ಎಲ್ಲವನ್ನೂ ತನ್ನತ್ತ ಸೆಳೆಯುವ ಶಕ್ತಿ ಪ್ರೀತಿಗಿದೆ. ಕೋಪ, ಅಸಮಾಧಾನವನ್ನು ದೂರ ಮಾಡಿ ಪ್ರೀತಿ ಇಬ್ಬರ ಮಧ್ಯೆ ಸದಾ ಇರಬೇಕೆಂದ್ರೆ ಮಲಗುವ ಕೋಣೆಯನ್ನು ಸರಿಯಾಗಿ ಸಿಂಗರಿಸಬೇಕಾಗುತ್ತದೆ. ಮಲಗುವ ಕೋಣೆ ವಾಸ್ತು ದೋಷ ದಾಂಪತ್ಯದ ಮುನಿಸಿಗೆ ಮುಖ್ಯ ಕಾರಣವಾಗುತ್ತದೆ.
ಮಲಗುವ ಕೋಣೆಯಲ್ಲಿ ರಾಧಾ-ಕೃಷ್ಣ, ಜೋಡಿ ಹಕ್ಕಿಯ ಪ್ರಣಯದ ಫೋಟೋಗಳನ್ನು ಇಡಬೇಕು. ಈ ಫೋಟೋಗಳು ಸದಾ ತಲೆ ಬದಿಯಲ್ಲಿರಬೇಕು. ಕಾಲಿನ ಕೆಳಗೆ ಇರಬಾರದು.
ಅಮವಾಸ್ಯೆಯ ದಿನ ಕಪ್ಪು ಎಳ್ಳನ್ನು ತೆಗೆದುಕೊಂಡು ಕೋಣೆಯ ವಾಯುವ್ಯ ಭಾಗಕ್ಕೆ ಹಾಕಿ. ಬೆಳಿಗ್ಗೆ ಎದ್ದ ತಕ್ಷಣ ಮರದ ಬುಡಕ್ಕೆ ಹಾಕಿ.
ಮಲಗುವ ಕೋಣೆಯ ಕಿಟಕಿ ಬಾಗಿಲು ಬೇರೆ ಕೋಣೆ ಕಡೆ ತೆರೆದುಕೊಳ್ಳದಂತಿರಲಿ. ಹಾಗೆ ಕಿಟಕಿ ಬಳಿಯೇ ಬೆಡ್ ಇರದಂತೆ ನೋಡಿಕೊಳ್ಳಿ.
ಬೆಳ್ಳಿ ಪಾತ್ರೆಯಲ್ಲಿ ಕರ್ಪೂರವನ್ನು ಹಾಕಿ, ಅದ್ರ ಹೊಗೆಯನ್ನು ಬೆಡ್ ರೂಮಿಗೆ ತೋರಿಸಿ. ಇದು ಪ್ರೀತಿ ಹೆಚ್ಚಿಸುವ ಕೆಲಸ ಮಾಡುತ್ತದೆ.
ಬೆಡ್ ರೂಮಿನ ಹೊದಿಕೆ ಅಥವಾ ಹಾಸಿಗೆ ಗುಲಾಬಿ ಬಣ್ಣದಲ್ಲಿರಲಿ. ಗುಲಾಬಿ ಬಣ್ಣ ಪ್ರೀತಿ ಹೆಚ್ಚಿಸುವ ಕೆಲಸ ಮಾಡುತ್ತದೆ.
ದಕ್ಷಿಣ ಅಥವಾ ಪೂರ್ವ ದಿಕ್ಕಿಗೆ ತಲೆಯಿಟ್ಟು ಮಲಗಿ. ಪತ್ನಿ ಯಾವಾಗ್ಲೂ ತನ್ನ ಗಂಡನ ಎಡಭಾಗಕ್ಕೆ ಮಲಗಬೇಕು.
ಮಲಗುವ ಕೋಣೆಯ ಪಶ್ಚಿಮ ದಿಕ್ಕಿಗೆ ಬಾತ್ ರೂಂ ಇರಲಿ. ಕೋಣೆಯ ಮಧ್ಯ ಭಾಗದಲ್ಲಿ ಮಂಚವಿರಲಿ.