alex Certify ನಿಮ್ಮ ʼಪತಿʼ ನಿಮ್ಮ ಮಾತನ್ನು ಕೇಳಬೇಕೆಂದರೆ ಹೀಗೆ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ʼಪತಿʼ ನಿಮ್ಮ ಮಾತನ್ನು ಕೇಳಬೇಕೆಂದರೆ ಹೀಗೆ ಮಾಡಿ

ಮನೆಯಲ್ಲಿನ ಕೆಲವು ಋಣಾತ್ಮಕ ಶಕ್ತಿಗಳಿಂದ ಗಂಡ-ಹೆಂಡತಿಯರಲ್ಲಿ ಕಲಹ ವೈಮನಸ್ಸು ಮೂಡುತ್ತದೆ. ಋಣಾತ್ಮಕ ಶಕ್ತಿಗಳು ಮನೆಯಲ್ಲಿ ಹೇಗೆ ಪ್ರವೇಶಿಸುತ್ತದೆ ಎಂದರೆ ನಮ್ಮಲ್ಲಿನ ದೈನಂದಿನ ಚಟುವಟಿಕೆಗಳು ಮುಖ್ಯ ಕಾರಣವಾಗುತ್ತವೆ.

ಬೆಳಿಗ್ಗೆ ಬೇಗನೆ ಏಳದಿರುವುದು ಮತ್ತು ಮನೆಯ ಶುಚಿತ್ವ ಕಾಪಾಡದಿರುವುದು ನಿಮ್ಮಲ್ಲಿನ ಸೋಮಾರಿತನ, ಆಲಸ್ಯತನ ಇಂತಹವುಗಳು ಹೆಚ್ಚಾಗಿ ಬರಲು ನೀವು ನಿಮ್ಮಲ್ಲಿನ ಕಳೆ, ಆಕರ್ಷಣೆಗಳನ್ನು ಕಳೆದುಕೊಳ್ಳಬಹುದು. ಇದರಿಂದ ನಿಮ್ಮ ಪತಿಯು ನಿಮ್ಮನ್ನು ಅಲಕ್ಷಿಸಬಹುದು ಇನ್ನೂ ಇತರ ಕಾರಣಗಳಿಂದಲೂ ಸಹ ನಿಮ್ಮ ಪತಿ ನಿಮ್ಮ ಮಾತು ಕೇಳದಂತೆ ಇರಬಹುದು.

ಏನೇ ಇರಲಿ ಇದಕ್ಕೆ ಪರಿಹಾರ ತುಂಬಾ ಸುಲಭ. ಮನೆಯಲ್ಲಿ ತುಂಬಾ ಚಿಕ್ಕದಾಗಿರುವ ಅಂದರೆ ಸುಮಾರು ನಮ್ಮ ಹೆಬ್ಬೆಟ್ಟಿನ ಗಾತ್ರಕ್ಕಿಂತಲೂ ಕಡಿಮೆ ಇರುವ ಗಣಪನನ್ನು ದೇವರ ಕೋಣೆಯಲ್ಲಿ ಇಡಿ. ಇದು ಮಣ್ಣಿನಿಂದ ಮಾಡಿದ್ದರೆ ಇನ್ನೂ ಉತ್ತಮ. ಪ್ರತಿ ಮಂಗಳವಾರದಂದು ಗರಿಕೆಯನ್ನಿಟ್ಟು ಪೂಜಿಸಿ.
ಹೀಗೆ 9 ಮಂಗಳವಾರ ನೀವು ನಡೆದುಕೊಂಡರೆ ನಿಮ್ಮ ಪತಿ ನಿಮ್ಮ ಆಜ್ಞೆ ಪಾಲಿಸುವಂತವನಾಗುತ್ತಾರೆ.

ಇದರ ಜೊತೆಗೆ ನಿಮ್ಮಲ್ಲಿನ ಸೋಮಾರಿತನವನ್ನು ಬಿಡಬೇಕು. ಮನೆಯನ್ನು ಸುಂದರವಾಗಿ ಹಾಗೂ ಶುಚಿಯಾಗಿ ಇಡುವುದು ಸೂಕ್ತ. ಇಂತಹ ಕ್ರಿಯೆಯಿಂದ ಯಾವುದೇ ಋಣಾತ್ಮಕ ಶಕ್ತಿಗಳು ಒಳಗೆ ಬರಲಾರದು. ಪತಿ-ಪತ್ನಿ ಅನ್ಯೋನ್ಯತೆಯಿಂದ ಇರಬಹುದಾಗಿದೆ. ಪೂಜಾ ಕಾರ್ಯವನ್ನು ಒಮ್ಮೆ ಪ್ರಯತ್ನಿಸಿ ನೋಡಿ ಫಲಿತಾಂಶ ಖಂಡಿತವಾಗಿ ಬರುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...