ಸೌಂದರ್ಯ ಹಾಗೂ ಮಹಿಳೆಗೆ ಅವಿನಾಭಾವ ಸಂಬಂಧ. ಸೌದರ್ಯವರ್ದನೆಗೆ ಬ್ಯೂಟಿಪಾರ್ಲರ್ ಗೆ ಹೋಗದ ಹುಡುಗಿಯರಿಲ್ಲ. ದುಬಾರಿ ಹಣ ನೀಡಿ ಶೂನ್ಯ ಫಲಿತಾಂಶ ಪಡೆಯುವ ಬದಲು ಮನೆಯಲ್ಲಿರುವ ವಸ್ತುಗಳನ್ನು ಬಳಸಿಕೊಂಡೇ ಸೌಂದರ್ಯ ಹೆಚ್ಚಿಸಿಕೊಳ್ಳಬಹುದು .ಡಾರ್ಕ್ ಸ್ಕಿನ್, ಒಣ ಚರ್ಮ ಮುಂತಾದ ಸಮಸ್ಯೆಗಳಿಗೆ ಇಲ್ಲಿದೆ ಮನೆ ಮದ್ದು.
ಶುಂಠಿ, ತುಳಸಿ ಮತ್ತು ಪುದೀನ ಎಲೆಗಳ ಪೇಸ್ಟ ಮಾಡಿ ನಿಂಬೆ ರಸ ಮಿಶ್ರಣ ಮಾಡಿ ಮುಖದ ಮೇಲೆ ಫೇಸ್ ಪ್ಯಾಕ್ ರೀತಿ ಹಾಕುವುದರಿಂದ ಮುಖದ ಮೇಲಿನ ಕಲೆಗಳು ಮಾಯವಾಗುತ್ತವೆ.
ಬಾದಾಮಿ ಮತ್ತು ಪಪ್ಪಾಯಿ ಪೇಸ್ಟ್ನಲ್ಲಿ ಅರಿಶಿನ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿರಿ. ಪಪ್ಪಾಯದ ಒಣಗಿದ ಸಿಪ್ಪೆ ಮತ್ತು ಗ್ಲಿಸರಿನ್ ಮಿಶ್ರಣ ಸೇರಿಸಿ ಮುಖದ ಮೇಲೆ ಸ್ಕ್ರಬ್ ಮಾಡುವುದರಿಂದ ಕೂಡ ಮುಖ ಹೆಚ್ಚು ಕಾಂತಿಯುಕ್ತವಾಗಿ ಕಾಣುತ್ತದೆ.
ಮುಲ್ತಾನಿ ಮಿಟ್ಟಿ ಅತ್ಯಂತ ಅಗ್ಗದ ಚರ್ಮದ ಸೌಂದರ್ಯವರ್ಧಕವೆಂದು ಪರಿಗಣಿಸಲಾಗಿದೆ. ಮುಲ್ತಾನಿ ಮಿಟ್ಟಿ, ಆಲಿವ್ ಎಣ್ಣೆ ಮತ್ತು ರೋಸ್ ವಾಟರ್ ಪ್ಯಾಕ್ ಅನ್ನು ಮನೆಯಲ್ಲೇ ತಯಾರಿಸಿ ಮುಖಕ್ಕೆ ಹಚ್ಚಿ. ಮುಲ್ತಾನಿ ಮಿಟ್ಟಿ ಚರ್ಮದ ರಂಧ್ರಗಳಲ್ಲಿ ಅಡಗಿರುವ ಧೂಳು ಮತ್ತು ಬ್ಯಾಕ್ಟೀರಿಯಾ ಹೊರತೆಗೆಯುತ್ತದೆ.
ಬಾದಾಮಿ ತೈಲ, ಜೇನುತುಪ್ಪ, ಸೌತೆಕಾಯಿ ಮತ್ತು ಆಲೂಗೆಡ್ಡೆ ರಸವನ್ನು ಸೇರಿಸಿ ಕಣ್ಣಿನ ಕೆಳಗೆ ಅಪ್ಲೈ ಮಾಡಿ. ಕಣ್ಣಿನ ಕೆಳಗಿನ ಭಾಗದ ಕಪ್ಪುಕಲೆ ಇದ್ರಿಂದ ಮಾಯವಾಗುತ್ತದೆ. ಕಣ್ಣು ಹಾಗು ಮುಖದ ಕಾಂತಿ ಹೆಚ್ಚುತ್ತದೆ.