alex Certify ಮಸಾಲಾ ಮಜ್ಜಿಗೆ ಕುಡಿಯುವುದರಿಂದ ಇದೆ ಆರೋಗ್ಯ ಲಾಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಸಾಲಾ ಮಜ್ಜಿಗೆ ಕುಡಿಯುವುದರಿಂದ ಇದೆ ಆರೋಗ್ಯ ಲಾಭ

ಮಜ್ಜಿಗೆ ಕುಡಿಯುವುದರಿಂದ ಬಾಯಾರಿಕೆ ನೀಗುವುದಲ್ಲದೆ ಬೇರೆ ಯಾವ ಆರೋಗ್ಯ ಲಾಭಗಳಿವೆ ಅಂತ ಗೊತ್ತಾದ್ರೆ ನೀವು ಮರೆಯದೆ ಪ್ರತಿದಿನ ಮಜ್ಜಿಗೆ ಕುಡಿಯುವ ಅಭ್ಯಾಸವನ್ನು ಮಾಡಿಕೊಳ್ಳುತ್ತೀರಾ.

* ಅರ್ಧ ಚಮಚ ಶುಂಠಿ ರಸ ಹಾಗೂ ಜೀರಿಗೆ ಪುಡಿಯನ್ನು ಮಜ್ಜಿಗೆಯೊಂದಿಗೆ ಸೇವಿಸಿದರೆ ಆ್ಯಸಿಡಿಟಿ, ಮಲಬದ್ಧತೆ ಹಾಗೂ ಮೂಲವ್ಯಾಧಿ ನಿವಾರಣೆಯಾಗುತ್ತದೆ.

* ಅಜೀರ್ಣ ಅಥವಾ ಒಗ್ಗದ ಆಹಾರ ಸೇವಿಸಿದ ಬಳಿಕ ಕಾಡುವ ಅತಿಸಾರ, ಆಮ್ಲೀಯತೆ ಮತ್ತು ನೀರಿನಂಶದ ಕೊರತೆಯನ್ನು ನಿವಾರಿಸಬಹುದು.

* ಊಟದ ನಂತರ ಮಸಾಲೆ ಭರಿತ ಮಜ್ಜಿಗೆ ಸೇವಿಸುವುದರಿಂದ ಆಹಾರವು ಜೀರ್ಣವಾಗುವಂತೆ ಮಾಡಲು ಬಹಳಷ್ಟು ಸಹಕಾರಿಯಾಗಿದೆ.

* ಮಜ್ಜಿಗೆ ಸೇವಿಸುವುದರಿಂದ ದೇಹಕ್ಕೆ ಅಗತ್ಯವಾದ ಬಿ-ಕಾಂಪ್ಲೆಕ್ಸ್ ವಿಟಮಿನ್‌ಗಳನ್ನೂ, ಪ್ರೋಟೀನ್ ಮತ್ತು ಪೊಟ್ಯಾಷಿಯಂ ನಂತಹ ಖನಿಜಾಂಶಗಳನ್ನು ಒದಗಿಸುತ್ತದೆ.

* ಮಜ್ಜಿಗೆಗೆ ಸೈಂಧವ ಉಪ್ಪು ಮತ್ತು ಹಸಿ ಶುಂಠಿಯ ರಸವನ್ನು ಬೆರೆಸಿ ಸೇವಿಸುವುದರಿಂದ ವಾಂತಿ ಕಡಿಮೆಯಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...