ತಲೆನೋವು ಬಂದಾಗ ನೋವು ನಿವಾರಕ ಮಾತ್ರೆ ನುಂಗುವ ಬದಲು ಮನೆಮದ್ದು ಮಾಡಿದರೆ ಯಾವುದೇ ಅಡ್ಡಪರಿಣಾಮ ಉಂಟಾಗುವುದಿಲ್ಲ. ಸಾಮಾನ್ಯ ತಲೆನೋವು ಎದುರಾದರೆ ಮಾತ್ರೆ ನುಂಗುವ ಬದಲು ಈ ಮನೆ ಮದ್ದಿನಿಂದ ತಕ್ಷಣ ಪರಿಹಾರ ಕಂಡುಕೊಳ್ಳಬಹುದು.
* ಜಾಯಿಕಾಯಿಯ ಪುಡಿಯನ್ನು ಬಿಸಿ ನೀರಲ್ಲಿ ಕಲಸಿ ಅದನ್ನು ಕುಡಿಯುವುದರಿಂದ ತಲೆನೋವು ಕಡಿಮೆಯಾಗುತ್ತದೆ.
* ಕೊಬ್ಬರಿ ಎಣ್ಣೆಗೆ ಲವಂಗದ ಎಣ್ಣೆ ಮಿಕ್ಸ್ ಮಾಡಿ ಹಣೆಗೆ ಮಸಾಜ್ ಮಾಡಿ ರಿಲ್ಯಾಕ್ಸ್ ಆದರೆ ತಲೆನೋವು ಕಡಿಮೆಯಾಗುತ್ತದೆ.
* ನಿದ್ದೆ ಕಡಿಮೆಯಾಗಿ ತಲೆನೋವು ಬಂದಿದ್ದರೆ ಬಸಳೆ ಸೊಪ್ಪಿನ ರಸವನ್ನು ಹಣೆಗೆ ಲೇಪ ಮಾಡಿ ನಿದ್ದೆ ಮಾಡಿದರೆ ತಲೆನೋವು ಮಾಯವಾಗುತ್ತದೆ.
* ಪಾಲಾಕ್ ಸೊಪ್ಪಿನ ರಸ ಮತ್ತು ಕ್ಯಾರೆಟ್ ರಸ ಬೆರೆಸಿ ಕುಡಿದರೆ ಮೈಗ್ರೇನ್ ಕಡಿಮೆಯಾಗುತ್ತದೆ.
* ತಲೆಯಲ್ಲಿನ ರಕ್ತನಾಳಗಳ ಉರಿಯೂತವನ್ನು ತಗ್ಗಿಸಲು ಸಹಾಯ ಮಾಡಿ ತಲೆನೋವನ್ನು ನಿವಾರಿಸುತ್ತದೆ ಶುಂಠಿ. ದಿನವೂ 2 ರಿಂದ 3 ಬಾರಿ 2 ಚಮಚ ಶುಂಠಿ ರಸ ಮತ್ತು 2 ಚಮಚ ನಿಂಬೆ ರಸವನ್ನು ಮಿಕ್ಸ್ ಮಾಡಿ ಕುಡಿಯಬೇಕು. ಐಸ್‌ನ ತಂಪು ಉರಿಯೂತಗಳಿಂದ ಉಂಟಾಗುವ ತಲೆನೋವನ್ನು ಕಡಿಮೆ ಮಾಡುತ್ತದೆ.
* ಐಸ್ ನೀರಲ್ಲಿ ಅದ್ದಿದ ಟವೆಲ್‌ನ್ನು ತಲೆಗೆ ಪದೇ ಪದೇ ಹಾಕಿಕೊಳ್ಳುತ್ತಿದ್ದರೆ, ರಿಲ್ಯಾಕ್ಸ್ ಅನಿಸುತ್ತದೆ.
* ತುಳಸಿ ಎಲೆಯ ರಸವನ್ನು ಶ್ರೀಗಂಧದ ಪುಡಿ ಜೊತೆ ಕಲಸಿ ಹಣೆಗೆ ಲೇಪ ಮಾಡಿದರೆ ತಲೆನೋವು ಶಮನವಾಗುತ್ತದೆ.