ಆಚಾರ್ಯ ಚಾಣಕ್ಯ ಅನೇಕ ಸಂಗತಿಗಳ ಬಗ್ಗೆ ಹೇಳಿದ್ದಾರೆ. ಅವ್ರ ನೀತಿ ಈಗ್ಲೂ ಅನ್ವಯಿಸುತ್ತದೆ. ಚಾಣಕ್ಯ, ಪುರುಷರು ಎಲ್ಲ ವಿಷ್ಯಗಳನ್ನು ಎಲ್ಲರ ಮುಂದೆ ಹೇಳಬಾರದು. ಕೆಲ ವಿಷ್ಯಗಳನ್ನು ತಮ್ಮಲ್ಲಿಯೇ ಇಟ್ಟುಕೊಳ್ಳಬೇಕು. ಇಲ್ಲವಾದ್ರೆ ಆಪತ್ತು ನಿಶ್ಚಿತ ಎಂದಿದ್ದಾರೆ.
ಚಾಣಕ್ಯನ ಪ್ರಕಾರ, ಹಣ ನಷ್ಟವಾದ್ರೆ ಈ ಸಂಗತಿಯನ್ನು ಪುರುಷ ಯಾರಿಗೂ ಹೇಳಬಾರದಂತೆ. ಅದ್ರಲ್ಲೂ ಅಪರಿಚಿತರಿಗೆ ಹೇಳಬಾರದಂತೆ. ಹಣವಿಲ್ಲ ಎಂಬ ಸಂಗತಿ ಗೊತ್ತಾದ್ರೆ ಯಾರೂ ಸಹಾಯಕ್ಕೆ ಬರುವುದಿಲ್ಲ. ಬದಲಾಗಿ ನಮ್ಮಿಂದ ದೂರ ಹೋಗ್ತಾರೆ.
ಗಂಡ-ಹೆಂಡತಿ ಮಧ್ಯೆ ಯಾವುದೇ ಸಮಸ್ಯೆ ಇದ್ದರೂ ಅವರಿಬ್ಬರೇ ಬಗೆಹರಿಸಿಕೊಳ್ಳಬೇಕು. ಮೂರನೇ ವ್ಯಕ್ತಿಗೆ ಅದು ತಿಳಿಯಬಾರದು. ಹೆಂಡತಿ ನಕಾರಾತ್ಮಕ ವಿಷ್ಯಗಳನ್ನು ಪತಿ ಎಂದೂ ಬೇರೆಯವರಿಗೆ ಹೇಳಬಾರದು. ಹಾಗೆ ಹೇಳಿದ್ದಲ್ಲಿ ಪತ್ನಿ ಬೇರೆಯವರ ಮುಂದೆ ಹಾಸ್ಯದ ವಸ್ತುವಾಗ್ತಾಳೆ. ಒಂದು ವೇಳೆ ಪತ್ನಿ ತನ್ನ ಸ್ವಭಾವದಲ್ಲಿ ಸುಧಾರಣೆ ಮಾಡಿಕೊಂಡಲ್ಲಿ ಪತಿ ಹಾಸ್ಯಕ್ಕೀಡಾಗ್ತಾನೆ.
ಬಹುತೇಕರು ತಮ್ಮ ದುಃಖವನ್ನು ಬೇರೆಯವರ ಮುಂದೆ ಹಂಚಿಕೊಳ್ತಾರೆ. ಇದು ಒಳ್ಳೆಯದಲ್ಲ. ಬೇರೆಯವರು ನಮ್ಮ ದುಃಖಕ್ಕೆ ಆಗುವುದಿಲ್ಲ. ಬದಲಾಗಿ ನಮ್ಮ ಹಿಂದೆ ನಮ್ಮ ವಿಷ್ಯವನ್ನು ಮಾತನಾಡಿಕೊಳ್ತಾರೆ.
ಮೂರ್ಖರಿಂದ ನಿಮಗೆ ಅವಮಾನವಾದ್ರೆ ಅದನ್ನು ಬೇರೆಯವರಿಗೆ ಹೇಳಬೇಡಿ. ಅಂತ ವಿಷ್ಯ ನಿಮ್ಮ ಗೌರವಕ್ಕೆ ಧಕ್ಕೆ ತರುತ್ತದೆ.