alex Certify ʼಮಾನಸಿಕ ಆರೋಗ್ಯʼದ ಸಮತೋಲನವನ್ನು ಕಾಪಾಡಲು ಪಾಲಿಸಿ ಈ ಸಲಹೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಮಾನಸಿಕ ಆರೋಗ್ಯʼದ ಸಮತೋಲನವನ್ನು ಕಾಪಾಡಲು ಪಾಲಿಸಿ ಈ ಸಲಹೆ

ನಿಮ್ಮ ದೈಹಿಕ ಆರೋಗ್ಯದಷ್ಟೇ ಮುಖ್ಯವಾದದ್ದು ಮಾನಸಿಕ ಆರೋಗ್ಯ. ಆದ್ದರಿಂದ ನಿಮ್ಮ ನಿತ್ಯದ ಬದುಕಿನ ಕೆಲವು ಅಭ್ಯಾಸಗಳು ನಿಮ್ಮ ಮಾನಸಿಕ ಸಮತೋಲನವನ್ನು ಕಾಪಾಡಬಹುದು.

ನಿಯಮಿತ ವ್ಯಾಯಾಮ

ಪ್ರತಿನಿತ್ಯ ವ್ಯಾಯಾಮದಿಂದ ನಿಮ್ಮ ದೈಹಿಕ ಆರೋಗ್ಯವನ್ನಷ್ಟೆ ಅಲ್ಲ, ಮಾನಸಿಕ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು. ಧ್ಯಾನವು ನಿಮ್ಮೊಳಗಿನ ಒತ್ತಡವನ್ನು ಹೋಗಲಾಡಿಸುತ್ತದೆ. ಮೆದುಳಿನ ಚಟುವಟಿಕೆಗಳನ್ನು ಹೆಚ್ಚಿಸುತ್ತದೆ.

ಸಾಮಾಜಿಕವಾಗಿ ಬೆರೆಯಿರಿ

ಸಾಧ್ಯವಾದಷ್ಟು ಸಾಮಾಜಿಕವಾಗಿ ನಿಮ್ಮನ್ನು ತೆರೆದುಕೊಳ್ಳಿ. ಜನರ ಜೊತೆ ಹೆಚ್ಚು ಬೆರೆಯಿರಿ. ಒಂಟಿಯಾಗಿದ್ದಷ್ಟು ನಿಮ್ಮನ್ನು ಏಕಾಂಗಿತನ ಕಾಡುತ್ತದೆ. ಬೇಡದ ನೋವುಗಳು ಕಿರುಕುಳ ಕೊಡುವುದು ಇದೇ ಸಮಯದಲ್ಲಿ ಎಂಬುದು ನೆನಪಿರಲಿ.

ಹೊರಾಂಗಣ ಚಟುವಟಿಕೆಯಲ್ಲಿ ತೊಡಗಿ

ಮನೆಯ ವಾತಾವರಣದಲ್ಲಿ ಹೆಚ್ಚು ಹೊತ್ತು ಸಮಯ ಕಳೆಯುವ ಬದಲು ಹೊರಾಂಗಣದಲ್ಲಿ ಪ್ರಕೃತಿಯೊಂದಿಗೆ ನಿಮ್ಮನ್ನು ತೆರೆದುಕೊಳ್ಳಿ. ವಾಕ್‌ ಮಾಡಿ. ಆಟ ಆಡಿ.

ಇಷ್ಟದ ಚಟುಟವಿಕೆಯಲ್ಲಿ ಪಾಲ್ಗೊಳ್ಳಿ

ನಿಮ್ಮ ಕೆಲಸದ ಒತ್ತಡದ ನಡುವೆಯೂ ನಿಮಗೆ ಖುಷಿ ಕೊಡುವ ಹವ್ಯಾಸದಲ್ಲಿ ತೊಡಗಿ. ಇದು ನಿಮಗೆ ರಿಲ್ಯಾಕ್ಸ್‌ ಫೀಲ್‌ ನೀಡುತ್ತದೆ.
ನಗು ಇರಲಿ.

ಎಷ್ಟೇ ಕಷ್ಟವಿದ್ದರೂ ನಗುವುದನ್ನು ಮರೆಯಬೇಡಿ. ನಗು ಕೂಡ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಚಿಕಿತ್ಸೆಯಾಗಿ ಕೆಲಸ ಮಾಡುತ್ತದೆ.
ಹೊಸತು ಕಲಿಯಿರಿ.

ನೀವು ಏನಾದರೂ ಹೊಸತನ್ನು ಕಲಿತಾಗ ನಿಮಗೆ ಸಿಗುವ ಖುಷಿಯೇ ಬೇರೆ. ಪ್ರತಿ ನಿತ್ಯ ನಿಮ್ಮ ವೈಯಕ್ತಿಕ ಬದುಕು ಅಥವಾ ಕೆಲಸದಲ್ಲಾದರೂ ಸರಿಯೇ ಹೊಸತನ್ನು ಕಲಿತುಕೊಳ್ಳಿ. ಆಗ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...