HomeHealthಕೆಟ್ಟ ಕೊಬ್ಬು ಕರಗಿಸುತ್ತೆ ʼಸೂರ್ಯಕಾಂತಿ ಬೀಜʼ

ಕೆಟ್ಟ ಕೊಬ್ಬು ಕರಗಿಸುತ್ತೆ ʼಸೂರ್ಯಕಾಂತಿ ಬೀಜʼ

ಸೂರ್ಯಕಾಂತಿ ಹೂವು ಎಂದೊಡನೆ ತಕ್ಷಣ ನೆನಪಿಗೆ ಬರುವುದು ಸನ್ ಫ್ಲವರ್ ಆಯಿಲ್. ಇದನ್ನು ಎಣ್ಣೆಯ ರೂಪದಲ್ಲಿ ಅಲ್ಲ, ಬದಲಿಗೆ ಬೀಜರೂಪದಲ್ಲಿ ಸೇವಿಸಿದರೆ ಹೆಚ್ಚು ಪ್ರಯೋಜನ ಹೊಂದಬಹುದು.

ಈ ಬೀಜಗಳಲ್ಲಿ ವಿಟಮಿನ್ ಇ, ಪಾಸ್ಪರಸ್, ಸೆಲಿನಿಯಂ ನಂತಹ ಅಪರೂಪದ ವಿಟಮಿನ್ ಖನಿಜಗಳು ಇವೆ. ಇದರಿಂದ ಫ್ಯಾಟಿ ಆಮ್ಲಗಳು, ನಾರಿನಾಂಶ, ಅಮೈನೊ ಆಮ್ಲ, ಬಿ ವಿಟಮಿನ್ ಸಹ ಪುಷ್ಕಳವಾಗಿ ದೊರಕುತ್ತದೆ. ಅವು ಉರಿಯನ್ನು ತಗ್ಗಿಸುವುದರೊಂದಿಗೆ ಅನೇಕ ಕಾಯಿಲೆಗಳನ್ನು ತಡೆಗಟ್ಟುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮುಖ್ಯವಾಗಿ ಇದರಲ್ಲಿನ ಫ್ಯಾಟಿ ಆಮ್ಲಗಳು ಎ, ಡಿ, ಇ, ಕೆ ವಿಟಮಿನ್ ಗಳು ಉತ್ಪತ್ತಿಯಾಗಲು ಸಹಾಯಕ. ಇದರಲ್ಲಿರುವ ವಿಟಮಿನ್ ಇ ಅದ್ಭುತವಾದ ಅಸಿಡಿಟಿ ಆಕ್ಸಿಡೆಂಟ್ ನಂತೆ ಕಾರ್ಯನಿರ್ವಹಿಸುತ್ತದೆ.

* ಸೂರ್ಯಕಾಂತಿ ಬೀಜಗಳು ಆಮ್ಲೀಯ ಒತ್ತಡವನ್ನು ಕಡಿಮೆ ಮಾಡುವುದರ ಮೂಲಕ ಹಾನಿಕಾರಕ ಫ್ರೀ ರಾಡಿಕಲ್ ಬಿಡುಗಡೆಗೆ ಅಡ್ಡಿ ಉಂಟು ಮಾಡುತ್ತದೆ. ಅದರಿಂದಾಗಿ ಹೃದ್ರೋಗದಂತಹ ಸಮಸ್ಯೆ ಬರದಂತಾಗುತ್ತದೆ.

* ಇದರಲ್ಲಿರುವ ಸೆಲಿನಿಯಾ ಥೈರಾಯಿಡ್ ಕಾಯಿಲೆಗಳನ್ನು ತಡೆಗಟ್ಟುತ್ತದೆ.

* ಸೂರ್ಯಕಾಂತಿ ಬೀಜಗಳಲ್ಲಿರುವ ಮೆಗ್ನೇಶಿಯಂ ಬಿಪಿಯನ್ನು ನಿಯಂತ್ರಿಸುವುದರ ಜೊತೆಗೆ ತಲೆನೋವು, ಮಲಬದ್ಧತೆ, ಆಲಸಿಕೆ, ಖಿನ್ನತೆ, ಆತಂಕವನ್ನು ಕಡಿಮೆ ಮಾಡಲು ಸಹಕಾರಿ.

* ಇದರಲ್ಲಿ ಪಾಂಟೋಥನಿಕ್ ಆಮ್ಲ ಹೆಚ್ಚಾಗಿರುತ್ತದೆ. ಇದು ಜೈವಿಕ ಕ್ರಿಯೆಯ ವೇಗಕ್ಕೆ, ಹಾರ್ಮೋನ್ ಸಮತೋಲನಕ್ಕೆ, ಮೆದುಳಿನ ಕಾರ್ಯತತ್ಪರತೆ ಸುಗಮ ಮಾಡಲಿಕ್ಕೆ ಸಹಾಯಮಾಡುತ್ತದೆ.

* ಅಷ್ಟೇ ಅಲ್ಲದೆ ಬೀಜಗಳು ಇನ್ಸುಲಿನ್ ತಡೆಗಟ್ಟಲು ಸಹಾಯ ಮಾಡುತ್ತಾ ಮಧುಮೇಹ ಬಾರದಂತೆ ಮಾಡುತ್ತದೆ.

* ಚರ್ಮದ ಆರೋಗ್ಯವನ್ನು ರಕ್ಷಿಸುತ್ತದೆ. ಕೂದಲ ಬೆಳವಣಿಗೆಗೆ ಸಹಕಾರಿ. ಆದ್ದರಿಂದ ಇದನ್ನು ಸಲಾಡ್, ಖಾದ್ಯಗಳಲ್ಲಿ, ಬ್ರೆಡ್, ಕೇಕ್ ಗಳಲ್ಲಿ ಉಪಯೋಗಿಸಲಾಗುತ್ತದೆ. ಇಲ್ಲದಿದ್ದರೆ ಪುಡಿಯ ರೂಪದಲ್ಲಿ ಉಪಯೋಗಿಸುವುದಕ್ಕೆ ಆದ್ಯತೆ ನೀಡಬಹುದು.

For Latest News Updates, Join Our Whatsapp Community🚩
RELATED ARTICLES

Most Popular