HomeIndiaಪ್ರವಾಸಿಗರನ್ನು ಸೆಳೆಯುವ ಸ್ಥಳ 'ಕೋವಲಂ ಬೀಚ್'

ಪ್ರವಾಸಿಗರನ್ನು ಸೆಳೆಯುವ ಸ್ಥಳ ‘ಕೋವಲಂ ಬೀಚ್’

ದೇವರ ಸ್ವಂತ ನಾಡು ಎಂದೇ ಕರೆಯಲ್ಪಡುವ ಕೇರಳ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದೆ.ಸಮುದ್ರ ತೀರ, ತೆಂಗು, ಒಳನಾಡು ಜಲಸಾರಿಗೆ, ತೇಲುವ ಹೋಟೆಲ್ ಹೀಗೆ ಹಲವು ಸ್ಥಳಗಳು ಪ್ರವಾಸಿಗರನ್ನು ಸೆಳೆಯುತ್ತವೆ. ಪ್ರವಾಸಿಗರನ್ನು ಸೆಳೆಯುವ ಸ್ಥಳಗಳಲ್ಲಿ ಕೋವಲಂ ಕೂಡ ಒಂದಾಗಿದೆ.

ಕೇರಳದ ರಾಜಧಾನಿ ತಿರುವನಂತಪುರಂನಿಂದ 16 ಕಿಲೋ ಮೀಟರ್ ದೂರದಲ್ಲಿ ಕೋವಲಂ ಇದೆ. ತಿರುವನಂತಪುರಂವರೆಗೆ ವಿಮಾನ, ರೈಲಿನ ಸೌಲಭ್ಯ ಇದೆ. ವೈವಿಧ್ಯತೆಗಳಿಂದ ಕೂಡಿರುವ ಕೋವಲಂ ಬೀಚ್ ನಲ್ಲಿ ಈಜು, ಸೂರ್ಯಸ್ನಾನ, ಗಿಡಮೂಲಿಕೆ ಮಸಾಜ್, ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಹಾರಯಾನ ಮೊದಲಾದವು ಪ್ರವಾಸಿಗರನ್ನು ಸೆಳೆಯುತ್ತವೆ. ಪ್ರಾಕೃತಿಕ ಸೌಂದರ್ಯ ವೀಕ್ಷಣೆ ಮಾಡಬಹುದು, ಸಮುದ್ರ ತೀರದಲ್ಲಿನ ಆರೋಗ್ಯಧಾಮಗಳಿಗೆ ಭೇಟಿ ಕೊಡಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದರೊಂದಿಗೆ ಸ್ಥಳೀಯ ಪ್ರವಾಸಿ ಕೇಂದ್ರದಲ್ಲಿ ಮಾಹಿತಿ ಪಡೆದು ಹತ್ತಿರದ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಬಹುದಾಗಿದೆ. ತಿರುವನಂತಪುರಂನಲ್ಲಿ ವಸ್ತುಸಂಗ್ರಹಾಲಯ, ಆರ್ಟ್ ಗ್ಯಾಲರಿ, ಸಮೀಪದಲ್ಲಿ ಪದ್ಮನಾಭ ಸ್ವಾಮಿ ದೇವಾಲಯ, ಪೊನ್ಮುಡಿ ಗಿರಿಧಾಮ ನೋಡಬಹುದಾದ ಸ್ಥಳಗಳಾಗಿವೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular