alex Certify ವಾಸ್ತು ಶಾಸ್ತ್ರದ ಪ್ರಕಾರ ಮನೆಯೊಳಗೆ ಗಂಗಾ ಜಲ ಇಡುವುದರ ಹಿಂದಿದೆ ಈ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಸ್ತು ಶಾಸ್ತ್ರದ ಪ್ರಕಾರ ಮನೆಯೊಳಗೆ ಗಂಗಾ ಜಲ ಇಡುವುದರ ಹಿಂದಿದೆ ಈ ಕಾರಣ

ನಮ್ಮ ಮನೆ ನಮಗೆ ಪ್ರೀತಿ. ಆದ್ರೆ ಹೃದಯಕ್ಕೆ ಹತ್ತಿರವಾದ ಮನೆಯಲ್ಲಿ ನಕಾರಾತ್ಮಕ ಅಂಶ ಪ್ರವೇಶ ಮಾಡಿದರೆ ಸಂತೋಷದ ಗೂಡು ದುಃಖಮಯವಾಗುತ್ತದೆ. ನಿಮ್ಮ ಮನೆಯಲ್ಲಿಯೂ ಸಕಾರಾತ್ಮಕ ಅಂಶಕ್ಕಿಂತ ನಕಾರಾತ್ಮಕ ಅಂಶ ಜಾಸ್ತಿ ಇದ್ದರೆ ಈ ನಿಯಮಗಳನ್ನು ಪಾಲಿಸಿ, ಮನೆಯಲ್ಲಿರುವ ಸಮಸ್ಯೆಯನ್ನು ಹೊಡೆದೋಡಿಸಿ.

ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಂದೆ ನೇಮ್ ಪ್ಲೇಟ್ ಇರಬೇಕು. ಈ ನೇಮ್ ಪ್ಲೇಟ್ ನೋಡಿ ಮನೆಗೆ ಪ್ರವೇಶ ಮಾಡುವ ವ್ಯಕ್ತಿ ಧನಾತ್ಮಕ ಅಂಶವನ್ನು ತನ್ನೊಂದಿಗೆ ತೆಗೆದುಕೊಂಡು ಬರ್ತಾನೆ. ಇದರಿಂದಾಗಿ ಮನೆ ನಂದನವನವಾಗುತ್ತದೆ.

ದೀಪ, ಲೈಟ್ ಅಥವಾ ಯಾವುದೇ ಬೆಳಕು ನೀಡುವ ವಸ್ತುವನ್ನು ಬೆಳಗ್ಗೆ, ಸಂಜೆ ಅನವಶ್ಯಕವಾಗಿ ಉರಿಸಬೇಡಿ. ಇದರಿಂದ ನಕಾರಾತ್ಮಕ ಶಕ್ತಿ ಪ್ರವೇಶವಾಗುತ್ತದೆ.

ಮನೆಯ ಬೆಡ್ ರೂಂನಲ್ಲಿ ಯಾವುದೇ ಕಾರಣಕ್ಕೂ ಕನ್ನಡಿಯನ್ನು ಇಡಬೇಡಿ. ಅತ್ಯವಶ್ಯಕವಾಗಿದ್ದಲ್ಲಿ ಡ್ರೆಸ್ಸಿಂಗ್ ಟೇಬಲ್ ಅಥವಾ ಕಪಾಟಿನಲ್ಲಿರುವ ಕನ್ನಡಿಯನ್ನು ಬೆಡ್ ರೂಂ ನಲ್ಲಿಟ್ಟುಕೊಳ್ಳಿ. ವಾಸ್ತು ಪ್ರಕಾರ ಬೆಡ್ ರೂಂನಲ್ಲಿ ಕನ್ನಡಿ ಇಡುವುದು ಒಳ್ಳೆಯದಲ್ಲ. ಇದರಿಂದ ಆರೋಗ್ಯ ಸಮಸ್ಯೆ ಹಾಗೂ ವಿವಾದಗಳು ಕಾಣಿಸಿಕೊಳ್ಳುತ್ತವೆ.

ಮನೆಯಲ್ಲಿ ಗಂಗಾ ಜಲ ಇಡುವುದಾದರೆ ಕತ್ತಲೆಯಲ್ಲಿ ಇಡಬೇಡಿ. ಒಂದೇ ಸ್ಥಳದಲ್ಲಿ ಇಡುವುದು ಒಳ್ಳೆಯದಲ್ಲ. ಗಂಗಾ ಜಲದಲ್ಲಿ ಸಕಾರಾತ್ಮಕ ಅಂಶ ಹೊರಬರುವುದರಿಂದ ಆಗಾಗ ಬೇರೆ ಬೇರೆ ಕೋಣೆಯಲ್ಲಿ ಗಂಗಾ ಜಲವನ್ನಿಡಿ.

ಪೂರ್ವ ಹಾಗೂ ಪಶ್ಚಿಮದಿಂದ ಸೂರ್ಯನ ಬೆಳಕು ಮನೆ ಪ್ರವೇಶ ಮಾಡುವಂತೆ ಮನೆಯನ್ನು ಕಟ್ಟಿಕೊಳ್ಳಿ. ಹಾಗೆ ಮಾಡಿದಲ್ಲಿ ಧನಾತ್ಮಕ ಶಕ್ತಿ ಶಾಶ್ವತವಾಗಿರುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...