ಹಿಂದೂ ಧರ್ಮದಲ್ಲಿ ದೇವರ ಪೂಜೆಗೆ ಮಹತ್ವದ ಸ್ಥಾನವಿದೆ. ಪ್ರತಿಯೊಬ್ಬರ ಮನೆಯಲ್ಲೂ ದೇವರಿಗಾಗಿ ಒಂದು ಸ್ಥಳ ಮೀಸಲಿರುತ್ತದೆ. ಪ್ರತಿ ದಿನ ಪೂಜೆ ನಡೆಯುತ್ತದೆ. ದೇವರ ಪೂಜೆ ಮೂಲಕ ತಮ್ಮ ಭಾವನೆಗಳನ್ನು ದೇವರಿಗೆ ತಲುಪಿಸುವುದು ಭಕ್ತರ ಕೆಲಸ. ಸೂಕ್ತ ಸಮಯದಲ್ಲಿ, ಸೂಕ್ತ ವಿಧಿ-ವಿಧಾನಗಳ ಮೂಲಕ ಪೂಜೆ ಮಾಡುವುದು ಶುಭಕರ. ಪೂಜೆ ಮಾಡುವ ವೇಳೆ ಗಂಟೆ ಬಾರಿಸಲಾಗುತ್ತದೆ. ಬೆಳಗಿನ ಪೂಜೆಯಿರಲಿ ಇಲ್ಲ ಸಂಜೆ ದೀಪ ಹಚ್ಚುವ ವೇಳೆಯಿರಲಿ, ಅನೇಕ ಮನೆಗಳಲ್ಲಿ ಗಂಟೆ ಬಾರಿಸಲಾಗುತ್ತದೆ. ಇದಕ್ಕೆ ಅನೇಕ ಕಾರಣಗಳಿವೆ.
ದೇವಾಲಯವಿರಲಿ ಇಲ್ಲ ಮನೆಯಿರಲಿ ಪೂಜೆ ವೇಳೆ ಗಂಟೆ ಬಾರಿಸಿದ್ರೆ ವಾತಾವರಣ ಶುದ್ಧವಾಗುತ್ತದೆ. ಗಂಟೆ ಧ್ವನಿ ವಾತಾವರಣದಲ್ಲಿ ಕಂಪನವನ್ನುಂಟು ಮಾಡುತ್ತದೆ. ಈ ಕಂಪನ ಬ್ಯಾಕ್ಟೀರಿಯಾ, ವೈರಸ್ ಸೇರಿದಂತೆ ಸೂಕ್ಷ್ಮಜೀವಿಗಳ ನಷ್ಟಕ್ಕೆ ಕಾರಣವಾಗುತ್ತದೆ. ಇದ್ರಿಂದ ಸುತ್ತಮುತ್ತಲ ವಾತಾವರಣ ಶುದ್ಧವಾಗುತ್ತದೆ.
ಯಾರ ಮನೆಯಲ್ಲಿ ಪ್ರತಿ ದಿನ ಗಂಟೆ ಶಬ್ಧ ಕೇಳಿ ಬರುತ್ತದೆಯೋ ಆ ಮನೆ ವಾತಾವರಣ ಶುದ್ಧ ಹಾಗೂ ಪವಿತ್ರವಾಗಿರುತ್ತದೆ. ಗಂಟೆ ಶಬ್ಧ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಿ ಸಕಾರಾತ್ಮಕ ಶಕ್ತಿಯನ್ನು ಸೆಳೆಯುತ್ತದೆ.
ಗ್ರಂಥಗಳ ಪ್ರಕಾರ ಪೂಜೆ ವೇಳೆ ದೇವಸ್ಥಾನ ಅಥವಾ ಮನೆಯಲ್ಲಿ ಗಂಟೆ ಬಾರಿಸಿದ್ರೆ ದೇವಾನುದೇವತೆಗಳು ಜಾಗೃತರಾಗ್ತಾರಂತೆ. ಆಗ ಮಾಡಿದ ಪೂಜೆ ಹೆಚ್ಚು ಫಲ ನೀಡುತ್ತದೆ.
ಗಂಟೆ ಶಬ್ದ ಮನಸ್ಸಿಗೆ ಶಾಂತಿ ನೀಡುತ್ತದೆ. ನಿಧಾನವಾಗಿ ಗಂಟೆ ಶಬ್ಧ ಕೇಳಿ ಬರ್ತಿದ್ದರೆ ಮನಸ್ಸು ಶಾಂತಗೊಳ್ಳುತ್ತೆ. ಇದೇ ಕಾರಣಕ್ಕೆ ಮನೆಯಲ್ಲಿ ಪ್ರತಿ ದಿನ ಬೆಳಿಗ್ಗೆ, ಸಂಜೆ ಗಂಟೆ ಬಾರಿಸಬೇಕು ಎನ್ನಲಾಗುತ್ತದೆ.