ಬೆಳ್ಳಗಿನ, ಸುಂದರ ತ್ವಚೆ ಬೇಕೆಂದು ಎಲ್ಲರೂ ಬಯಸ್ತಾರೆ. ಸುಂದರ ಹಾಗೂ ಹೊಳಪುಳ್ಳ ಚರ್ಮ ಬೇಕೆಂದ್ರೆ ಮಾರುಕಟ್ಟೆಯಲ್ಲಿ ಸಿಗುವ ಸೌಂದರ್ಯ ವರ್ಧಕಗಳಿಂದ ಸಾಧ್ಯವಿಲ್ಲ. ನಿಮ್ಮ ದಿನಚರಿ ಹಾಗೂ ನೀವು ಸೇವನೆ ಮಾಡುವ ಆಹಾರ ನಿಮ್ಮ ಚರ್ಮಕ್ಕೆ ಹೊಳಪು ನೀಡುತ್ತದೆ.
ವಯಸ್ಸನ್ನು ಮುಚ್ಚಿಡಲು ಪ್ರತಿಯೊಬ್ಬರೂ ಪ್ರಯತ್ನಿಸುತ್ತಾರೆ. ವಯಸ್ಸು ಹೆಚ್ಚಾದಂತೆ ಬ್ಯೂಟಿಪಾರ್ಲರ್ ಗೆ ಹೋಗುವವರ ಸಂಖ್ಯೆ ಹೆಚ್ಚಾಗುತ್ತದೆ. ಹೆಚ್ಚಾಗ್ತಿರುವ ವಯಸ್ಸು ಮುಚ್ಚಿಟ್ಟುಕೊಳ್ಳಲು ಮೇಕಪ್ ಬದಲು ಡಾರ್ಕ್ ಚಾಕಲೇಟ್ ಮೊರೆ ಹೋಗಿ.
ಡಾರ್ಕ್ ಚಾಕಲೇಟ್ ನಿಮ್ಮ ವಯಸ್ಸು ಮುಚ್ಚಿಡುವ ಕೆಲಸ ಮಾಡುತ್ತದೆ. ಅದ್ರಲ್ಲಿರುವ ಫೋಷಕಾಂಶ ಚರ್ಮದ ಊರಿಯೂತ, ಸುಕ್ಕಿನಿಂತ ರಕ್ಷಿಸುತ್ತದೆ. ಚರ್ಮ ಬೆಳ್ಳಗೆ, ಹೊಳಪು ಪಡೆಯುತ್ತದೆ.
ಸೌತೆಕಾಯಿ ಚರ್ಮದ ಒಳ ಭಾಗವನ್ನು ಸ್ವಚ್ಛಗೊಳಿಸುವ ಕೆಲಸ ಮಾಡುತ್ತದೆ. ಹೊಟ್ಟೆ ಸಮಸ್ಯೆಯನ್ನೂ ಸೌತೆಕಾಯಿ ಗುಣಪಡಿಸುತ್ತದೆ. ಚರ್ಮದ ಸೌಂದರ್ಯವನ್ನು ಇದು ಹೆಚ್ಚಿಸುತ್ತದೆ. ಕಣ್ಣಿನ ಉರಿ ಊತವನ್ನೂ ಇದು ಕಡಿಮೆ ಮಾಡುತ್ತದೆ.
ಕಲ್ಲಂಗಡಿ ಬೇಸಿಗೆ ಹಣ್ಣು. ಚರ್ಮವನ್ನು ಸ್ವಚ್ಛಗೊಳಿಸುವ ಕೆಲಸವನ್ನು ಇದು ಮಾಡುತ್ತದೆ. ಕಲ್ಲಂಗಡಿಯಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದು, ಅದ್ರಲ್ಲಿರುವ ವಿಟಮಿನ್ ಚರ್ಮ ಬೆಳ್ಳಗಾಗಲು ನೆರವಾಗುತ್ತದೆ.
ಆವಕಾಡೊ ಭಾರತೀಯರಿಗೆ ಹೆಚ್ಚು ಪರಿಚಿತವಾಗಿಲ್ಲ. ಇದು ಕೊಬ್ಬಿಲ್ಲದ ಹಣ್ಣು. ಆರೋಗ್ಯಕ್ಕೆ ಇದು ತುಂಬಾ ಒಳ್ಳೆಯದು. ಹೊಟ್ಟೆ, ಸೊಂಟದ ಕೊಬ್ಬನ್ನು ಕಡಿಮೆ ಮಾಡುತ್ತದೆ. ಚರ್ಮವನ್ನು ಸ್ವಚ್ಛಗೊಳಿಸಿ ಹೊಳಪು ನೀಡುವ ಕೆಲಸ ಮಾಡುತ್ತದೆ.