ಜಾಮ್ ಜೊತೆ ಇಲ್ಲ ಸ್ಯಾಂಡ್ವಿಚ್ ಮಾಡಿ ನೀವು ಬ್ರೆಡ್ ತಿಂದಿರುತ್ತೀರಿ. ಈ ಹಿಂದೆ ಬ್ರೆಡ್ ಜಾಮೂನ್ ಮಾಡುವುದು ಹೇಗೆ ಅಂತಾ ನಾವು ಹೇಳಿದ್ವಿ. ಇಂದು ಬ್ರೆಡ್ ನಿಂದ ಬರ್ಫಿ ಕೂಡ ಮಾಡಬಹುದು. ಬಾಯಲ್ಲಿ ನೀರೂರಿಸುವ ಸ್ವೀಟ್ ಬ್ರೆಡ್ ಬರ್ಫಿ ಮಾಡೋದು ಹೇಗೆ ಗೊತ್ತಾ?
ಬ್ರೆಡ್ ಬರ್ಫಿ ಮಾಡಲು ಬೇಕಾಗುವ ಸಾಮಗ್ರಿ :
2 ಕಪ್ ಬ್ರೆಡ್ ನ ತುಂಡು
1 ಕಪ್ ಹಾಲು
1 ಕಪ್ ಒಣ ಕೊಬ್ಬರಿ ತುರಿ
1 ಕಪ್ ಸಕ್ಕರೆ
1 ಕಪ್ ತುಪ್ಪ
15-20 ಬಾದಾಮಿ, ಗೋಡಂಬಿ
ಬ್ರೆಡ್ ಬರ್ಫಿ ಮಾಡುವ ವಿಧಾನ :
ಬ್ರೆಡ್ ಚೂರುಗಳಿಗೆ ಹಾಲು ಹಾಕಿ ಮಿಕ್ಸ್ ಮಾಡಿ 10 ನಿಮಿಷ ಹಾಗೆಯೆ ಬಿಡಿ. ಇನ್ನೊಂದು ಪಾತ್ರೆಗೆ ಒಣ ಕೊಬ್ಬರಿ ತುರಿ, ಸಕ್ಕರೆ ಹಾಕಿ ಬಿಸಿ ಮಾಡಿ. ಸಕ್ಕರೆ ಕರಗಿದ ನಂತ್ರ ಹಾಲಿನಲ್ಲಿ ಮಿಕ್ಸ್ ಮಾಡಿಟ್ಟ ಬ್ರೆಡ್ಡನ್ನು ಹಾಕಿ. ಸ್ವಲ್ಪ ಸಮಯದ ನಂತ್ರ ತುಪ್ಪ ಹಾಕಿ. ಅದು ಬರ್ಫಿ ಹದಕ್ಕೆ ಬರುವವರೆಗೆ ಕೈ ಆಡಿಸುತ್ತಿರಿ. ನಂತ್ರ ಒಂದು ಪ್ಲೇಟ್ ಗೆ ತುಪ್ಪ ಸವರಿ, ಈ ಮಿಶ್ರಣವನ್ನು ಸುರಿದು, ಅದರ ಮೇಲೆ ಬಾದಾಮಿ, ಗೋಡಂಬಿ ಚೂರುಗಳನ್ನು ಉದುರಿಸಿ. ಈ ಮಿಶ್ರಣ ತಣ್ಣಗಾಗಲು ಬಿಡಿ. ಇದಕ್ಕೆ ನಿಮ್ಮ ಇಷ್ಟದ ಕಲರ್ ಕೂಡ ಹಾಕಿಕೊಳ್ಳಬಹುದು.