ವರ್ಷಪೂರ್ತಿ ಪ್ರಯಾಣಿಕರನ್ನು ಸೆಳೆಯುವ ಬೀಚ್ ಇದು. ತಾಳೆ ಮರಗಳ ಜೊತೆ ಸುತ್ತಲಿನ ಹಸಿರು ವಾತಾವರಣದ ನಡುವೆ ಸಮುದ್ರ ತೀರ ಆಹ್ಲಾದ ಭಾವ ನೀಡುತ್ತದೆ. ಸಾಹಸ ಚಟುವಟಿಕೆ, ಪಾರ್ಟಿ, ಆಯುರ್ವೇದ ಚಿಕಿತ್ಸೆಗೆ ಇದು ಸಹಕಾರಿ. ಈ ಸಮಯದಲ್ಲಿ ಗೋವಾದಲ್ಲಿ ಹೆಚ್ಚು ಪ್ರವಾಸಿಗರು ಇರುವುದಿಲ್ಲ. ಹಾಗಾಗಿ ಊಟ, ವಸತಿ ಎಲ್ಲವೂ ಕಡಿಮೆ ಬೆಲೆಗೆ ಸಿಗುತ್ತವೆ.
ವೆಲ್ನೇಶ್ವರ್ ಬೀಚ್ – ಮಹಾರಾಷ್ಟ್ರ
ದೇಶದ ಪ್ರಾಚೀನ ಕಡಲ ತೀರಗಳಲ್ಲಿ ಒಂದಾದ ವೆಲ್ನೇಶ್ವರ ಬೀಚ್ ಮಹಾರಾಷ್ಟ್ರದ ಹೊರವಲಯದಲ್ಲಿದೆ. ಮಾನ್ಸೂನ್ ಋುತುವಿನಲ್ಲಿ ರಜಾದಿನವನ್ನು ಸುಂದರ ವಾತಾವರಣದಲ್ಲಿ ಆನಂದಿಸಲು ಇದು ಸಹಕಾರಿ. ಸ್ವಿಮ್ಮಿಂಗ್ ಹಾಗೂ ಸನ್ ಬಾತ್‌ಗೆ ಇದು ಹೆಸರುವಾಸಿ. ಇಲ್ಲಿರುವ ಶಿವ ಟೆಂಪಲ್‌ಗೆ ಪ್ರವಾಸಿಗರು ಹೆಚ್ಚು ಭೇಟಿ ನೀಡುತ್ತಾರೆ. ವಾಟರ್ ಸ್ಪೋರ್ಟ್ ಗೆ ಇದು ಹೆಸರುವಾಸಿ.
ಕುಡ್ಲೆ ಬೀಚ್ – ಕರ್ನಾಟಕ
ಜನಪ್ರಿಯ ಗೋಕರ್ಣ ಕಡಲ ತೀರದಿಂದ ಸ್ವಲ್ಪ ದೂರದಲ್ಲಿದೆ ಕುಡ್ಲೆ ಬೀಚ್. ಕುಡ್ಲೆ ಕಡಲ ತೀರವು ಆಕರ್ಷಣೀಯ ಭೂದೃಶ್ಯ ಹೊಂದಿದೆ. ಮಾನ್ಸೂನ್ ಸಮಯದಲ್ಲಿ ಸುತ್ತಮುತ್ತಲ ಪ್ರದೇಶವನ್ನು ಹಸಿರಿನಿಂದ ತುಂಬಿಕೊಂಡು ಮತ್ತಷ್ಟು ಸುಂದರವಾಗಿ ಕಾಣುತ್ತದೆ. ಸಮೀಪದ ಗೋಕರ್ಣ ದೇವಾಲಯಗಳನ್ನು ನೋಡಿಕೊಂಡು ಬರಬಹುದು.
ಪ್ರೊಮೆನೇಡ್ ಬೀಚ್ – ಪಾಂಡಿಚೇರಿ
ಮಾನ್ಸೂನ್ ಸಮಯದಲ್ಲಿ ಇಲ್ಲಿನ ಹವಾಮಾನ ಬೆಚ್ಚಗಿರುತ್ತದೆ. ಆದರೆ ಬೆಳಗಿನ ಮತ್ತು ಸಂಜೆ ಸಮಯದಲ್ಲಿ ಆಹ್ಲಾದಕರವಾಗಿರುತ್ತದೆ. ಇಲ್ಲಿಗೆ ಭೇಟಿ ನೀಡಿದರೆ ಇನ್ನೂ ಹಲವು ಬೀಚ್‌ಗಳಲ್ಲಿ ಮೋಜು ಮಾಡಬಹುದು. ಅರಬಿಂದೋ ಆಶ್ರಮ, ಉದ್ಯಾನ, ವಸ್ತು ಸಂಗ್ರಹಾಲಯಗಳನ್ನು ನೋಡಿಕೊಂಡು ಬರಬಹುದು.