ಅನೇಕರು ಕಪ್ಪು ದಾರವನ್ನು ಕಾಲಿಗೆ ಅಥವಾ ಕುತ್ತಿಗೆಗೆ ಕಟ್ಟಿಕೊಳ್ತಾರೆ. ಕಪ್ಪು ದಾರ ಕೆಟ್ಟ ಕಣ್ಣು ಹಾಗೂ ನಕಾರಾತ್ಮಕ ಶಕ್ತಿಯಿಂದ ರಕ್ಷಣೆ ನೀಡುತ್ತದೆ. ಹಾಗೆ ಕಪ್ಪು ಬಣ್ಣದ ಬಟ್ಟೆ ಧರಿಸುವುದು ಹಾಗೂ ಕಪ್ಪು ಬಣ್ಣದ ಬಳಕೆ ಅಶುಭವೆನ್ನುವ ನಂಬಿಕೆಯೂ ಇದೆ. ಆದ್ರೆ ಕೆಟ್ಟ ದೃಷ್ಟಿ ವಿಚಾರ ಬಂದಾಗ ಜನರು ಕಪ್ಪು ದಾರದ ಮೊರೆ ಹೋಗ್ತಾರೆ.
ಕಪ್ಪು ದಾರದಲ್ಲಿ ನಿಗೂಢ ಶಕ್ತಿಗಳು ಅಡಗಿವೆ ಎಂದು ನಂಬಲಾಗಿದೆ. ಕೆಲ ಧರ್ಮಪುರಾಣದಲ್ಲಿ ಇದ್ರ ಬಗ್ಗೆ ಹೇಳಲಾಗಿದೆ. ವ್ಯಕ್ತಿ ಮೇಲೆ ಕೆಟ್ಟ ದೃಷ್ಟಿ ಬಿದ್ದಿದ್ದರೆ ಆತನ ಕೊರಳಿಗೆ ಅಥವಾ ಕಾಲಿಗೆ ಕಪ್ಪು ದಾರವನ್ನು ಕಟ್ಟಬೇಕು. ವ್ಯಕ್ತಿಯಲ್ಲಿರುವ ನಕಾರಾತ್ಮಕ ಶಕ್ತಿ ದೂರವಾಗಿ ಸಕಾರಾತ್ಮಕ ಶಕ್ತಿ ಪ್ರಭಾವ ಹೆಚ್ಚಾಗುತ್ತದೆ.
ಕಪ್ಪು ಬಣ್ಣ ಶಕ್ತಿಯನ್ನು ಹೀರಿಕೊಳ್ಳುತ್ತದೆ. ವ್ಯಕ್ತಿಗೆ ಕವಚದ ರೀತಿಯಲ್ಲಿ ಕಪ್ಪು ದಾರ ಭದ್ರತೆ ನೀಡುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಕಪ್ಪು ಬಣ್ಣಕ್ಕೆ ಮಹತ್ವವಿದೆ. ಯಾರ ಜಾತಕದಲ್ಲಿ ಶನಿಯ ಪ್ರಭಾವ ಹೆಚ್ಚಿದೆಯೋ ಅವ್ರು ಕಪ್ಪು ದಾರವನ್ನು ಧರಿಸಬೇಕಂತೆ. ಇದು ಶನಿದೋಷದಿಂದ ರಕ್ಷಣೆ ನೀಡುತ್ತದೆ.
ಆರ್ಥಿಕ ಸ್ಥಿತಿಯನ್ನು ಸುಧಾರಿಸಲೂ ಕಪ್ಪು ದಾರವನ್ನು ಧರಿಸಲಾಗುತ್ತದೆ. ಕಪ್ಪು ದಾರವನ್ನು ಧಾರಣೆ ಮಾಡಿದ ವ್ಯಕ್ತಿ ಮೇಲೆ ಲಕ್ಷ್ಮಿಯ ಕೃಪೆಯಿರುತ್ತದೆಯಂತೆ.
ಮಂಗಳವಾರ ಅಥವಾ ಶನಿವಾರದ ದಿನ ಕಪ್ಪು ದಾರವನ್ನು ತೆಗೆದುಕೊಂಡು ಹನುಮಂತನ ದೇವಸ್ಥಾನಕ್ಕೆ ಹೋಗಿ. ಮಂದಿರದಲ್ಲಿ ಉಳಿದವರ ಕಣ್ಣು ತಪ್ಪಿಸಿ ದಾರಕ್ಕೆ 9 ಗಂಟು ಹಾಕಿ. ಹನುಮಂತನ ಕಾಲಿನ ಬಳಿಯಿರುವ ಸಿಂಧೂರವನ್ನು ದಾರಕ್ಕೆ ಹಾಕಿ. ಇದನ್ನು ಮನೆಗೆ ತಂದು ಮನೆಯ ಮುಖ್ಯ ದ್ವಾರಕ್ಕೆ ಕಟ್ಟಿ.