ಮಂಜಿನ ಬೆಟ್ಟಗಳ ನಡುವೆ ಇರುವ ಈ ಸ್ಥಳವು ಹಿಮಾಚಲ ಪ್ರದೇಶದ ಹೃದಯಭಾಗ. ಪರ್ವತಪ್ರದೇಶ, ದೇವಾಲಯ, ಸಾಹಸಕ್ರೀಡೆಗಳು ಎಲ್ಲವೂ ಒಂದೇ ಪ್ರದೇಶದಲ್ಲಿ ಸಿಗುತ್ತವೆ.
ಇಲ್ಲಿನ ಪ್ರಮುಖ ಆಕರ್ಷಣೆ ರೋಹತಂಗ್ ಪಾಸ್. ಮನಾಲಿಯಿಂದ 51 ಕಿಮೀ ದೂರದಲ್ಲಿರುವ ಇದು ಸಮುದ್ರಮಟ್ಟಕ್ಕಿಂತ 3979 ಮೀಟರ್ ಎತ್ತರದಲ್ಲಿದೆ. ಬೆಟ್ಟ ಪ್ರದೇಶ ಪೂರ್ತಿಯಾಗಿ ಹಿಮದಿಂದ ಆವೃತವಾಗಿದೆ. ಇಲ್ಲಿ ಸ್ನೋ ಸ್ಕೂಟರ್, ಸ್ಕೀಯಿಂಗ್, ಮೌಂಟೆನ್ ಬೈಕ್ ರೈಡಿಂಗ್ಗೆ ಅವಕಾಶವಿದೆ.
ಗೋವಾ
ಸಾಮಾನ್ಯವಾಗಿ ಯುವ ಜನತೆಗೆ ಇಷ್ಟವಾಗುವ ಸ್ಥಳ ಇದು. ಪಾರ್ಟಿ ಹಬ್ ಆಗಿರುವ ಗೋವಾದಲ್ಲಿ ಪೋರ್ಚುಗೀಸ್ ಕಲ್ಚರ್ ಕಾಣಬಹುದು. ಬ್ಯಾಚುಲರ್ಸ್ ಫ್ರೆಂಡ್ಸ್ ಜೊತೆ ಇಲ್ಲಿ ಬಂದು ಪಾರ್ಟಿ ಮಾಡುತ್ತಾರೆ. ಪ್ರತಿಯೊಬ್ಬರು ಬೀಚ್, ಚರ್ಚ್, ನೈಟ್ ಬಾರ್, ಕ್ಲಬ್, ಕೋಟೆ ಮುಂತಾದ ಸ್ಥಳಗಳಿಗೆ ಭೇಟಿ ನೀಡಬಹುದು.
ಶ್ರೀನಗರ
ಕಾಶ್ಮೀರದಲ್ಲಿರುವ ಶ್ರೀನಗರ ಬೆಟ್ಟಗಳಿಂದ ಆವೃತವಾಗಿರುವ ಪ್ರದೇಶ. ಇಲ್ಲೂ ಕೂಡ ಎಂಜಾಯ್ ಮಾಡಬಹುದು.
ಕಸೋಲ್
ಈ ಸ್ಥಳಕ್ಕೆ ಪ್ರತಿಯೊಬ್ಬರು ಜೀವನದಲ್ಲಿ ಒಮ್ಮೆಯಾದರೂ ಪ್ರಯಾಣ ಮಾಡಲೇಬೇಕು. ಅಲ್ಲಿಗೆ ಒಮ್ಮೆ ಹೋದರೆ ಲೈಫ್ ಟೈಮ್ ನೆನಪುಗಳೊಂದಿಗೆ ಹಿಂದಿರುಗುತ್ತಾರೆ. ಇಲ್ಲಿ ಸುಂದರವಾದ ಬೆಟ್ಟ, ಗುಡ್ಡ, ಪರ್ವತಗಳನ್ನು ನೀವು ಕಾಣಬಹುದು. ಇದು ಶಾಂತಿಯುತ ಪ್ರದೇಶವಾಗಿದೆ.
ಕೊಡಗು
ಕೊಡಗನ್ನು ಭಾರತದ ಸ್ಕಾಟ್ಲ್ಯಾಂಡ್ ಎಂದು ಕರೆಯಲಾಗುತ್ತದೆ. ಕೊಡಗು ಅಥವಾ ಕೂರ್ಗ್ ಜನಪ್ರಿಯ ಪ್ರವಾಸಿ ತಾಣ. ಐತಿಹಾಸಿಕ ಸ್ಮಾರಕಗಳು, ಅರಮನೆಗಳು, ಕೋಟೆಗಳು, ಪುರಾತನ ದೇವಸ್ಥಾನಗಳು, ಪಾರ್ಕ್ಗಳು, ಜಲಪಾತಗಳು ಮತ್ತು ಅಭಯಾರಣ್ಯಗಳಂತಹ ಆಕರ್ಷಕ ಸ್ಥಳಗಳು ಕೊಡಗಿನಲ್ಲಿವೆ.
ಇಲ್ಲಿನ ಪ್ರಮುಖ ಆಕರ್ಷಣೆಯೆಂದರೆ ಅಬ್ಬಿ ಜಲಪಾತ, ಇರ್ಪು ಜಲಪಾತ, ಮಳ್ಳಳ್ಳಿ ಜಲಪಾತ, ಮಡಿಕೇರಿ ಕೋಟೆ, ರಾಜಾ ಸೀಟ್, ನಾಲ್ಕ್ನಾಡ್ ಅರಮನೆ ಮತ್ತು ಗದ್ದಿಗೆ, ಕೊಡಗಿನಲ್ಲಿ ಚೆಲವಾರ ಜಲಪಾತ, ಹಾರಂಗಿ ಡ್ಯಾಮ್, ಕಾವೇರಿ ನಿಸರ್ಗಧಾಮ, ದುಬಾರೆ ಆನೆ ಕ್ಯಾಂಪ್, ಹೊನ್ನಮ್ಮನ ಕೆರೆ ಮತ್ತು ಮಂಡಲಪಟ್ಟಿ ಪ್ರದೇಶಗಳಂತ ನಿಸರ್ಗ ತಾಣಗಳನ್ನು ನೋಡಬಹುದು. ಕಾಫಿ ತೋಟಕ್ಕೆ ಫೇಮಸ್ ಆಗಿರುವ ಈ ಪ್ರದೇಶ ಯಾವಾಗಲೂ ಕೂಲ್ ಆಗಿರುತ್ತದೆ.