ಆಚಾರ್ಯ ಚಾಣಕ್ಯ ತಮ್ಮ ನೀತಿಯಲ್ಲಿ ಮಹಿಳೆಯರ ಬಗ್ಗೆ ವಿವರವಾಗಿ ಹೇಳಿದ್ದಾರೆ. ಮಹಿಳೆಯರ ಕೆಲವೊಂದು ನ್ಯೂನ್ಯತೆಗಳನ್ನು ಚಾಣಕ್ಯ ಹೇಳಿದ್ದಾರೆ. ಈ ನ್ಯೂನ್ಯತೆಗಳನ್ನು ಮೆಟ್ಟಿ ನಿಂತಲ್ಲಿ ಮಹಿಳೆಯರು ಶೀಘ್ರ ಯಶಸ್ಸು ಗಳಿಸಬಹುದೆಂದು ಅವ್ರು ಹೇಳಿದ್ದಾರೆ.
ಧೈರ್ಯಶಾಲಿಯಾಗಿರುವುದು ಒಳ್ಳೆ ಸಂಗತಿ. ಆದ್ರೆ ಅತಿಯಾದ್ರೆ ಅಮೃತವೂ ವಿಷವಾಗುತ್ತದೆ. ಹಾಗಾಗಿ ಅತಿ ಧೈರ್ಯ ಪ್ರದರ್ಶನ ಒಳ್ಳೆಯದಲ್ಲ. ಇದನ್ನು ಮಹಿಳೆಯರು ಮರೆಯುತ್ತಾರೆಂದು ಚಾಣಕ್ಯ ಹೇಳಿದ್ದಾರೆ.
ಮಹಿಳೆಯರು ವ್ಯವಸ್ಥಿತವಾಗಿ ಖರ್ಚು ಮಾಡ್ತಾರೆ. ಈ ಬುದ್ದಿ ಹುಟ್ಟಿನಿಂದಲೇ ಬಂದಿರುತ್ತದೆ. ಆದ್ರೆ ಇದು ಅತಿಯಾದ್ರೂ ಕಷ್ಟ. ಅತಿಯಾಸೆ ಒಳ್ಳೆಯದಲ್ಲ. ದುರಾಶೆಗೆ ಒಳಗಾಗುವ ಮಹಿಳೆಯರು ತಪ್ಪು ಮಾಡುವುದು ಹೆಚ್ಚು.
ಸಣ್ಣ ಸಣ್ಣ ವಿಚಾರಕ್ಕೂ ಕೋಪ ಅಥವಾ ಸೊಕ್ಕು ತೋರಿಸುತ್ತಾರೆ ಹೆಚ್ಚಿನ ಹುಡುಗಿಯರು. ಇದು ಕೂಡ ಒಳ್ಳೆಯದಲ್ಲ. ಇದು ಮಹಿಳೆಯರ ಇಮೇಜ್ ಹಾಳು ಮಾಡುತ್ತದೆ.
ಚಾಣಕ್ಯನ ಪ್ರಕಾರ ಪೂರ್ವಾಪರ ಯೋಚನೆ ಮಾಡದೆ ಮಹಿಳೆಯರು ಮಾತನಾಡುತ್ತಾರಂತೆ. ಅವ್ರ ಮಾತು ಅವ್ರಿಗೆ ಮುಂದೆ ಆಪತ್ತು ತರುವ ಸಾಧ್ಯತೆಯಿರುತ್ತದೆಯಂತೆ.