ಚಳಿಗಾಲ ಬಂತೆಂದ್ರೆ ಚರ್ಮದ ಸಮಸ್ಯೆ ಶುರುವಾಗುತ್ತದೆ. ತೇವಾಂಶ ಕಳೆದುಕೊಳ್ಳುವ ಚರ್ಮ ಒಣಗಿ ಒಡೆಯುತ್ತದೆ. ತುಟಿಗಳು ಕೂಡ ಬಿರುಕು ಬಿಡುತ್ತದೆ.
ಆರೈಕೆಯಿಲ್ಲದೆ ಕೆಲವರ ತುಟಿಯಿಂದ ರಕ್ತ ಬರುತ್ತದೆ. ಮಾರುಕಟ್ಟೆಯಲ್ಲಿ ತುಟಿಗಳ ಆರೈಕೆಗೆ ಲಿಪ್ ಬಾಮ್ ಗಳು ಸಿಗುತ್ತವೆ. ಪ್ರತಿದಿನ ಇದನ್ನು ಹಚ್ಚಿದ್ರೆ ತುಟಿ ಬಣ್ಣ ಕಳೆದುಕೊಳ್ಳುತ್ತದೆ.
ಇದ್ರ ಬದಲು ಮನೆಯಲ್ಲಿಯೇ ಲಿಪ್ ಬಾಮ್ ತಯಾರಿಸಿಕೊಳ್ಳಬಹುದು. ತೆಂಗಿನ ಎಣ್ಣೆಯಿಂದ ತುಟಿಗೆ ಬಾಮ್ ತಯಾರಿಸುವ ಸುಲಭವಾದ ಮಾರ್ಗ ಇಲ್ಲಿದೆ.
ಬೇಕಾಗುವ ಪದಾರ್ಥ:
ತೆಂಗಿನ ಎಣ್ಣೆ – 1 ಟೀ ಚಮಚ
ಆಲಿವ್ ತೈಲ – 1 ಚಮಚ
ಕಾರ್ನಾಬಾ ಮೇಣ- 1 ಚಮಚ
ಮಾಡುವ ವಿಧಾನ:
ತೆಂಗಿನ ಎಣ್ಣೆ, ಆಲಿವ್ ಎಣ್ಣೆ ಮತ್ತು ಕಾರ್ನಾಬಾ ಮೇಣವನ್ನು ಕರಗಿಸಿ,ಅದನ್ನು ಕಂಟೇನರ್ ನಲ್ಲಿ ಹಾಕಿ ಫ್ರಿಜ್ನಲ್ಲಿ ಇರಿಸಿ. ನಿಮಗೆ ಬೇಕಾದಾಗ ಅದನ್ನು ತುಟಿಗೆ ಹಚ್ಚಿಕೊಳ್ಳಿ.
ಬೇಕಾಗುವ ಪದಾರ್ಥ:
ತೆಂಗಿನ ಎಣ್ಣೆ – 1 ಟೀ ಚಮಚ
ಕಾರ್ನಾಬಾ ಮೇಣ – 1 ಚಮಚ
ಬೆಣ್ಣೆ – 1 ಚಮಚ
ಮಾಡುವ ವಿಧಾನ:
ತೆಂಗಿನ ಎಣ್ಣೆ, ಕಾರ್ನಾಬಾ ಮೇಣ ಮತ್ತು ಬೆಣ್ಣೆಯನ್ನು ಕರಗಿಸಿ ಅದರ ಮಿಶ್ರಣವನ್ನು ಕಂಟೇನರ್ ಗೆ ಹಾಕಿ ಫ್ರಿಜ್ ನಲ್ಲಿಡಿ. ಬೇಕಾದಾಗ ತುಟಿಗಳಿಗೆ ಹಚ್ಚಿ. ಇದು ನಿಮ್ಮ ತುಟಿಗಳನ್ನು ಮೃದುಗೊಳಿಸುವ ಜೊತೆಗೆ ಗುಲಾಬಿ ಬಣ್ಣ ನೀಡುತ್ತದೆ.
ಬೇಕಾಗುವ ಪದಾರ್ಥ:
ತೆಂಗಿನ ಎಣ್ಣೆ – 1 ಟೀ ಚಮಚ
ಜೊಜೊಬಾ ತೈಲ- 5-6 ಹನಿಗಳು
ಮಾಡುವ ವಿಧಾನ:
ತೆಂಗಿನ ಎಣ್ಣೆ ಮತ್ತು ಜೋಜೋಬ ತೈಲದ ಹನಿಗಳನ್ನು ಸೇರಿಸಿ ಬಿಸಿ ಮಾಡಿ. ನಂತರ ಅದನ್ನು ಕಂಟೇನರ್ನಲ್ಲಿ ಇರಿಸಿ ತಣ್ಣಗಾಗಲು ಬಿಡಿ. ತಣ್ಣಗಾದ ನಂತರ ಯಾವಾಗ ಬೇಕಾದರೂ ಬಳಸಬಹುದು. ಇದು ತುಟಿಗಷ್ಟೇ ಅಲ್ಲ ಒಡೆದ ಚರ್ಮ ಕೈಕಾಲುಗಳಿಗೆ ಕೂಡ ಉತ್ತಮ.