ದೀಪಾವಳಿಯಲ್ಲಿ ತಾಯಿ ಲಕ್ಷ್ಮಿ ಪೂಜೆ ಮಾಡುವ ಪದ್ಧತಿಯಿದೆ. ಲಕ್ಷ್ಮಿ ಪೂಜೆಗೆ ಮಾರುಕಟ್ಟೆಯಲ್ಲಿ ಸಾಕಷ್ಟು ಅಲಂಕಾರಿಕ ವಸ್ತುಗಳು ರಾರಾಜಿಸುತ್ತಿವೆ. ಶ್ರದ್ಧಾ ಭಕ್ತಿಯಿಂದ ಲಕ್ಷ್ಮಿ ಪೂಜೆ ಮಾಡಿದ್ರೆ ಫಲ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ.
ದೇವಿ ಲಕ್ಷ್ಮಿಗೂ ಬಣ್ಣಕ್ಕೂ ಸಂಬಂಧವಿದೆ. ದೀಪಾವಳಿಯಲ್ಲಿ ಲಕ್ಷ್ಮಿ ಪೂಜೆ ವೇಳೆ ವಿಶೇಷ ಬಣ್ಣದ ಬಟ್ಟೆ ಧರಿಸಿದ್ರೆ ತಾಯಿ ಪ್ರಸನ್ನಳಾಗ್ತಾಳೆ. ಹಳದಿ ಬಣ್ಣ ಶುಭದ ಸಂಕೇತ. ಆಸೆ, ಖುಷಿ, ಉತ್ಸಾಹವನ್ನು ಹಳದಿ ಬಣ್ಣ ನೀಡುತ್ತದೆ. ದೇವಿ ಲಕ್ಷ್ಮಿ ಪೂಜೆ ವೇಳೆ ಹಳದಿ ಬಟ್ಟೆ ತೊಡುವುದು ಮಂಗಳಕರವೆಂದು ಶಾಸ್ತ್ರದಲ್ಲಿ ಹೇಳಲಾಗಿದೆ.
ಪೂಜೆ ವೇಳೆ ಹಸಿರು ಬಣ್ಣದ ಬಟ್ಟೆಯನ್ನು ಧರಿಸಬಹುದು. ಹಸಿರು ನಂಬಿಕೆ, ಸಮೃದ್ಧಿ ಮತ್ತು ಪ್ರಗತಿಯ ಸಂಕೇತ. ಅದ್ರಲ್ಲೂ ದಟ್ಟ ಹಸಿರಿನ ಬಟ್ಟೆ ತೊಟ್ಟು ಪೂಜೆ ಮಾಡುವುದು ಬಹಳ ಶುಭಕರ.
ದೀಪಾವಳಿ ಲಕ್ಷ್ಮಿ ಪೂಜೆ ವೇಳೆ ಹೊಸ ಬಟ್ಟೆಯನ್ನು ಧರಿಸಿ ಪೂಜೆ ಮಾಡಿ. ಇದು ಸಾಧ್ಯವಾಗದೆ ಹೋದಲ್ಲಿ ಸ್ವಚ್ಛಗೊಳಿಸಿದ ಬಟ್ಟೆಯನ್ನು ಧರಿಸಿ. ಕೊಳಕು ಬಟ್ಟೆಯನ್ನು ಮಾತ್ರ ಧರಿಸಬೇಡಿ.
ಪೂಜೆ ಸಂದರ್ಭದಲ್ಲಿ ಅಪ್ಪಿತಪ್ಪಿಯೂ ಕಪ್ಪು ಬಣ್ಣದ ಬಟ್ಟೆ ಧರಿಸಬೇಡಿ. ಕಪ್ಪು ದುಃಖದ ಸಂಕೇತ. ಪೂಜೆ ವೇಳೆ ಕಪ್ಪು ಬಟ್ಟೆ ಧರಿಸುವುದು ಅಶುಭ ಸಂಕೇತ.