ಗರ್ಭಿಣಿಯರು ಸೇವಿಸಲೇಬೇಕು ವಿಟಮಿನ್ ಸಿ ಸಮೃದ್ಧ ಕಿತ್ತಳೆ ಹಣ್ಣು

Image result for orange fruit eating pregnant womenಕಿತ್ತಳೆಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು, ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಜೊತೆಗೇ ತಕ್ಷಣದಲ್ಲಿ ದೇಹಕ್ಕೆ ಹೆಚ್ಚಿನ ಶಕ್ತಿ ನೀಡಿ ಉಲ್ಲಾಸ ಮತ್ತು ಚೈತನ್ಯವನ್ನು ನೀಡುತ್ತದೆ. ಜೊತೆಗೆ ಕಿತ್ತಳೆಗಳಲ್ಲಿ ಸತು, ಕಬ್ಬಿಣ ಮತ್ತು ಫೋಲಿಕ್ ಆಮ್ಲ ಪ್ರಮುಖವಾಗಿವೆ.

ಗರ್ಭಾವಸ್ಥೆಯಲ್ಲಿ ಈ ಪೋಷಕಾಂಶಗಳು ರೋಗ ನಿರೋಧಕ ಶಕ್ತಿಯನ್ನು ವೃದ್ದಿಸುವುದಲ್ಲದೇ ಮಗುವಿನ ಮೆದುಳಿನ ಬೆಳವಣಿಗೆ ಉತ್ತಮಗೊಳ್ಳಲು ನೆರವಾಗುತ್ತದೆ. ಅಲ್ಲದೇ ತ್ವಚೆಯ ಕಾಂತಿಯೂ ಹೆಚ್ಚುತ್ತದೆ.

ಪ್ರಥಮ ತ್ರೈಮಾಸಿಕದಲ್ಲಿ ಕಿತ್ತಳೆಯನ್ನು ಹೆಚ್ಚು ಹೆಚ್ಚಾಗಿ ಸೇವಿಸ ಬೇಕು. ಏಕೆಂದರೆ ಈ ಅವಧಿಯಲ್ಲಿ ಮಗುವಿನ ಮೆದುಳಿನ ಬೆಳವಣಿಗೆಯು ಮಹತ್ವದ ಘಟ್ಟವಾಗಿದ್ದು, ಈ ಸಮಯದಲ್ಲಿ ಕಿತ್ತಳೆ ಹೆಚ್ಚಿನ ನೆರವು ನೀಡುತ್ತದೆ.

ಕಿತ್ತಳೆಯ ಸೇವನೆ ಗರ್ಭಾವಸ್ಥೆಯಲ್ಲಿ ಎದುರಾಗುವ ಅಲರ್ಜಿಗಳ ಸಾಧ್ಯತೆಯನ್ನು ತಗ್ಗಿಸುತ್ತದೆ. ಅಲ್ಲದೇ ಭ್ರೂಣದ ಮೂಳೆಗಳು, ಅಂಗಾಂಶಗಳು, ರಕ್ತನಾಳಗಳು ಹಾಗೂ ಇತರ ಪ್ರಮುಖ ಅಂಗಗಳು ಪರಿಪೂರ್ಣ ಬೆಳವಣಿಗೆ ಪಡೆಯಲು ನೆರವಾಗುತ್ತವೆ.

ಕಿತ್ತಳೆಯಲ್ಲಿ ಪೊಟ್ಯಾಶಿಯಂ ಅಂಶವೂ ಉತ್ತಮವಾಗಿದ್ದು, ರಕ್ತದ ಒತ್ತಡದ ಮಟ್ಟಗಳನ್ನು ಸೂಕ್ತ ಮಟ್ಟದಲ್ಲಿರಿಸಲು ನೆರವಾಗುತ್ತದೆ. ವಿಶೇಷವಾಗಿ ಗರ್ಭಾವಸ್ಥೆಯಲ್ಲಿ ಏರುವ ಗರ್ಭಿಣಿಯ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಇದು ಸಹಕಾರಿಯಾಗಿದೆ.

ಇತರ ಸಮಯಕ್ಕಿಂತಲೂ ಗರ್ಭಾವಸ್ಥೆಯಲ್ಲಿ ದೇಹದಿಂದ ಕಲ್ಮಶಗಳನ್ನು ದೇಹದಿಂದ ಹೊರಹಾಕುವ ಕರ್ತವ್ಯ ಹೆಚ್ಚಾಗಿದ್ದು, ಇದನ್ನು ಪೂರೈಸಲು ಕಿತ್ತಳೆ ಸಹಕರಿಸುತ್ತದೆ.

ಕಿತ್ತಳೆಯಲ್ಲಿರುವ ನೀರಿನ ಪ್ರಮಾಣ ಹಾಗೂ ಇದರಲ್ಲಿರುವ ಸೋಡಿಯಂ ಮತ್ತು ಪೊಟ್ಯಾಶಿಯಂ ಗಳು ದೇಹದಲ್ಲಿ ಸೂಕ್ತ ಪ್ರಮಾಣದ ದ್ರವ ಉಳಿದುಕೊಳ್ಳುವಂತೆ ಮಾಡುತ್ತವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read