alex Certify ಖಾಲಿ ಹೊಟ್ಟೆಯಲ್ಲಿ ʼಬಿಸಿ ನೀರುʼ ಕುಡಿದರೆ ಇದೆ ಈ ಲಾಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಖಾಲಿ ಹೊಟ್ಟೆಯಲ್ಲಿ ʼಬಿಸಿ ನೀರುʼ ಕುಡಿದರೆ ಇದೆ ಈ ಲಾಭ

ಆಹಾರವಿಲ್ಲದೆ ಕೆಲ ಕಾಲ ಬದುಕಿದರೂ ನೀರಿಲ್ಲದೇ ಬಹಳ ಕಾಲ ಬದುಕಲು ಸಾಧ್ಯವಿಲ್ಲ. ದೇಹದಲ್ಲಿ ಹೆಚ್ಚು ನೀರಿದ್ದಷ್ಟೂ ಆರೋಗ್ಯವು ಬಲವಾಗಿರುತ್ತದೆ. ಆದ್ರೆ ಬೆಳಗ್ಗೆ ತಣ್ಣನೆಯ ನೀರು ಕುಡಿಯೋ ಬದಲು ಬಿಸಿ ನೀರನ್ನು ಕುಡಿಯುವುದರಿಂದ ಅನೇಕ ಲಾಭಗಳನ್ನು ಪಡೆಯಬಹುದು.

* ಬೆಳಗಿನ ಸಮಯ ಬಿಸಿ ನೀರನ್ನು ಕುಡಿಯುವುದರಿಂದ ದೇಹದ ಹೆಚ್ಚುವರಿ ತೂಕ ಕಡಿಮೆಯಾಗುತ್ತದೆ.

* ದೇಹದಲ್ಲಿ ಉಷ್ಣಾಂಶವು ಹೆಚ್ಚಾಗಿ ವಿಷಕಾರಿ ಅಂಶಗಳನ್ನು ಹೊರ ಹಾಕಲು ಬಿಸಿ ನೀರು ಸಹಾಯ ಮಾಡುತ್ತದೆ.

* ರಕ್ತವನ್ನು ಶುದ್ಧೀಕರಿಸಲು ಬಿಸಿ ನೀರಿನ ಸೇವನೆ ಅತ್ಯುತ್ತಮವಾಗಿದೆ.

* ನೆಗಡಿಯಾಗಿ ಗಂಟಲಲ್ಲಿ ಕಫ ಕಟ್ಟಿದ್ದರೆ, ಕಫ ಸಡಿಲವಾಗಿ ನೆಗಡಿಯು ಕಡಿಮೆಯಾಗುತ್ತದೆ.

* ಬಿಸಿ ನೀರಿನೊಂದಿಗೆ ಜೇನು ಮತ್ತು ನಿಂಬೆರಸ ಬೆರೆಸಿ ಕುಡಿದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

* ಬಿಸಿ ನೀರಿನಿಂದ ಜೀರ್ಣಕ್ರಿಯೆ ಸರಾಗವಾಗಿ ನಡೆಯುತ್ತದೆ. ದೇಹವು ಪೋಷಕಾಂಶಗಳನ್ನು ಹೀರಿಕೊಳ್ಳಲು ಸುಲಭವಾಗುತ್ತದೆ.

* ಬೆಳ್ಳಂಬೆಳಗ್ಗೆ ಬಿಸಿ ನೀರನ್ನು ಕುಡಿಯುವುದರಿಂದ ಹೊಳೆಯುವ ಹಾಗೂ ನುಣುಪಾದ ಚರ್ಮ ನಿಮ್ಮದಾಗುತ್ತದೆ.

ಈ ಎಲ್ಲಾ ಕಾರಣಗಳಿಂದ ಬಿಸಿ ನೀರನ್ನು ಕುಡಿಯುವುದು ನಮ್ಮ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...