alex Certify ಆಪಲ್‌ ಸಿಡರ್ ವಿನಿಗರ್ ಸೇವಿಸುವ ಮುನ್ನ ಈ ವಿಷಯ ತಿಳಿದುಕೊಳ್ಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಪಲ್‌ ಸಿಡರ್ ವಿನಿಗರ್ ಸೇವಿಸುವ ಮುನ್ನ ಈ ವಿಷಯ ತಿಳಿದುಕೊಳ್ಳಿ

ಆಪಲ್‌ ಸಿಡರ್‌ ಕುಡಿದು ಮೈ ತೂಕ ಇಳಿಸಿಕೊಂಡವರಿದ್ದಾರೆ. ಇದನ್ನು ಕೂದಲಿಗೆ ಕಂಡೀಷನರ್‌ ಆಗಿ ಬಳಸುತ್ತಾರೆ ಹಾಗೂ ಇದನ್ನು ಕುಡಿಯುವುದರಿಂದ ಹಲವು ರೀತಿಯ ಆರೋಗ್ಯಕರ ಗುಣಗಳನ್ನು ಪಡೆಯಬಹುದು.

ಹಾಗಂತ ಇದನ್ನು ಕುಡಿಯಲು ಕೆಲವೊಂದು ಸಮಯ ಸೂಕ್ತವಲ್ಲ. ಆಪಲ್‌ ಸಿಡರ್‌ ವಿನಿಗರ್‌ ಯಾವಾಗ ಕುಡಿಯಬಾರದೆಂದು ನೋಡೋಣ ಬನ್ನಿ.

ಹಾಗೇ ಕುಡಿಯಬೇಡಿ

ಆಪಲ್‌ ಸಿಡರ್ ಕುಡಿಯುವುದಾದರೆ ನೀರಿನ ಜೊತೆ ಮಿಕ್ಸ್ ಮಾಡಿ ಕುಡಿಯಿರಿ. ಅದನ್ನು ಹಾಗೇ ಕುಡಿಯುವುದರಿಂದ ಅನ್ನನಾಳಕ್ಕೆ ಹಾನಿಯುಂಟಾಗುತ್ತದೆ.

ಮಲಗುವ ಮುಂಚೆ ಬೇಡ

ಮಲಗುವ ಮುನ್ನ ಕುಡಿಯುವುದು ಒಳ್ಳೆಯದಲ್ಲ. ಇದು ಕೂಡ ಅನ್ನನಾಳದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನೀರಿನಲ್ಲಿ ಮಿಕ್ಸ್ ಮಾಡಿ ಕುಡಿದರೂ ಅರ್ಧ ಗಂಟೆಯ ಬಳಿಕವಷ್ಟೇ ಮಲಗಿ.

ಸೂರ್ಯನ ಶಾಖ ಬೀಳುವಲ್ಲಿ ಇಡಬೇಡಿ

ಇದನ್ನು ಸೂರ್ಯನ ಶಾಖಕ್ಕೆ ಇಡಬೇಡಿ ಹಾಗೂ ಹಾಗೇ ನೇರವಾಗಿ ಕೂದಲಿಗೆ ಹಾಗೂ ತ್ವಚೆಗೆ ಹಚ್ಚಬೇಡಿ. ನೀರಿನ ಜೊತೆ ಮಿಕ್ಸ್ ಮಾಡಿ ಹಚ್ಚಿ.

ಊಟಕ್ಕೆ ಸ್ವಲ್ಪ ಮುಂಚೆ ಕುಡಿಯಬೇಡಿ

ಇದನ್ನು ಖಾಲಿ ಹೊಟ್ಟೆಯಲ್ಲಿ ಕುಡಿದರೆ ಒಳ್ಳೆಯದು. ಊಟಕ್ಕೆ ಮುಂಚೆ ಕುಡಿದರೆ ಜೀರ್ಣಕ್ರಿಯೆಗೆ ತೊಂದರೆಯಾಗುತ್ತದೆ. ವಾಸನೆಯನ್ನು ನೇರವಾಗಿ ತೆಗೆದುಕೊಳ್ಳಬೇಡಿ  ಇದರ ವಾಸನೆಯನ್ನು ತೆಗೆದುಕೊಂಡರೆ ಮೂಗು ಉರಿ ಬರಬಹುದು.

ಅಗತ್ಯ ಮೀರಿ ಕುಡಿಯಬೇಡಿ

ಆಪಲ್‌ ಸಿಡರ್ ವಿನಿಗರ್‌ ಅನ್ನು ಅಗತ್ಯ ಪ್ರಮಾಣದಲ್ಲಿ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು. ಇದನ್ನು ತೆಗೆದುಕೊಳ್ಳುವ ಮುನ್ನ ವೈದ್ಯರ ಸಲಹೆ ಪಡೆಯಿರಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...