ನಿತ್ಯ ಮೊಸರು ಸೇವಿಸುವುದು ಆರೋಗ್ಯಕ್ಕೆ ಎಷ್ಟು ಲಾಭವಿದೆ ಗೊತ್ತಾ….?

ಬಹಳ ಮಂದಿ ಮಹಿಳೆಯರು ಹಾಲು ಮಾತ್ರವಲ್ಲ, ಮೊಸರು ಕೂಡ ತಿನ್ನುವುದಿಲ್ಲ. ದಪ್ಪಗಾಗುತ್ತೇವೆ ಎಂಬ ಭಯ ಅವರದ್ದು. ಆದರೆ ಮೊಸರು ತಿನ್ನುವುದರಿಂದ ಎಷ್ಟು ಲಾಭವಿದೆ ಎಂದು ತಿಳಿಯಿರಿ.

* ಮೊಸರಿನ ಪೋಷಕಾಂಶಗಳನ್ನು ಜೀರ್ಣಾಂಗಗಳು ಸುಲಭವಾಗಿ ಸ್ವೀಕರಿಸುತ್ತವೆ. ಇದರಲ್ಲಿ ಮಸಾಲ ಪದಾರ್ಥಗಳನ್ನು ಕಲಸಿ ತಿಂದರೆ ಅದರ ಘಾಟು ತಗ್ಗಿ ಹಾಯಾಗಿರುತ್ತದೆ.

* ಪ್ರತೀ ದಿನ ಮೊಸರು ತಿಂದರೆ ಎದೆ ಆರೋಗ್ಯ ಗಟ್ಟಿಯಾಗಿರುತ್ತದೆ. ಅಧಿಕ ರಕ್ತದೊತ್ತಡ ತಗ್ಗುತ್ತದೆ. ಕೊಲೆಸ್ಟ್ರಾಲ್ ಕೂಡ ಹತೋಟಿಗೆ ಬರುತ್ತದೆ.

* ಮೊಸರಿನಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಕ್ರಿಮಿಗಳನ್ನು ನಾಶಗೊಳಿಸುತ್ತದೆ. ಜನನೇಂದ್ರಿಯ ಇನ್ಫೆಕ್ಷನ್ ನಿಂದ ಕಾಪಾಡುತ್ತದೆ.

* ಮಹಿಳೆಯರನ್ನು ಕಾಡುವ ಆಸ್ಟಿಯೋಪೋರೋಸಿಸ್ ಕಡಿಮೆ ಮಾಡಿಕೊಳ್ಳಲು ನಿತ್ಯ ಮೊಸರು ತಿನ್ನುವುದು ಒಳಿತು. ಇದು ಎಲುಬಿಗೆ ಒಳಿತು ಮಾಡಿ ಆಸ್ಟಿಯೋಪೋರೋಸಿಸ್ ಸಮಸ್ಯೆ ತಗ್ಗಿಸುತ್ತದೆ. ಹಲ್ಲು ಕೂಡ ಆರೋಗ್ಯದಿಂದ ಇರುತ್ತದೆ. ಇದರಲ್ಲಿ ಕ್ಯಾಲ್ಸಿಯಂ, ಫಾಸ್ಫರಸ್ ಪೋಷಕಾಂಶಗಳು ಹೆಚ್ಚು ಇರುವುದೇ ಇದಕ್ಕೆ ಕಾರಣ.

* ಮೊಸರಿನಲ್ಲಿ ಜಿಂಕ್, ವಿಟಮಿನ್ ಇ ನಂತಹ ಪೋಷಕಾಂಶಗಳು ಅಧಿಕವಾಗಿವೆ. ನಿತ್ಯ ಮೊಸರು ಸೇವಿಸುವುದರಿಂದ ಚರ್ಮವು ತಾಜಾತನದಿಂದ ಹೊಳೆಯುತ್ತದೆ. ತೂಕವನ್ನು ಸಮಸ್ಥಿತಿಯಲ್ಲಿಡಲು ಇದು ಸಹಾಯಕ.

* ಮೊಸರು ತಿಂದರೆ ಕೊಬ್ಬಿನಂಶ ಹೆಚ್ಚುತ್ತದೆ ಎಂದು ಭಯಪಡುವವರು, ಬೆಣ್ಣೆ ನೀಗಿದ ಹಾಲಿನ ಮೊಸರು ತಿನ್ನಬಹುದು. ಕ್ಯಾಲೋರಿಗಳ ಭಯವಿಲ್ಲದೆ ಪೋಷಕಾಂಶಗಳನ್ನು ಪಡೆಯಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read