ಪ್ರತಿ ದಿನ ಸ್ನಾನ ಮಾಡದೆ ಹೋದ್ರೆ ಮನಸ್ಸಿಗೆ ಸಮಾಧಾನ ಇರೋದಿಲ್ಲ. ಕೆಲವರು ದಿನಕ್ಕೆ ಎರಡು ಬಾರಿ ಸ್ನಾನ ಮಾಡ್ತಾರೆ. ಪ್ರತಿ ದಿನ ಸ್ನಾನ ಮಾಡಿದ್ರೆ ಮನಸ್ಸು ಉಲ್ಲಾಸಿತಗೊಳ್ಳುವ ಜೊತೆಗೆ ಯಾವುದೇ ಸೋಂಕು ದೇಹವನ್ನು ಅಂಟಿಕೊಳ್ಳುವುದಿಲ್ಲ. ರೋಗ ನಮ್ಮತ್ತ ಸುಳಿಯುವುದಿಲ್ಲ ಎನ್ನುತ್ತಾರೆ ಭಾರತೀಯರು.
ಆದ್ರೆ ಬ್ರಿಟನ್ ವಿಜ್ಞಾನಿಗಳು ಪ್ರತಿನಿತ್ಯದ ಸ್ನಾನದ ಬಗ್ಗೆ ಬೇರೆಯದೇ ವ್ಯಾಖ್ಯಾನ ನೀಡ್ತಾರೆ. ಅವ್ರ ಪ್ರಕಾರ ಪ್ರತಿ ದಿನ ಸ್ನಾನ ಮಾಡಬಾರದಂತೆ. ಪ್ರತಿ ದಿನ ಸ್ನಾನ ಮಾಡಿದ್ರೆ ಆರೋಗ್ಯ ಹದಗೆಡುತ್ತದೆಯಂತೆ. ಸ್ನಾನ ಮಾಡಿದ್ರೆ ದೇಹಕ್ಕೆ ಅವಶ್ಯವಿರುವ ತೈಲದ ಅಂಶ ಕಡಿಮೆಯಾಗುತ್ತದೆಯಂತೆ. ಇದ್ರಿಂದ ಚರ್ಮಕ್ಕೆ ತೊಂದರೆ ಆಗುವ ಸಾಧ್ಯತೆ ಹೆಚ್ಚಂತೆ.
ಐದು ವರ್ಷದ ಪೋರಿಯ ಪೇಟಿಂಗ್ ಜಾಣ್ಮೆಗೆ ನೆಟ್ಟಿಗರು ಫಿದಾ
ಈ ತೊಂದರೆ ಪಾಶ್ಚಿಮಾತ್ಯ ದೇಶಗಳಲ್ಲಿ ಹೆಚ್ಚಾಗಿದೆ. ಅಲ್ಲಿನ ಉಷ್ಣಾಂಶ ಕಡಿಮೆ ಇರುವ ಕಾರಣ ದೇಹ ಬೆವರುವುದಿಲ್ಲ. ಇದ್ರಿಂದ ಚರ್ಮದ ಕೋಶಗಳು ಮುಚ್ಚಿಹೋಗುತ್ತವೆ. ಹಾಗಾಗಿ ಚರ್ಮ ಸಂಬಂಧಿ ರೋಗಗಳು ಕಾಣಿಸಿಕೊಳ್ಳುತ್ತವೆ. ನಿಮಗೂ ಈ ಸಮಸ್ಯೆಯಿದ್ದರೆ ಪ್ರತಿದಿನ ಸ್ನಾನ ಮಾಡುವುದನ್ನು ಬಿಟ್ಟುಬಿಡಿ. ಸ್ನಾನಕ್ಕೂ ಮುಂಚೆ ದೇಹಕ್ಕೆ ಎಣ್ಣೆ ಹಚ್ಚಿ ನಂತರ ಸ್ನಾನ ಮಾಡಿದ್ರೆ ದೇಹ ಆರೋಗ್ಯವಾಗಿ ಇರೋದಷ್ಟೇ ಅಲ್ದೆ ಯಾವುದೇ ಸಮಸ್ಯೆ ಕಾಡುವುದಿಲ್ಲ.