ ಬೀದಿಯಾಗಿದೆ. ಇದು ರೇಷ್ಮೆ ಸೀರೆಗಳಿಗೆ ಹೆಸರುವಾಸಿಯಾದ ಜಾಗ. ಬೇರೆ ಬೇರೆ ಊರುಗಳಿಂದ ಬಂದು ಇಲ್ಲಿ ಖರೀದಿ ಮಾಡುವುದು ಕಾಮನ್.
ಬ್ರಿಗೇಡ್ ರಸ್ತೆ
ಪ್ರತಿ ಬಜೆಟ್ಗೆ ಸೂಕ್ತವಾದ ಹಲವಾರು ಆಯ್ಕೆಗಳನ್ನು ನೀಡುತ್ತಿರುವ ಬ್ರಿಗೇಡ್ ರಸ್ತೆ ಸಂತೋಷಕರವಾದ ಶಾಪಿಂಗ್ ಅನುಭವವನ್ನು ನೀಡುತ್ತದೆ. ಹಲವಾರು ಕೆಫೆಗಳು, ರೆಸ್ಟೋರೆಂಟ್ಗಳು ಮತ್ತು ಸ್ಟ್ರೀಟ್ ಫುಡ್ ಮಾರಾಟಗಾರರಿಂದ ಕೂಡಿದೆ ಬ್ರಿಗೇಡ್ ರಸ್ತೆ.
ಗಾಂಧಿ ಬಜಾರ್
ಬಸವನಗುಡಿ ಪ್ರದೇಶದಲ್ಲಿರುವ ಈ ಮಾರುಕಟ್ಟೆ ಸಾಂಪ್ರದಾಯಿಕ ಧಾರ್ಮಿಕ ವಸ್ತುಗಳು, ಬಟ್ಟೆಗಳಿಗೆ ಹೆಸರುವಾಸಿಯಾಗಿದೆ. ಹಬ್ಬಗಳ ಸಂದರ್ಭದಲ್ಲಿ ಗಾಂಧಿ ಬಜಾರ್ ಸಂಪೂರ್ಣ ವೈಭವದಲ್ಲಿರುತ್ತದೆ.
ಮಲ್ಲೇಶ್ವರಂ
ಬೆಂಗಳೂರಿನ ಅತ್ಯಂತ ಜನಪ್ರಿಯ ಸಾಂಪ್ರದಾಯಿಕ ಮಾರುಕಟ್ಟೆಗಳಲ್ಲಿ ಒಂದಾದ ಮಲ್ಲೇಶ್ವರಂ ಹೂವಿನ ಮಾರುಕಟ್ಟೆ, ಗಿಡಮೂಲಿಕೆಗಳು, ಮಸಾಲೆಗಳು ಮತ್ತು ತರಕಾರಿಗಳಿಗೆ ಹೆಸರುವಾಸಿಯಾಗಿದೆ. ಇದು ಹತ್ತಿರದಲ್ಲಿರುವ ಕಾಡು ಮಲ್ಲೇಶ್ವರ ದೇವಸ್ಥಾನಕ್ಕೂ ಪ್ರಸಿದ್ಧವಾಗಿದೆ.