ಮಕ್ಕಳಿಗೆ ಹಸಿವಾಗ್ತಿಲ್ಲ ಎಂದಾದ್ರೆ ಸೇಬು ಹಣ್ಣನ್ನು ತಿನ್ನಲು ಕೊಡಿ. ಇದರಿಂದ ಮಕ್ಕಳ ರಕ್ತ ಶುದ್ಧವಾಗುವುದಲ್ಲದೆ ಹಸಿವಾಗುತ್ತದೆ. ಸೇಬು ಹಣ್ಣಿನ ಜೊತೆ ಕಪ್ಪು ಉಪ್ಪನ್ನು ಅವಶ್ಯವಾಗಿ ನೀಡಿ. ಮಕ್ಕಳು ಸೇಬು ಹಣ್ಣನ್ನು ತಿನ್ನುವುದಿಲ್ಲವೆಂದಾದ್ರೆ ಜ್ಯೂಸ್ ಮಾಡಿ ಕುಡಿಸಿ.
ಪುದೀನಾ
ಪುದೀನಾ ದೇಹವನ್ನು ತಂಪು ಮಾಡುತ್ತದೆ. ಸ್ವಲ್ಪ ಪುದೀನಾ ರಸಕ್ಕೆ ಜೇನು ತುಪ್ಪವನ್ನು ಬೆರೆಸಿ ಬೆಳಿಗ್ಗೆ ಹಾಗೂ ರಾತ್ರಿ ಈ ಮಿಶ್ರಣವನ್ನು 1 ಚಮಚ ಬಿಸಿನೀರಿನೊಂದಿಗೆ ನೀಡಿ. ಇದರಿಂದ ಹೊಟ್ಟೆ ಸ್ವಚ್ಛವಾಗಿ ಹಸಿವು ಹೆಚ್ಚಾಗುತ್ತದೆ.
ಹಸಿರು ತರಕಾರಿ
ಹಸಿರು ಎಲೆ ಹಾಗೂ ತರಕಾರಿಗಳಿಂದ ಮಾಡಿದ ಸೂಪ್ ಮಕ್ಕಳಿಗೆ ನೀಡಿ. ಇದು ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ. ಹಾಗೆ ಹೊಟ್ಟೆಯಲ್ಲಿರುವ ಗ್ಯಾಸ್ ಹೋಗಲಾಡಿಸಿ ಹಸಿವು ಹೆಚ್ಚಿಸುತ್ತದೆ.