ಲೈಂಗಿಕ ಜೀವನ ಹಾಳಾಗಲು ಅನೇಕ ಕಾರಣಗಳಿವೆ. ಸೆಕ್ಸ್ ಲೈಫ್ ಸ್ವಾದ ಕಳೆದುಕೊಳ್ಳಲು ಆರೋಗ್ಯ ಕೂಡ ಮಹತ್ವದ ಪಾತ್ರ ವಹಿಸುತ್ತದೆ. ಕೆಲವೊಂದು ಖಾಯಿಲೆಗಳು ಸೆಕ್ಸ್ ಲೈಫ್ ಹಾಳಾಗುವಂತೆ ಮಾಡುತ್ತದೆ.
ರಕ್ತಹೀನತೆ ನಿಮ್ಮ ಸೆಕ್ಸ್ ಜೀವನದ ಸುಖವನ್ನು ಹಾಳು ಮಾಡೋದ್ರಲ್ಲಿ ಮೊದಲ ಸ್ಥಾನದಲ್ಲಿದೆ. ರಕ್ತಹೀನತೆಯಿಂದ ಬಳಲುವವರು ಶಕ್ತಿ ಕಳೆದುಕೊಳ್ತಾರೆ. ಇದು ಅವ್ರ ಸೆಕ್ಸ್ ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ.
ಸಕ್ಕರೆ ಖಾಯಿಲೆ ಕೂಡ ಇದಕ್ಕೆ ಕಾರಣವಾಗುತ್ತದೆ. ಸಕ್ಕರೆ ಖಾಯಿಲೆ ರಕ್ತದ ಹರಿವಿನ ಮೇಲೆ ಪ್ರಭಾವ ಬೀರುತ್ತದೆ. ಇದು ಪುರುಷರ ಉತ್ತೇಜನವನ್ನು ಕಡಿಮೆ ಮಾಡುತ್ತದೆ.
ರಕ್ತನಾಳದ ಖಾಯಿಲೆ ಮತ್ತು ರಕ್ತದೊತ್ತಡ ಲೈಂಗಿಕ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಪುರುಷರ ಜನನಾಂಗಕ್ಕೆ ರಕ್ತ ಸರಿಯಾಗಿ ಹೋಗುವುದಿಲ್ಲ. ಇದು ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ ಸಮಸ್ಯೆಗೆ ಕಾರಣವಾಗುತ್ತದೆ.
ಸ್ಲಿಪ್ ಡಿಸ್ಕ್, ಬೆನ್ನು ನೋವು ಬೆಡ್ ರೂಮಿನಲ್ಲಿ ನಿಮ್ಮ ಕಾರ್ಯಕ್ಷಮತೆಯನ್ನು ಕಡಿಮೆ ಮಾಡುತ್ತದೆ. ಶೇಕಡಾ 61 ರಷ್ಟು ಮಂದಿ ಬೆನ್ನು ನೋವಿನ ಸಮಸ್ಯೆಯಿಂದಾಗಿ ಸೆಕ್ಸ್ ಎಂಜಾಯ್ ಮಾಡುವುದಿಲ್ಲ.
ಮಹಿಳೆಯರಲ್ಲಿ ಕಾಡುವ ಖಿನ್ನತೆ ಲೈಂಗಿಕ ಸುಖವನ್ನು ಕಿತ್ತುಕೊಳ್ಳುತ್ತದೆ. ಸೆಕ್ಸ್ ನಲ್ಲಿ ಆಸಕ್ತಿ ಕಳೆದುಕೊಳ್ಳುವ ಮಹಿಳೆಯರು ಸಂಭೋಗಕ್ಕೆ ಮನಸ್ಸು ಮಾಡುವುದಿಲ್ಲ.