ಮೂತ್ರ ವಿಸರ್ಜನೆ ಮಾಡುವಾಗ ಅನೇಕರಿಗೆ ಖಾಸಗಿ ಭಾಗದಲ್ಲಿ ನೋವು, ತುರಿಕೆಯಾಗುತ್ತದೆ. ಕೊಳಕು ಸಾರ್ವಜನಿಕ ಶೌಚಾಲಯ ಬಳಕೆ ಇದಕ್ಕೆ ಮುಖ್ಯ ಕಾರಣ. ಕೊಳಕು ಶೌಚಾಲಯದಲ್ಲಿ ಇರುವ ವೈರಸ್ಗಳು ಮತ್ತು ಬ್ಯಾಕ್ಟೀರಿಯಾಗಳು ಮೂತ್ರದ ಸೋಂಕಿಗೆ ಕಾರಣವಾಗುತ್ತವೆ.
ಸಾಮಾನ್ಯ ಭಾಷೆಯಲ್ಲಿ ಇದನ್ನು ಯುಟಿಐ ಎಂದು ಕರೆಯಲಾಗುತ್ತದೆ. ಯುಟಿಐ ಸಾಬೀತಾದ್ರೆ ಆ್ಯಂಟಿಬಯೋಟಿಕ್ ಸೇವನೆಗೆ ವೈದ್ಯರು ಸಲಹೆ ನೀಡ್ತಾರೆ. ಕೆಲವೊಮ್ಮೆ ಅಜಾಗರೂಕತೆಯಿಂದಾಗಿ, ಈ ಸಮಸ್ಯೆ ಮತ್ತೆ ಕಾಡುತ್ತದೆ.
ಯುಟಿಐನಿಂದ ರಕ್ಷಣೆ ಪಡೆಯಲು ಸಾಕಷ್ಟು ನೀರನ್ನು ಕುಡಿಯಬೇಕು. ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿದ್ರೆ ಮೂತ್ರದ ಮೂಲಕ ಬ್ಯಾಕ್ಟೀರಿಯಾಗಳು ಹೊರಗೆ ಬರುತ್ತವೆ. ಇದ್ರಿಂದ ದೊಡ್ಡ ಅಪಾಯ ತಪ್ಪಿದಂತಾಗುತ್ತದೆ.
ಶಾರೀರಿಕ ಸಂಬಂಧ ಬೆಳೆಸುವ ವೇಳೆ ಕಾಳಜಿ ವಹಿಸಬೇಕು. ಸಂಬಂಧ ಬೆಳೆಸಿದ ನಂತ್ರ ಖಾಸಗಿ ಅಂಗವನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ಹಾಗೆ ಮೂತ್ರ ವಿಸರ್ಜನೆ ಮಾಡಬೇಕು. ಹೀಗೆ ಮಾಡಿದ್ರೆ ಬ್ಯಾಕ್ಟೀರಿಯಾ ಒಳಗೆ ಸೇರುವುದಿಲ್ಲ.
ಶೌಚಾಲಯ ಬಳಕೆ ಮಾಡುವ ಮೊದಲು ಫ್ಲಶ್ ಮಾಡಲು ಮರೆಯದಿರಿ. ಫ್ಲಶ್ ಮಾಡಿ ಅಥವಾ ಮಗ್ ನಲ್ಲಿ ನೀರನ್ನು ಹಾಕಬಹುದು. ಇಂಡಿಯನ್ ಆಗಿರಲಿ ಇಲ್ಲ ಫಾರಿನ್ ಶೈಲಿಯ ಶೌಚಾಲಯವಾಗಿರಲಿ ದೇಹಕ್ಕೆ ಆಸನ ಟಚ್ ಆಗದಂತೆ ನೋಡಿಕೊಳ್ಳಿ.