ಸಂಜೆ ಸ್ನಾಕ್ಸ್ ಗೆ ಮಾಡಿ ಸವಿಯಿರಿ ‘ಬ್ರೆಡ್ ರೋಲ್’

ಸಂಜೆ ಕಾಫಿ – ಟೀ ಜೊತೆ ಏನನ್ನಾದರೂ ಸವಿಯಬೇಕು ಅಂತ ಬಯಸುತ್ತೇವೆ. ಹಾಗಂತ ಪದೇ ಪದೇ ಕುರುಕಲು ತಿನ್ನಲು ಸಾಧ್ಯವಿಲ್ಲ. ಬೇರೆ ಬೇರೆ ರುಚಿಕರ ತಿಂಡಿಗಳ ಟೇಸ್ಟ್ ಮಾಡೋಣ ಅನಿಸುತ್ತದೆ. ಹಾಗಿದ್ದರೆ ಈ ಬಾರಿ ರುಚಿ ನೋಡಿ ಬ್ರೆಡ್ ರೋಲ್.

ಬೇಕಾಗುವ ಸಾಮಾಗ್ರಿಗಳು

ಬ್ರೆಡ್ ಪೀಸ್ ಗಳು 10-12
ಆಲೂಗಡ್ಡೆ 1 1/2 ಕಪ್
(ಸಣ್ಣಗೆ ಹೆಚ್ಚಿದ್ದು)
ಕ್ಯಾರೆಟ್ ತುರಿ 1 ಕಪ್
ನೆನೆಸಿದ ಬಟಾಣಿ 1/2 ಕಪ್
ಖಾರದ ಪುಡಿ 1/2 ಚಮಚ
ಗರಂ ಮಸಾಲಾ ಪುಡಿ 1/2 ಚಮಚ
ಅಮೆಚೂರ್ ಪುಡಿ 1/2 ಚಮಚ
ಮೈದಾ ಹಿಟ್ಟು 1 ಟೇಬಲ್ ಸ್ಪೂನ್
ಕೊತ್ತಂಬರಿ ಸೊಪ್ಪು 4 ಎಸಳು
ಎಣ್ಣೆ ಕರಿಯಲು
ಅರಿಶಿಣ ಪುಡಿ ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ವಿಧಾನ

ಆಲೂಗಡ್ಡೆ, ಬಟಾಣಿ, ಕ್ಯಾರೆಟ್ ತುರಿಯನ್ನು ಬೇರೆಬೇರೆಯಾಗಿ ಬೇಯಿಸಿಕೊಳ್ಳಬೇಕು. ನಂತರ ಎಲ್ಲವನ್ನು ಸೇರಿಸಿ ಹಿಸುಕಿ ಮುದ್ದೆಯಂತೆ ಮಾಡಿಕೊಳ್ಳಬೇಕು.

ಇದಕ್ಕೆ ಖಾರದ ಪುಡಿ, ಗರಂ ಮಸಾಲ ಪುಡಿ, ಅಮೆಚೂರ್ ಪುಡಿ, ಉಪ್ಪು, ಅರಿಶಿಣ ಪುಡಿ, ಕೊತ್ತಂಬರಿ ಸೊಪ್ಪು ಎಲ್ಲವನ್ನು ಹಾಕಿ ಕಲಸಿಕೊಳ್ಳಬೇಕು.

ಬ್ರೆಡ್ಡನ್ನು ಬಿಸಿ ತವದ ಮೇಲೆ ಹಾಕಿ ಐದು ನಿಮಿಷ ಬಿಟ್ಟು ತೆಗೆಯಿರಿ. ನಂತರ ಇದನ್ನು ಲಟ್ಟಣಿಗೆಯಿಂದ ಲಟ್ಟಿಸಿ ಸ್ವಲ್ಪ ಅಗಲ ಮಾಡಿಕೊಳ್ಳಿ. ಬ್ರೆಡ್ ಸ್ಲೈಸ್ ಮೇಲೆ ಮುದ್ದೆಯಂತೆ ಮಾಡಿಕೊಂಡ ತರಕಾರಿಯನ್ನು ಹರಡಿ ಬ್ರೆಡ್ಡನ್ನು ಅರ್ಧಕ್ಕೆ ಮಡಚಿಕೊಳ್ಳಬೇಕು.

ಮತ್ತೊಂದು ಕಡೆ ಮೈದಾಹಿಟ್ಟನ್ನು ನೀರಿಗೆ ಹಾಕಿ ಕಲಸಿಕೊಳ್ಳಬೇಕು. ನೀರಿನಿಂದ ಮಿಶ್ರಣ ಮಾಡಿಕೊಂಡ ಮೈದಾದಿಂದ ಬ್ರೆಡ್ ಅಂಚುಗಳನ್ನು ಅಂಟಿಸಿಕೊಳ್ಳಬೇಕು. ತಯಾರಾದ ಬ್ರೆಡ್ ರೋಲ್ ಗಳನ್ನು ಎಣ್ಣೆಯಲ್ಲಿ ಕರೆದು ಗರಿಗರಿಯಾಗಿ ತಿನ್ನಲು ನೀಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read