ಮಹಿಳೆಯರಿಗೆ ಅತ್ಯವಶ್ಯಕ ವಿಟಮಿನ್ ಡಿ: ಇದರ ಹಿಂದಿದೆ ಪ್ರಮುಖ ಕಾರಣ

ಮನೆಕೆಲಸದಲ್ಲಿ ಗೃಹಿಣಿಯರು ಬಿಝಿ ಇರುವುದರಿಂದ ಮನೆಯಿಂದ ಹೊರಬರುವುದು ಅಷ್ಟಕಷ್ಟೆ. ಹೀಗಾಗಿ ಅಂತಹವರಲ್ಲಿ ವಿಟಮಿನ್ ಡಿ ಲೋಪ ಉಂಟಾಗುತ್ತದೆ. ವಿಟಮಿನ್ ‘ಡಿ’ ಮಹಿಳೆಯರಲ್ಲಿ 30 ನಾನೋ ಗ್ರಾಂಗಳಿಗಿಂತ ಹೆಚ್ಚಾಗಿ ಇರಬೇಕು.

ವಿಟಮಿನ್ ಡಿ ಮಹಿಳೆಯರಲ್ಲಿ ಹಾರ್ಮೋನಿನಂತೆ ಕೆಲಸ ಮಾಡುತ್ತದೆ. ಹಾಗಾಗಿ ಅದರ ಲೋಪವಿದ್ದಾಗ ನಿರ್ಲಕ್ಷ್ಯ ಮಾಡಬಾರದು.

ಮುಖ್ಯವಾಗಿ ಡಿ ವಿಟಮಿನ್ ಶರೀರದಲ್ಲಿರುವ ಕೊಬ್ಬನ್ನು ಕರಗಿಸುತ್ತದೆ. ಇದರ ಲೋಪವಿದ್ದಾಗ ಶರೀರ ಕ್ಯಾಲ್ಸಿಯಂ ಅನ್ನು ಸರಿಯಾಗಿ ಗ್ರಹಿಸುವುದಿಲ್ಲ. ಇದರಿಂದ ಕ್ಯಾಲ್ಸಿಯಂ ಕೊರತೆ ಕೂಡ ಉಂಟಾಗುತ್ತದೆ.

ವಿಟಮಿನ್ ಡಿ, ಆಹಾರದಿಂದ ನಮಗೆ ಸರಿಯಾಗಿ ದೊರೆಯುವುದಿಲ್ಲ. ಒಂದು ವೇಳೆ ದೊರೆತರೂ ಮೊಟ್ಟೆಯ ಹಳದಿ ಭಾಗದಿಂದ ಸ್ವಲ್ಪ ದೊರೆಯುತ್ತದೆ. ಆದರೆ ಬಿಸಿಲಿನಿಂದ ಇದು ಚೆನ್ನಾಗಿ ದೊರೆಯುತ್ತದೆ.

ಅತಿ ನೇರಳೆ  ಕಿರಣ `ಬಿ’ ಕಿರಣಗಳು ನಮ್ಮ ಚರ್ಮದ ಮೇಲೆ ಬೀಳುವಂತೆ ನೋಡಿಕೊಳ್ಳಬೇಕಷ್ಟೆ. ಈ ಅಲ್ಟ್ರಾ ವಯಲೆಟ್ ರೇಸ್ ಅಂದರೆ ಅತಿ ನೇರಳೆ  ಕಿರಣ  ಬೆಳಿಗ್ಗೆ ಹನ್ನೊಂದು ಗಂಟೆಯಿಂದ ಮಧ್ಯಾಹ್ನ ಎರಡು ಗಂಟೆಯವರೆಗೂ ಇರುತ್ತವೆ. ಆಗ ಬಿಸಿಲು ಮೈ ಮೇಲೆ ಬೀಳುವಂತೆ ನೋಡಿಕೊಂಡರೆ ಒಳ್ಳೆಯದು. ಆಗ ಚರ್ಮಕ್ಕೆ ಸನ್ ಸ್ಕ್ರೀನ್ ಲೋಷನ್ ಬಳಸಬಾರದು.

ಚರ್ಮದ ಸತ್ವದಿಂದ ಐದರಿಂದ ಏಳು ನಿಮಿಷಗಳವರೆಗೆ ಬಿಸಿಲಿನಲ್ಲಿ ನಿಲ್ಲಬೇಕೆಂದು ವೈದ್ಯರು ಹೇಳುತ್ತಾರೆ. ಮುಖ್ಯವಾಗಿ ಈ ಕಿರಣಗಳು ಮುಖ, ಕತ್ತು, ಕಾಲು, ಕೈಗಳ ಮೇಲೆ ಬೀಳುವ ಹಾಗೆ ನೋಡಿಕೊಳ್ಳಬೇಕು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read