ಹಾಲು ಕುಡಿಯುವುದ್ರಿಂದ ಏನೆಲ್ಲ ಪ್ರಯೋಜನಗಳಿವೆ ಎಂಬುದನ್ನು ಎಲ್ಲರೂ ತಿಳಿದಿರುತ್ತಾರೆ. ಹಾಗೆ ಮೀನು ತಿಂದ್ಮೇಲೆ ಹಾಲು ಕುಡಿಯಬಾರದು ಎಂಬ ಸಲಹೆಯನ್ನು ಹಿರಿಯರು ನೀಡ್ತಾರೆ. ಇದು ಚರ್ಮ ರೋಗಕ್ಕೆ ಕಾರಣವಾಗುತ್ತದೆ ಎಂಬುದು ಅವ್ರ ನಂಬಿಕೆ. ಆದ್ರೆ ವಿಜ್ಞಾನಿಗಳು ಅದು ಸುಳ್ಳು ಎನ್ನುತ್ತಾರೆ.
ವಿಜ್ಞಾನಿಗಳ ಪ್ರಕಾರ, ಮೀನು ತಿಂದ್ಮೇಲೆ ಹಾಲು ಕುಡಿದ್ರೆ ಯಾವುದೇ ರೀತಿಯ ಚರ್ಮ ರೋಗ ಕಾಡುವುದಿಲ್ಲ. ಒಂದೇ ಒಂದು ಕಾರಣದಿಂದ ನಷ್ಟ ಸಂಭವಿಸಬಹುದು ಎಂದು ವಿಜ್ಞಾನಿಗಳು ಹೇಳ್ತಾರೆ. ನಿಮ್ಮ ದೇಹವು ಯಾವುದೇ ನಿರ್ದಿಷ್ಟ ಆಹಾರ ಪದಾರ್ಥವನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದಿದ್ದಾಗ ಮಾತ್ರ ಇದು ಅಪಾಯಕಾರಿ. ಆದ್ರೆ ಇದ್ರ ಬಗ್ಗೆಯೂ ಅಧ್ಯಯನದಲ್ಲಿ ಸ್ಪಷ್ಟತೆ ಸಿಕ್ಕಿಲ್ಲ.
ವಿಜ್ಞಾನಿಗಳು ಈ ಬಗ್ಗೆ ಸಂಶೋಧನೆ ನಡೆಸಿದಾಗ ಹಾಲು ಮತ್ತು ಮೀನು ಎರಡೂ ಹೆಚ್ಚು ಪೌಷ್ಠಿಕಾಂಶವನ್ನು ಹೊಂದಿದ್ದು, ಇದು ದೇಹಕ್ಕೆ ಅತಿ ಮುಖ್ಯ ಎಂಬುದು ಗೊತ್ತಾಯ್ತು. ಮೀನಿನ ಜೊತೆ ಹಾಲು ಸೇವಿಸಿದ್ರೆ ಅಲರ್ಜಿಯಾಗಲು ಎರಡು ಕಾರಣವಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಒಂದು ಮೀನು ಸರಿಯಾಗಿ ಬೇಯದಿರುವುದು. ಮತ್ತೊಂದು ಹಾಲಿನ ಲ್ಯಾಕ್ಟೋಸ್ ದೇಹಕ್ಕೆ ಹೊಂದಿಕೊಳ್ಳದಿರುವುದು.