ʼಹಾಲುʼ ಕುಡಿಯಲು ಬೋರ್ ಆಗಿದ್ದರೆ, ಇವನ್ನು ಸೇವಿಸಿ

ಕೆಲವರಿಗೆ ಹಾಲು ಕುಡಿಯುವುದು ಎಂದರೆ ಆಗುವುದಿಲ್ಲ. ಜೊತೆಗೆ ಮೊಸರು, ಬೆಣ್ಣೆ, ತುಪ್ಪ ಹಾಗೂ ಹಾಲಿನ ಉತ್ಪನ್ನಗಳನ್ನು ಸೇವಿಸಲು ಮೂಗು ಮುರಿಯುತ್ತಾರೆ.

ಅಂಥವರಿಗಾಗಿಯೇ ಸಾಕಷ್ಟು ಬದಲಿ ಹಾಲುಗಳಿವೆ. ಹಾಲು ಬೇಡ ಎನ್ನುವವರಿಗೆ ಈ ಬದಲಿ ಪಾನೀಯಗಳಲ್ಲಿ ಅಷ್ಟೇ ಪೌಷ್ಟಿಕಾಂಶ ದೊರೆಯುತ್ತದೆ. ಇಲ್ಲಿದೆ ಅದರ ಲಿಸ್ಟ್.

ತೆಂಗಿನ ಹಾಲು

ತೆಂಗಿನಕಾಯಿಯಿಂದ ತೆಗೆಯುವ ಹಾಲು ಇದು. ತೆಂಗಿನ ಕಾಯಿ ತುಂಡುಗಳನ್ನು ಮಿಕ್ಸಿಯಲ್ಲಿ ಅರೆದು, ಸೋಸಿ ಹಾಲು ತೆಗೆಯುತ್ತಾರೆ. ಈ ಹಾಲನ್ನು ಅಡುಗೆಯಲ್ಲಿ ಬಳಸಲಾಗುತ್ತದೆ.

ಈ ಹಾಲಿಗೆ ತುಸು ಪಂಚಧಾರಾ ಕಲಸಿ ಕುಡಿದರೆ ಎಲುಬು ಗಟ್ಟಿಯಾಗುತ್ತದೆ. ಕಣ್ಣು ನೋವು ಗುಣವಾಗುತ್ತದೆ.

ಸೋಯಾ ಹಾಲು

ಬಲಿತ ಸೋಯಾ ಅವರೆಯನ್ನು ನೀರಿನಲ್ಲಿ ನೆನೆಸಿಟ್ಟು ಹಾಲು ತೆಗೆಯುತ್ತಾರೆ. ಲ್ಯಾಕ್ಟೋಸ್ ಇಷ್ಟವಿಲ್ಲದವರು ಇದನ್ನು ಕುಡಿಯಬಹುದು. ಈ ಹಾಲಿನಿಂದ ರಕ್ತನಾಳಗಳು ಬಲಗೊಳ್ಳುತ್ತವೆ.

ಮೆನೊಪಾಸ್ ಸಮಯದಲ್ಲಿ ಯಾವುದೇ ಸಮಸ್ಯೆಯಾಗುವುದಿಲ್ಲ. ಇದರಲ್ಲಿ ಸ್ಯಾಚುರೇಟೆಡ್ ಫ್ಯಾಟ್, ಸಕ್ಕರೆ ಅಂಶ ಕಡಿಮೆ. ಮಾಂಸ ಸತ್ವಗಳು ಅಧಿಕ.

ಅಕ್ಕಿ ಹಾಲು

ತೆನೆ ಭತ್ತದಿಂದ ತೆಗೆಯುವ ಈ ಹಾಲಿನಲ್ಲಿ ಸಿಗುವ ಪೋಷಕಾಂಶಗಳು ಹೆಚ್ಚು ಸಿಹಿಯಾಗಿರುತ್ತದೆ. ಬಗೆ ಬಗೆಯ ಭತ್ತದಲ್ಲಿ ವಿವಿಧ ರುಚಿಯು ಆಗುತ್ತದೆ. ಎಲುಬು ರೋಗಕ್ಕೆ ಒಳ್ಳೆಯದು.

ಬಾದಾಮಿ ಹಾಲು

ಬಾದಾಮಿ ನೆನೆಸಿಟ್ಟು ಹಾಲು ತೆಗೆಯಬೇಕು. ಇದರಲ್ಲಿ ಮಾಂಸ ಸತ್ವ, ಆಂಟಿಆಕ್ಸಿಡೆಂಟ್, ವಿಟಮಿನ್ ಇ, ಕಬ್ಬಿಣಾಂಶ, ಒಮೆಗಾ-6, ಫ್ಯಾಟಿ ಆಮ್ಲಗಳು ದೊರೆಯುತ್ತವೆ. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read