ಬೆಳಕಿಗೆ ನಮ್ಮ ಜೀವನದಲ್ಲಿ ಮಹತ್ವದ ಸ್ಥಾನವಿದೆ. ಬೆಳಕಿಲ್ಲದೆ ಜೀವನ ಮಾಡೋದು ಕಷ್ಟ ಎಂದ್ರೆ ಅತಿಶಯೋಕ್ತಿಯಾಗಲಾರದು. ಭಗವಂತ ಸೂರ್ಯನನ್ನು ಬೆಳಕಿನ ಮೂಲವೆಂದು ಕರೆಯಲಾಗಿದೆ. ಹಿಂದೂ ಧರ್ಮದಲ್ಲಿ ನಂಬಿಕೆಯಿಡುವವರು ಶ್ರದ್ಧಾ-ಭಕ್ತಿಯಿಂದ ಸೂರ್ಯದೇವನ ಪೂಜೆ ಮಾಡ್ತಾರೆ.
ಮನೆಯಲ್ಲಿ ಬೆಳಗುವ ಕರೆಂಟ್ ರಾತ್ರಿ ಕತ್ತಲಲ್ಲಿ ನಮಗೆ ಬೆಳಕು ನೀಡುತ್ತದೆ. ಕರೆಂಟ್ ಇಲ್ಲವಾದ್ರೆ ಜಗತ್ತು ನಡೆಯೋದು ಕಷ್ಟ. ಅನೇಕ ಕೆಲಸಗಳು ಅರ್ಧಕ್ಕೆ ನಿಂತು ಹೋಗುತ್ತವೆ. ಈ ಕರೆಂಟ್ ನಲ್ಲೂ ಶುಭ-ಅಶುಭ ಅಡಗಿದೆ ಎಂಬುದು ನಿಮಗೆ ಗೊತ್ತಾ?
ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಮುಖ್ಯ ದ್ವಾರ ಎಂದೂ ಕತ್ತಲಾಗಿರಬಾರದು. ಮುಖ್ಯ ದ್ವಾರದಲ್ಲಿ ಬೆಳಕಿಲ್ಲವಾದ್ರೆ ಮನೆಯಲ್ಲಿ ಅಶುಭ ಘಟನೆಗಳು ನಡೆಯುವ ಸಾಧ್ಯತೆ ಹೆಚ್ಚಿರುತ್ತದೆ. ಕುಟುಂಬಸ್ಥರ ಭಾಗ್ಯ ಕೂಡ ದುರ್ಬಲವಾಗುತ್ತದೆ. ಮನೆಯಲ್ಲಿ ಸುಖ-ಶಾಂತಿ ಕಡಿಮೆಯಾಗುತ್ತದೆ.
ಮನೆಯ ಸದಸ್ಯರ ಮಧ್ಯೆ ಮಾತು-ಮಾತಿಗೂ ಗಲಾಟೆ, ಜಗಳ ನಡೆಯುತ್ತದೆ. ಮನೆಯ ಮುಖ್ಯ ದ್ವಾರದಲ್ಲಿ ಹಾಕಿರುವ ಬಲ್ಬ್ ಹಾಳಾದ್ರೆ ತಕ್ಷಣ ಬದಲಾಯಿಸಿ. ಈ ವಿಚಾರದಲ್ಲಿ ನೀವು ಆಲಸ್ಯ ಮಾಡಿದ್ರೆ ನಷ್ಟವನ್ನು ನೀವೇ ಅನುಭವಿಸಬೇಕಾಗುತ್ತದೆ.
ಮನೆಯ ಮೆಟ್ಟಿಲುಗಳಿಗೂ ಸದಾ ಬೆಳಕಿರುವಂತೆ ನೋಡಿಕೊಳ್ಳಬೇಕು. ಮೆಟ್ಟಿಲಿನ ಬಳಿ ಕತ್ತಲೆ ಆವರಿಸಿದ್ದರೆ ನಕಾರಾತ್ಮಕ ಶಕ್ತಿ ಮನೆ ಪ್ರವೇಶ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಮನೆಯ ಸದಸ್ಯರ ಸಕಾರಾತ್ಮಕತೆ ದೂರವಾಗುತ್ತದೆ. ಸಣ್ಣ ಸಣ್ಣ ವಿಚಾರವೂ ದೊಡ್ಡ ಸಮಸ್ಯೆಯಾಗಿ ಕಾಡುತ್ತದೆ.
ಕುಟುಂಬಸ್ಥರ ಫೋಟೋ ಮೇಲೆ ಕರೆಂಟ್ ಇರುವಂತೆ ನೋಡಿಕೊಳ್ಳಬೇಕು. ಹೀಗೆ ಮಾಡಿದಲ್ಲಿ ಮನೆಯಲ್ಲಿ ಗಲಾಟೆ ನಡೆಯುವುದಿಲ್ಲ. ಕುಟುಂಬಸ್ಥರ ಮಧ್ಯೆ ಪ್ರೀತಿ ವೃದ್ಧಿಯಾಗುತ್ತದೆ.