ಕಲ್ಲಂಗಡಿ ಹಣ್ಣು ನಮ್ಮ ದೇಹವನ್ನು ಹೊರಗಿನ ಬೇಗೆಯಿಂದ ತಣಿಸುತ್ತದೆ. ಈ ರಸಭರಿತ ಹಣ್ಣು ನಮ್ಮ ದೇಹವನ್ನು ಒಳಗಿನಿಂದ ಅಷ್ಟೇ ಅಲ್ಲದೆ ಹೊರಗಿನಿಂದಲೂ ಪುನರುಜ್ಜೀವನಗೊಳಿಸುತ್ತದೆ.
ಇದರ ಹೆಚ್ಚಿನ ನೀರಿನ ಅಂಶವು ನಮ್ಮ ಚರ್ಮವನ್ನು ಪೋಷಿಸುತ್ತದೆ ಮತ್ತು ಮೃದುವಾಗಿಸುತ್ತದೆ.
ಅತಿಯಾದ ಸೂರ್ಯನ ಬೆಳಕಿನ ಪರಿಣಾಮ ನಮ್ಮ ಚರ್ಮವು ಮೆಲನಿನ್ ಅನ್ನು ಉತ್ಪತ್ತಿ ಮಾಡುತ್ತದೆ. ಅದು ನಮ್ಮ ಚರ್ಮ ಗಾಢ ಬಣ್ಣ ಹೆಚ್ಚುವಂತೆ ಮಾಡುತ್ತದೆ. ಇದಕ್ಕೆ ಕಲ್ಲಂಗಡಿ ರಸ ಉತ್ತಮ ಪರಿಹಾರ ನೀಡುವುದರಲ್ಲಿ ಎರಡು ಮಾತಿಲ್ಲ.
ಬಳಸುವುದು ಹೇಗೆ ?
* ಕಲ್ಲಂಗಡಿ ರಸ ಮತ್ತು ಜೇನುತುಪ್ಪವನ್ನು ಸಮಾನವಾಗಿ ತೆಗೆದುಕೊಂಡು ಮಿಶ್ರಣ ಮಾಡಿಕೊಳ್ಳಬೇಕು.
* ಮಿಶ್ರಣ ಹಚ್ಚುವ ಮೊದಲು ಚರ್ಮವನ್ನು ತಣ್ಣನೆಯ ನೀರಿನಿಂದ ತೊಳೆಯಬೇಕು.
* ನಂತರ ಮುಖ, ಕುತ್ತಿಗೆ ಮತ್ತು ಟ್ಯಾನ್ ಆದ ಭಾಗಕ್ಕೆ ಈ ಮಿಶ್ರಣ ಹಚ್ಚಿ 30 ನಿಮಿಷಗಳ ಕಾಲ ಹಾಗೇ ಬಿಡಬೇಕು.
* ಬಳಿಕ ತಣ್ಣನೆಯ ನೀರಿನಿಂದ ತೊಳೆಯಬೇಕು.
* ವಾರದಲ್ಲಿ ಎರಡು ಮೂರು ಬಾರಿ ಈ ರೀತಿ ಮಾಡಿದರೆ ಉತ್ತಮ ಪ್ರಯೋಜನ ಪಡೆದುಕೊಳ್ಳಬಹುದು.